ಹಾಡಿ ಮಕ್ಕಳಿಗೆ ಉಚಿತ ಉಡುಗೆ ನೀಡಿ ನೂತನ “ಮ್ಯಾಕ್ಸ್ ಫ್ಯಾಷನ್” ಶೋ ರೂಂ ಚಾಲನೆ

ಮೈಸೂರು: ಮ್ಯಾಕ್ಸ್‌ ಫ್ಯಾಷನ್ಸಂಸ್ಥೆಯು ಬುಡಕಟ್ಟು ಸಮುದಾಯದ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸುವ ಮೂಲಕ ದಸರಾ-ದೀಪಾವಳಿ ಹಬ್ಬದ ವಿಶೇಷ ಮಾರಾಟಕ್ಕೆ ಚಾಲನೆ ನೀಡಿತು.
ಎಚ್‌.ಡಿ. ಕೋಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯದ ಹಿರಾ ಹಾಡಿಯ 10 ಮಕ್ಕಳಿಗೆ ಚಲನಚಿತ್ರ ನಟಿ ನಿಶ್ವಿಕಾ ನಾಯ್ಡು ಬಟ್ಟೆಗಳನ್ನು ವಿತರಿಸಿದರು. ಇದೇ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ್ದ ಮಕ್ಕಳು ಸಂಭ್ರಮಿಸಿದರು.


ಮ್ಯಾಕ್ಸ್‌ ಫ್ಯಾಷನ್ಲುಕ್ಬುಕ್ಅನಾವರಣ ಮಾಡಿ ಮಾತನಾಡಿದ ನಟಿ ನಿಶ್ವಿಕಾ ನಾಯ್ಡು, ಮ್ಯಾಕ್ಸ್‌ ಫ್ಯಾಷನ್ಶೋರೂಂನಲ್ಲಿ  ಅದ್ಭುತವಾದ ಡಿಸೈನ್ಗಳಿವೆ. ಎಲ್ಲರ ಬಜೆಟ್ಗೆ ಅನುಕೂಲವಾಗುವಂತೆ ಉತ್ತಮ ಶ್ರೇಣಿಯ ಬಟ್ಟೆಗಳು ಲಭ್ಯವಿದೆ. ಒಂದೇ ಶೋರೂಂನಲ್ಲಿ ಕುಟುಂಬದ ಎಲ್ಲರಿಗೂ ಬಟ್ಟೆಗಳನ್ನು ಖರೀದಿಸಬಹುದು ಎಂದರು.
ಮ್ಯಾಕ್ಸ್‌
ಫ್ಯಾಷನ್
ಸಂಸ್ಥೆಯ ಉಪಾಧ್ಯಕ್ಷ ಪ್ರಶಾಂತ್ಪಾಲ್ಮಾತನಾಡಿ, ಫ್ಯಾಷನ್ಅನ್ನು ಎಲ್ಲರಿಗೂ ಅಂತರ್ಗತ ಮತ್ತು ಆನಂದದಾಯಕ ಅನುಭವವನ್ನಾಗಿ ಮಾಡಲು ಬಹಳ ಶ್ರದ್ಧೆ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿದ್ದೇವೆ. ಕೈಗೆಟುಕುವ ದರದಲ್ಲಿ ನವ ನವೀನ ಶೈಲಿಯ ಉತ್ಪನ್ನಗಳನ್ನು ನೀಡುತ್ತಿದ್ದೇವೆ ಎಂದು ನುಡಿದರು.
ಆಪರೇಷನ್ಮುಖ್ಯಸ್ಥ ಸತ್ಯ ನಂದಾ ಇದ್ದರು
.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು