ಡಾ.ಎಚ್.ಆರ್.ಕೃಷ್ಣಯ್ಯಗೌಡರಿಗೆ ಶ್ರೀ ಮರಿದೇವೇಗೌಡ ಸ್ಮಾರಕ ಜನಸೇವಾ ಪ್ರಶಸ್ತಿ

ಪಾಂಡವಪುರ : ಮೈಸೂರು ವಿಭಾಗದ ಸಹಕಾರ ಸಂಘಗಳ ನಿವೃತ್ತ ಜಂಟಿ ನಿಬಂಧಕ ಡಾ.ಎಚ್.ಆರ್.ಕೃಷ್ಣಯ್ಯಗೌಡರಿಗೆ ಸಹಕಾರಿ ಧುರೀಣ ಶ್ರೀ ಮರಿದೇವೇಗೌಡ ಸ್ಮಾರಕ 2ನೇ ವರ್ಷದ ಜನಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಟ್ಟಣದ ಅನ್ನಪೂರ್ಣ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಜಾನಪದ ತಜ್ಞ ಕ್ಯಾತನಹಳ್ಳಿ ರಾಮಣ್ಣ ಮತ್ತಿತರ ಗಣ್ಯರು ಡಾ.ಎಚ್.ಆರ್.ಕೃಷ್ಣಯ್ಯಗೌಡರಿಗೆ 10 ಸಾವಿರ ರೂ.ನಗದು, ಪ್ರಶಸ್ತಿ ಫಲಕ, ಶಾಲು, ಫಲ ತಾಂಬೂಲ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ತಾಲ್ಲೂಕಿನ ಸಹಕಾರ ಮತ್ತು ಇತರೆ ಕೇತ್ರದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಪ್ರಜಾರಾಜಕಾರಣ ಮಾಡಿರುವ ಮರಿದೇವೇಗೌಡ ವ್ಯಕ್ತಿತ್ವ ಎಂತಹದು ಎಂದು ಇಲ್ಲಿ ಸೇರಿರುವ ನೂರಾರು ಜನರ ಮುಖದಲ್ಲಿ ನಾನು ಕಾಣುತ್ತಿದ್ದೇನೆ. ಮಾಜಿ ವಿದೇಶಾಂಗ ಸಚಿವರಾದ ಎಸ್.ಎಂ.ಕೃಷ್ಣ ಅವರು ಮರಿದೇವೇಗೌಡರ ಬಗ್ಗೆ ಇಷ್ಟೋಂದು ಒಳ್ಳೆಯ ಮಾತುಗಳನ್ನು ಆಡಿದ್ದಾರೆ ಎಂದರೆ ನಾವು ಮರಿದೇವೇಗೌಡ ಎಂತಹ ಪ್ರಾಮಾಣಿಕ ರಾಜಕಾರಣಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಈಡೇರಿಸಲು, ಸಮಾಜವನ್ನು ಮುನ್ನಡೆಸಲು ಇಂತಹ ರಾಜಕಾರಣಗಳು ನಮಗೆ ಅವಶ್ಯಕ ಎಂದರು.
ಕೊಮ್ಮೇರಹಳ್ಳಿ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಸಮಾಜವನ್ನು ಅತ್ಯಂತ ಪ್ರಾಮಾಣಿಕವಾಗಿ ಮುನ್ನಡೆಸಲು ಮರಿದೇವೇಗೌಡರಂತಹ ರಾಜಕಾರಣಿಗಳು, ಸಹಕಾರಿ ಧುರೀಣರ ಅವಶ್ಯಕತೆ ಇದೆ ಎಂದು ಹೇಳಿದರು.
ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಮಾತನಾಡಿ, ಮರಿದೇವೇಗೌಡರು ಪಾಂಡವಪುರ ತಾಲ್ಲೂಕಿನಲ್ಲಿ ಸಾಕಷ್ಟು ಉತ್ತಮ ಕೆಲಸಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುವುದರ ಮೂಲಕ ತಾಲ್ಲೂಕಿನ ಜನತೆಯ ಅಪಾರ ಪ್ರೀತಿ ಗಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿವೃತ್ತ ಪ್ರಾಂಶುಪಾಲ ನೀ.ಗಿರೀಗೌಡ, ಜಾನಪದ ತಜ್ಞ ಕ್ಯಾತನಹಳ್ಳಿ ರಾಮಣ್ಣ, ಸಹಕಾರಿ ಧುರೀಣ ಕೆ.ಬಿ.ನರಸಿಂಹೇಗೌಡ, ರೈತಸಂಘದ ವರಿಷ್ಠ ನಾಯಕಿ ಸುನಿತಾ ಪುಟ್ಟಣ್ಣಯ್ಯ, ಮರಿದೇವೇಗೌಡರ ಪುತ್ರ ಶ್ರೀಕಾಂತ್ ಮುಂತಾದವರು ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ಮರಿದೇವೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ವೇದಿಕೆಯಲ್ಲಿದ್ದ ಎಲ್ಲ ಗಣ್ಯರನ್ನು ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್, ಶ್ರೀಕಾಂತ್, ಡಾ.ಶ್ರೀಧರ್ ಗೌರವಿಸಿದರು.
ಕಾರ್ಯಕ್ರಮದಲ್ಲಿ ಸುಶೀಲಮ್ಮ ಮರಿದೇವೇಗೌಡ, ಡಾ.ಬೋರೇಗೌಡ ಚಿಕ್ಕಮರಳಿ, ಪ್ರೊ.ಡಿ.ಕೆ.ದೇವೇಗೌಡ, ಪ್ರೊ.ಜೆ.ವೀರೇಗೌಡ, ಡಾ.ಎಂ.ಮಾಯೀಗೌಡ, ಮುಖಂಡರಾದ ಚಿಕ್ಕರಾಮಂಜೇಗೌಡ, ಕೆ.ವೈರಮುಡಿಗೌಡ, ಎಸ್.ವಾಸುದೇವ್, ಸುಷ್ಮ, ಸಿ.ಎಂ.ಶ್ರೀನಾಥ್, ಜ್ಯೋತಿ, ಡಾ.ಎಂ.ಕೆ.ಶಿಲ್ಪಶ್ರೀ, ಸಿ.ಎಂ.ಪೂರ್ಣಿಮಾ, ಅಜಯ್ ದೇವ್, ವಿಜೇಂದ್ರಮೂರ್ತಿ, ಗುಣಶೇಖರ್, ಧನ್ಯಕುಮಾರ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಜಯರಾಮ್, ಜಯಪ್ರಕಾಶ್‍ಗೌಡ, ವಾಗೀಶ್ ಚಂದ್ರಗುರು ಮುಂತಾದವರು ಇದ್ದರು
.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು