ಜಾತಿ ಗಣತಿ ವರದಿ ಬಿಡುಗಡೆಗೆ ಅಹಿಂದಾ ಮುಖಂಡ ಬಸವರಾಜು ಆಗ್ರಹ
ಅಕ್ಟೋಬರ್ 09, 2023
ಪತ್ರಕರ್ತರ ಮೇಲಿನ ದಾಳಿ ಖಂಡನೀಯ
ಮೈಸೂರು : ಜಾತಿ ಗಣತಿ ವರದಿ ಬಿಡುಗಡೆ ಮಾಡುವಂತೆ ಅಹಿಂದಾ ವರ್ಗಗಳ
ವೇದಿಕೆ ರಾಜ್ಯಾಧ್ಯಕ್ಷ ಎನ್.ಬಸವರಾಜು ಒತ್ತಾಯಿಸಿದ್ದಾರೆ. ಸೋಮವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಜಾತಿ
ಗಣತಿಗೆ ಸಂಬಂಧಿಸಿದಂತೆ ದೇಶದಲ್ಲಿ ಚರ್ಚೆಗಳು ಪ್ರಾರಂಭವಾಗಿವೆ. ವರದಿ ಬಿಡುಗಡೆ ಮಾ ಡುವುದರಿಂದ ತುಳಿತಕ್ಕೆ
ಒಳಪಟ್ಟವರಿಗೆ, ಸಾಮಾಜಿಕ ಅಸಮಾನತೆಯಿಂದ ನೊಂದವರಿಗೆ ಸಮಾನ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಸರ್ಕಾರಕ್ಕೂಒಂದು
ಅಧಿಕೃತ ಸ್ಪಷ್ಟತೆ ದೊರೆಯುತ್ತದೆ ಎಂದರು. ಇಂದಿಗೂ ಸಮಾಜದಲ್ಲಿ ಸಾಮಾಜಿಕ ಅಸಮಾನತೆ ನಾವು ಕಾಣಬಹುದಾಗಿದ್ದು,
ವರದಿ ಬಿಡುಗಡೆ ಮಾಡುವುದರಿಂದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಯಾವ ಜಾತಿಯ ಜನರ ಪರಿಸ್ಥಿತಿ
ಹೇಗಿದೆ. ಅವರ ಬದುಕಿನ ಸ್ಥಿತಿ ಗತಿ ಏನು? ಸಮಾನ ಮತ್ತು ಘನತೆಯ ಬದುಕಿಗಾಗಿ ಸರ್ಕಾರ ಅವರಿಗೆ ಯಾವ
ರೀತಿಯಲ್ಲಿ ನೆರವಾಗಬಹುದು? ಜನರ ಹಕ್ಕುಗಳು ಮತ್ತು ಅವಕಾಶಗಳು ಅವರಿಗೆ ಸರಿಯಾದ ರೀತಿಯಲ್ಲಿ ಹಂಚಿಕೆ
ಆಗಿದೆಯಾ ಎಂಬುದನ್ನು ತಿಳಿದುಕೊಳ್ಳಬಹುದು ಇದರಿಂದ ಸರ್ಕಾರ ಕೂಡಲೇ ವರದಿ ಬಿಡುಗಡೆ ಮಾ ಡಬೇಕೆಂದು
ಅವರು ಒತ್ತಾಯಿಸಿದರು. ಜಾತಿ ಗಣತಿ ವರದಿ ಬಿಡುಗಡೆಯಿಂದ ಜಾತಿ ಜಾತಿಗಳ ನಡುವೆ ಒಡಕು ಮೂಡುತ್ತದೆ
ಎಂಬುದು ಸುಳ್ಳು ಈ ಸುಳ್ಳನ್ನು ಕೆಲವರು ವ್ಯವಸ್ಥಿತವಾಗಿ ಹರಡುತ್ತಿದ್ದಾರೆ. ಜಾತಿ ರಾಜಕೀಯ ಮಾಡುವವರು ಈ ಕೆಲಸ ಮಾಡುತ್ತಿದ್ದಾರೆ. ತಳ ವರ್ಗಗಳ
ಏಳಿಗೆಯ ಕುರಿತು ಆರೋಗ್ಯಕರವಾಗಿ ಚಿಂತಿಸದ ಕೆಲವು ಕೆಟ್ಟ ಮನಸುಗಳು ಜಾತಿ ಗಣತಿಯ ಕುರಿತು ತಪ್ಪಾಗಿ
ಬಿಂಬಿಸಲು ಹೊರಟಿದ್ದು ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು. ಪತ್ರಕರ್ತರಿಗೆ ಸರ್ಕಾರ ಬದಲಿಸುವ ಶಕ್ತಿ ಇದೆ ಇತ್ತೀಚೆಗೆ ನಡೆದ ಪತ್ರಕರ್ತರ ಮೇಲಿನ ದಾಳಿ ಖಂಡನೀಯ. ಇದೊಂದು ‘ಅಘೋಷಿತತುರ್ತುಪರಿಸ್ಥಿತಿ’
ಇದರಿಂದ ಕೇಂದ್ರ ಸರ್ಕಾರ ಮುಂದಿನ ಚುನಾವಣೆಯಲ್ಲಿ ಭಾರಿ ಬೆಲೆ ತೆರಬೇಕಿದೆ. ಪತ್ರಕರ್ತರಿಗೆ
ಸರ್ಕಾರವನ್ನು ಬೀಳಿಸುವ ಶಕ್ತಿ ಇದೆ ಎನ್ನುವುದನ್ನು ಮರೆಯಬಾರದು. ಕೇಂದ್ರ ಸರ್ಕಾರ ಮುಕ್ತಮಾದ್ಯಮವನ್ನುಜೈಲಿಗೆ
ಹಾಕಿದರೆ ಆಡಳಿತಗಾರರನ್ನು ಪ್ರಜಾಪ್ರಭುತ್ವವಾದಿಗಳುಎಂದುಕರೆಯಲು ಸಾಧ್ಯವಿಲ್ಲ. ದೇಶಕ್ಕೆ ಇದೊಂದು ಅಪಾಯದ ಮುನ್ಸೂಚನೆ ಈ ಘಟನೆಯಿಂದಾದರೂ
ಪತ್ರಕರ್ತರು ಒಗ್ಗಟ್ಟಾಗಬೇಕು. ಎನ್.ಬಸವರಾಜು, ರಾಜ್ಯಾಧ್ಯಕ್ಷರು. ಅಹಿಂದ
ವರ್ಗಗಳ ವೇದಿಕೆ.
0 ಕಾಮೆಂಟ್‌ಗಳು