ಆರ್ಯ ಆಸ್ಪತ್ರೆಯಲ್ಲಿ ಅನಗತ್ಯ ವೆಚ್ಚವಿಲ್ಲದೆ ಉತ್ತಮ ಚಿಕಿತ್ಸೆ : ಡಾ.ರಘುನಾಥ್

25ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಆರ್ಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ

ಮೈಸೂರು : ರೋಗಿಗಳಿಗೆ ಯಾವುದೇ ಅನಗತ್ಯ ಪರೀಕ್ಷೆಗಳನ್ನು ಮಾಡದೆ ಎಲ್ಲಾ ರೋಗಗಳಿಗೂ ನುರಿತ ವೈದ್ಯರಿಂದ ಕಡಿಮೆ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚಿಕಿತ್ಸೆ ನೀಡುವ ಮೂಲಕ ಆರ್ಯ ಆಸ್ಪತ್ರೆಯನ್ನು ಜನಸ್ನೇಹಿ ಆಸ್ಪತ್ರೆಯನ್ನಾಗಿಸುತ್ತೇವೆ ಎಂದು ಡಾ.ರಘುನಾಥ್‌ ಹೇಳಿದರು.
ನಗರದ ಕೃಷ್ಣಮೂರ್ತಿಪುರಂನಲ್ಲಿ ನೂತನವಾಗಿ ನಿರ್ಮಿಸಿರುವ ಆರ್ಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಅ.25 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಆಸ್ಪತ್ರೆ ಲೋಕಾರ್ಪಣೆಗೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉಪಸ್ಥಿತರಿದ್ದು, ಮೈಸೂರು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ನವಜಾತ ಶಿಶು ವಿಭಾಗವನ್ನು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್‌.ಸಿ.ಮಹದೇವಪ್ಪ ಶಸ್ತ್ರ ಚಿಕಿತ್ಸಾ ಘಟಕ, ಪಶು ಸಂಗೋಪನಾ ಸಚಿವರಾದ ಕೆ.ವೆಂಕಟೇಶ್‌ ತೀವ್ರ ನಿಗಾ ಘಟಕ, ತ್ರಿಷಿಕಾ ಕುಮಾರಿ ದೇವಿ ಅವರು ಪ್ರಸೂತಿ ವಿಭಾಗವನ್ನು ಉದ್ಘಾಟಿಸಲಿದ್ದು, ಮೇಯರ್‌ ಶಿವಕುಮಾರ್‌ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಅಲ್ಲದೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಟಿ.ಎಸ್‌.ಶ್ರೀವತ್ಸ, ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ, ತನ್ವೀರ್‌ ಸೇಠ್‌, ಮಾಜಿ ಶಾಸಕರಾದ ಎಸ್‌.ಎ.ರಾಮದಾಸ್‌, ಸಾರಾ ಮಹೇಶ್‌, ಡಾ.ಯತೀಂದ್ರ ಸಿದ್ದರಾಮಯ್ಯ, ವಾಸು, ಎಲ್‌.ನಾಗೇಂದ್ರ, ಎಸ್‌.ಕೃಷ್ಣಪ್ಪ, ಎಂ.ಕೆ.ಸೋಮಶೇಖರ್‌, ನಗರಪಾಲಿಕೆ ಸದಸ್ಯರಾದ ಸೌಮ್ಯ ಉಮೇಶ್‌, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪೊಲೀಸ್‌ ಆಯುಕ್ತ ಬಿ.ರಮೇಶ್‌, ಮಹಾನಗರಪಾಲಿಕೆ ಆಯುಕ್ತ ಅಶಾದ್‌ ಉರ್‌ ರಹಮಾನ್‌ ಷರೀಫ್‌, ಜಿಲ್ಲಾ ವೈದ್ಯಾಧಿಕಾರಿ ಡಾ.ಕುಮಾರಸ್ವಾಮಿ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಡಾ.ಟಿ.ಯತಿರಾಜು ಮಾತನಾಡಿ, 100 ಹಾಸಿಗೆಗಳ ಈ ಆಸ್ಪತ್ರೆಯಲ್ಲಿ 15 ರಿಂದ 30 ವರ್ಷ ವೈದ್ಯಕೀಯ ಸೇವೆ ಸಲ್ಲಿಸಿರುವ ನುರಿತ ವೈದ್ಯರು ಸೇವೆ ಸಲ್ಲಿಸಲಿದ್ದು, ವಾರದ ಏಳೂ ದಿನ ಇಪ್ಪತ್ತ ನಾಲ್ಕು ಗಂಟೆಗಳ ಕಾಲ ಈ ಆಸ್ಪತ್ರೆ ಸಾರ್ವಜನಿಕ ಸೇವೆಗೆ ಲಭ್ಯವಿದೆ. ಆಸ್ಪತ್ರೆಯಲ್ಲಿ ಸಾಮಾನ್ಯ ವೈದ್ಯಕೀಯ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ಪ್ರಸೂತಿ, ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು, ಕೀಲು ಮತ್ತು ಮೂಳೆ ತಜ್ಞರು, ಪ್ಲಾಸ್ಟಿಕ್‌ ಸರ್ಜರಿ, ನರರೋಗ, ಕಿಡ್ನಿ, ಮೂತ್ರಕೋಶ, ಕಿವಿ,ಮೂಗು ಮತ್ತು ಗಂಟಲು, ಶ್ವಾಸಕೋಶ, ಉದರ ಮತ್ತು ಜಠರ ರೋಗ ಚಿಕಿತ್ಸೆ, ಸುಸಜ್ಜಿತವಾದ ಎಕ್ಸ್‌ ರೇ, ಅಲ್ಟ್ರಾಸೌಂಡ್‌, ಸಿಟಿ  ಸ್ಕ್ಯಾನಿಂಗ್‌ ಮುಂತಾದ ಸೌಲಭ್ಯಗಳು ಲಭ್ಯವಿದೆ ಎಂದರು.
ಸರ್ಕಾರದ ವಿಮಾ ಯೋಜನೆಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ರೂಪಿಸುತ್ತೇವೆ. ರೋಗಿಗಳಿಗೆ ಮತ್ತು ಪೋಷಕರಿಗೆ ಯಾವುದೇ ರೀತಿಯ ಅನಗತ್ಯ ವೆಚ್ಚಗಳನ್ನ ಮಾಡಿಸದೆ ಕಡಿಮೆ ಖರ್ಚಿನಲ್ಲಿ ಉತ್ತಮ ಸೇವೆ ನೀಡಲು ನಮ್ಮ ಆಸ್ಪತ್ರೆ ವೈದ್ಯರು ಬದ್ಧರಾಗಿದ್ದಾರೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿಡಾ.ಬಿ.ಎಸ್‌.ಲಕ್ಷ್ಮಿಕಾಂತ್‌, ಡಾ.ಎಲ್‌.ಉಮೇಶ್‌, ಡಾ.ಟಿ.ಯತಿರಾಜು, ಡಾ.ಕೆ.ಎನ್‌.ಮಹೇಶ್‌, ಡಾ.ಎಲ್‌.ವಿಜಯ್‌ ಇದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು