ʼಝೆಡ್ ಮಾರ್ಕ್ʼನಿಂದ ಪಾರಂಪರಿಕ ವೃತ್ತಗಳ ಅಲಂಕಾರ ಶ್ಲಾಘನೀಯ : ಶಾಸಕ ಹರೀಶ್ ಗೌಡ

ಮೈಸೂರು : ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ “ಝೆಡ್‌ ಮಾರ್ಕ್‌” ಸಂಸ್ಥೆಯು ನಗರದ ಪ್ರಮುಖ ವೃತ್ತಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಹರೀಶ್‌ ಗೌಡ ಹೇಳಿದರು.

ನಗರದ ಕೆಆರ್‌ ಆಸ್ಪತ್ರೆ ವೃತ್ತದಲ್ಲಿ ಬುಧವಾರ ರಾತ್ರಿ ವಿದ್ಯುತ್‌ ದೀಪಗಳ ಅಲಂಕಾರವನ್ನು ಉದ್ಘಾಟಿಸಿ ಅವರು ಮಾತನಾಡಿ, ವಿಶ್ವ ವಿಖ್ಯಾತ ಮೈಸೂರು ದಸರಾ ಆರಂಭವಾಗಿದ್ದು, ನಗರಕ್ಕೆ ದಿನನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ರಾತ್ರಿ ವೇಳೆ ವಿದ್ಯುತ್‌ ದೀಪಗಳಿಂದ ಝಗಮಗಿಸುವ ಮೈಸೂರು ನಗರವನ್ನು ನೋಡುವುದೇ ಒಂದು ಸೌಭಾಗ್ಯ. ಇಂತಹ ಕಾರ್ಯದಲ್ಲಿ ʼಝೆಡ್‌ ಮಾರ್ಕ್‌ʼ ಸಂಸ್ಥೆಯು ಅತ್ಯಂತ ವೈಭವದ ಅಲಂಕಾರ ಮಾ ಡುತ್ತಿದ್ದು, ಆಯಾ ಕ್ಷೇತ್ರಗಳ ಶಾಸಕರ ಹೆಸರನ್ನೂ ಸಹ ವಿದ್ಯುತ್‌ ದೀಪಗಳಿಂದ ಅಲಂಕರಿಸಿ ಜನತೆಗೆ ಕ್ಷೇತ್ರದ ಬಗ್ಗೆ ಪರಿಚಯ ಮಾಡಿಕೊಡುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ನವೀಕೃತ ಫೌಂಟನ್‌ ವೃತ್ತವನ್ನೂ ಸಹ ಉದ್ಘಾಟನೆ ಮಾಡಲಾಯಿತು.

ಝೆಡ್‌ ಮಾರ್ಕ್‌ ಸಂಸ್ಥೆಯ ಮುಖ್ಯಸ್ಥ ಝುಬೇರ್‌ ಮಾತನಾಡಿ, ವಿದ್ಯುತ್‌ ದೀಪಗಳ ಅಲಂಕಾರ ಕಾರ್ಯದಲ್ಲಿ ನಮ್ಮ ಸಂಸ್ಥೆ ಪ್ರಸಿದ್ಧಿ ಹೊಂದಿದೆ. ರಾಜ್ಯದ ಹಲವಾರು ಸಂಭ್ರಮಗಳಲ್ಲಿ ನಾವು ಭಾಗಿಯಾಗಿದ್ದೇವೆ. ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ನಮಗೆ ಸೂಕ್ತ ಅವಕಾಶ ನೀಡಿದ್ದಲ್ಲಿ ನಮ್ಮ ಕಾರ್ಯ ದಕ್ಷತೆಯನ್ನು ತೋರುತ್ತೇವೆ ಎಂದರು.
ಶಾಸಕ ತನ್ವೀರ್‌ ಸೇಠ್‌, ಮಹಾನಗರಪಾಲಿಕೆ ಆಯುಕ್ತ ಅಶಾದ್‌ ಉರ್‌ ರಹಮಾನ್‌ ಶರೀಫ್‌ ಮುಖಂಡರಾದ ಅಬ್ದುಲ್ಲಾ ಮತ್ತು ಸ್ಥಳೀಯ ನಗರಪಾಲಿಕೆ ಸದಸ್ಯರು ಹಾಜರಿದ್ದರು
.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು