ದನ ತಿನ್ನೊ ಜನ ಅಧಿಕಾರಕ್ಕೆ ಬಂದಿದ್ದಾರೆ : ಶಿವಲಿಂಗೇಗೌಡ ಕಿಡಿ
ಸೆಪ್ಟೆಂಬರ್ 08, 2023
ಪಾಂಡವಪುರ : ದನ ತಿನ್ನೊ ಜನ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ
ಗೋ ಶಾಲೆಗಳನ್ನು ತೆರೆಯುವ ಯೋಜನೆ ಸ್ಥಗಿತ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಮೈ ಶುಗರ್ ಮಾಜಿ ಅಧ್ಯಕ್ಷ
ಶಿವಲಿಂಗೇಗೌಡ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು. ತಮಿಳುನಾಡಿಗೆ ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನೀರು ಹರಿಸುತ್ತಿರುವದನ್ನು
ಖಂಡಿಸಿ ಬಿಜೆಪಿ ಕರೆ ಕೊಟ್ಟಿದ್ದ ಪ್ರತಿಭಟನೆ ಹಾಗೂ ರಸ್ತೆ ತಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತಹಸಿಲ್ದಾರ್
ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಮೈಸೂರಿನ ಸಿದ್ದರಾಮಯ್ಯ ಸಿಎಂ ಮತ್ತು ಕನಕಪುರದ ಡಿ.ಕೆ.ಶಿವಕುಮಾರ್
ಡಿಸಿಎಂ ಆದ ಮೇಲೆ ಬಿಜೆಪಿ ಸರ್ಕಾರ ಜಿಲ್ಲೆಗೊಂದು ಗೋ ಶಾಲೆ ತೆರೆಯುವ ಯೋಜನೆ ಸ್ಥಗಿತ ಮಾಡಿದ್ದಾರೆ.
ಇವರಿಗೆ ಗೋವು ಆಹಾರವಾಗಿ ಕಂಡಿದೆ. ಈ ಕಾರಣದಿಂದ ಗೋ ಶಾಲೆ ಯೋಜನೆ ನಿಲ್ಲಿಸಿದ್ದಾರೆ ಎಂದು ಆಕ್ರೋಶ
ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಿಸಾನ್ ಸಮ್ಮಾನ್
ಯೋಜನೆ ಜಾರಿ ಮಾಡಿ ರೈತರಿಗೆ ವಷಕ್ಕೆ ೬ ಸಾವಿರ ರೂ ಸಹಾಯ ಧನ ನೀಡುತ್ತಿತ್ತು. ರಾಜ್ಯದಲ್ಲಿಯೂ ಅಂದು
ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರದ ೬ ಸಾವಿರ ರೂ. ಜತೆ ರಾಜ್ಯದಿಂದ ೪ ಸಾವಿರ
ರೂ. ನೀಡಿ ಒಟ್ಟು ೧೦ ಸಾವಿರ ರೂ. ರೈತರ ಖಾತೆಗೆ ಜಮೆ ಮಾಡುತ್ತಿದ್ದರು. ಆದರೇ, ಕಾಂಗ್ರೆಸ್ ಸರ್ಕಾರ
ಆಡಳಿತಕ್ಕೆ ಬರುತ್ತಿದ್ದಂತೆ ೪ ಸಾವಿರ ರೂ. ಸ್ಥಗಿತ ಮಾಡಿದೆ. ರೈತರ ಮಕ್ಕಳಿಗೆ ನೀಡುತ್ತಿದ್ದ ಸ್ಕಾಲರ್
ಶಿಪ್ ನಿಲ್ಲಿಸಿದೆ. ಇವರಿಗೆ ಮಾನ ಮರ್ಯಾದೆ ಇಲ್ಲ. ಇದು ರೈತ ವಿರೋಧಿ ಸರ್ಕಾರ. ತಮಿಳುನಾಡು ಸರ್ಕಾರ
ನೀರು ಕೇಳುವ ಮುಂಚೆಯೇ ನೀರು ಬಿಡುತ್ತಿದ್ದಾರೆ. ಕೂಡಲೇ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದರು. ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್ ಮಾತನಾಡಿ, ರಾಜ್ಯ ಸರ್ಕಾರಕ್ಕೆ ರೈತರ ಮೇಲೆ ಕಿಂಚಿತ್ ಕಾಳಜಿ ಇದ್ದರೂ ನೀರು
ಬಿಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ಮನವಿ ಸಲ್ಲಿಕೆಗೂ ಮುನ್ನ ಪಾಂಡವಪುರಪಟ್ಟದಐದುದೀಪವೃತ್ತದಲ್ಲಿಬಿಜೆಪಿಯರೈತಮೋರ್ಚಾ ವತಿಯಿಂದರಸ್ತೆ ತಡೆ ಪ್ರತಿಭಟನೆನಡೆಯಿತು.ಈವೇಳೆ ಬಿಜೆಪಿಯನೂರಾರುಕಾರ್ಯಕರ್ತರುಪಾಲ್ಗೊಂಡು ರಾಜ್ಯಸರ್ಕಾರದವಿರುದ್ಧಘೋಷಣೆಕೂಗಿದರು. ಜತೆಗೆ ಬಿಜೆಪಿ ಆಡಳಿತದಲ್ಲಿ
ರೂಪಿಸಿದ್ದ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರಕೈಬಿಟ್ಟಿರುವಬಗ್ಗೆ ಪಟ್ಟಿಮಾಡಿಕರಪತ್ರಹಂಚಿದರು. ಪ್ರತಿಭಟನೆಯಲ್ಲಿಬಿಜೆಪಿ ತಾಲ್ಲೂಕು ಅಧ್ಯಕ್ಷ
ಸುಡಿಯೋಅಶೋಕ್,ರೈತಮೋರ್ಚಾಅಧ್ಯಕ್ಷ ಕನ್ನಂಬಾಡಿಸುರೇಶ್, ತಾಪಂ ಮಾಜಿ ಸದಸ್ಯೆ ಮಂಗಳನವೀನ್, ಜಕ್ಕನಹಳ್ಳಿಪುರುಷೋತ್ತಮ್, ಕೆನ್ನಾಳುಚಿಕ್ಕಣ್ಣ, ಶ್ರೀನಿವಾಸ್ನಾಯಕ್, ಡೇರಿರಾಮು, ಹೇಮಂತ್,ವಿನಯ್ಸೇರಿದಂತೆ ಹಲವಾರುಜನರು ಭಾಗಿಯಾಗಿದ್ದರು.
0 ಕಾಮೆಂಟ್‌ಗಳು