ಪಾಂಡವಪುರ
: ಭಾನುವಾರ ಸಂಜೆ ಮೈಸೂರಿನಲ್ಲಿ ಶ್ರೀ ಆದಿಚುಂಚನಗಿರಿ ಶಾಖಾ ಮಠದ ನೂತನ ಕಟ್ಟಡ, ಉಚಿತ
ವಿದ್ಯಾರ್ಥಿನಿಲಯ, ಬಿಜಿಎಸ್ ಸಾಂಸ್ಕೃತಿಕ ಭವನ ಹಾಗೂ ಬಿಜಿಎಸ್ ಅತಿಥಿ ಗೃಹ ಲೋಕಾರ್ಪಣೆ ಧಾರ್ಮಿಕ
ಕಾರ್ಯಕ್ರಮಕ್ಕೆ ಶ್ರೀ ಮಠದಿಂದ ಆಗಮಿಸುತ್ತಿರುವ ಭೈರವ ಜ್ಯೋತಿಗೆ ಪಾಂಡವಪುರದಲ್ಲಿ ಹೃದಯ
ಸ್ಪರ್ಶಿ ಭವ್ಯ ಸ್ವಾಗತ ನೀಡಲಾಯಿತು. ಜಕ್ಕನಹಳ್ಳಿ
ಮೂಲಕ ಪಾಂಡವಪುರ ಪಟ್ಟಣ ಪ್ರವೇಶಿಸಿದ ಭೈರವ ಜ್ಯೋತಿಗೆ ಇಲ್ಲಿನ ಕೆಎಸ್‌ಆರ್‌ಟಿಸಿ ಡಿಪೋ ಮುಂಭಾಗ
ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮುಖಂಡರಾದ ಹೆಚ್.ತ್ಯಾಗರಾಜು, ಡಾ.ಅರವಿಂದ್, ರೈತ ಮುಖಂಡರಾದ
ಎ.ಎಲ್.ಕೆಂಪೂಗೌಡ, ಪಿ.ನಾಗರಾಜು, ದೀಪು, ಹಾರೋಹಳ್ಳಿ ಸತೀಶ, ಕೆನ್ನಾಳು ನಾಗರಾಜು, ಹೆಚ್.ಎನ್.ಮಂಜುನಾಥ್, ಅಂಬಿ ಸುಬ್ಬಣ್ಣ ಮುಂತಾದವರು ಪೂಜೆ ಸಲ್ಲಿಸಿ ಪಟ್ಟಣಕ್ಕೆ ಬರಮಾಡಿಕೊಂಡರು. ಇದೇ ವೇಳೆ ಶ್ರೀಮಠದ
ವತಿಯಿಂದ ಮುಖಂಡರನ್ನು ಗೌರವಿಸಲಾಯಿತು. ನಂತರ
ಭೈರವ ಜ್ಯೋತಿಯು ಎನ್‌ಎಂ ರಸ್ತೆಯಲ್ಲಿ ಸಂಚರಿಸಿ ಪಟ್ಟಣದ ಐದು ದೀಪದ ವೃತ್ತದಲ್ಲಿ ಬಂದಾಗ
ಅಭಿಮಾನಿಗಳು ಮತ್ತು ಬಿಜಿಎಸ್ ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಪಟಾಕಿ
ಸಿಡಿಸಿ ಪುಷ್ಪಾರ್ಚನೆ ಮೂಲಕ ಸ್ವಾಗತಿಸಿದರು. ಶಾಸಕ
ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ನಾಡಿನಲ್ಲಿ ಮಳೆಯ ಕೊರತೆ ಇದೆ. ಭೈರವೇಶ್ವರನ ಕೃಪೆಯಿಂದ ಮಳೆ
ಸುರಿದು ಉತ್ತಮ ಬೆಳೆಯಾಗಿ ರೈತರು ಸಂತೃಪ್ತರಾಗಿ ನಾಡು ಸುಭೀಕ್ಷವಾಗಲಿ ಎಂದು ಪ್ರಾರ್ಥಿಸಿದರು.
0 ಕಾಮೆಂಟ್‌ಗಳು