ಕಾವೇರಿ ಹೋರಾಟದ ಜತೆ ಪರ್ಯಾಯ ಬೇಸಾಯ, ನೀರು ನಿರ್ವಹಣೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ : ದರ್ಶನ್ ಪುಟ್ಟಣ್ಣಯ್ಯ
ಸೆಪ್ಟೆಂಬರ್ 30, 2023
ಹಳೇಬೀಡು, ಅನೂನಹಳ್ಳಿ, ಬೋರಾಪುರ,ಸಂಗಾಪುರ ಗ್ರಾಮದಲ್ಲಿ ೧.೫೦ ಕೋಟಿ ರೂ. ವೆಚ್ಚದ ಕುಡಿಯುವ ನೀರು ಕಾಮಗಾರಿಗೆ ಚಾಲನೆ
ಪಾಂಡವಪುರ : ಕೃಷಿಯಲ್ಲಿ ನೀರು ನಿರ್ವಹಣೆ ಮತ್ತು ಬೇಸಾಯದಲ್ಲಿ ಅಮೂಲಾಗ್ರ
ಬದಲಾವಣೆ ಅಗತ್ಯವಾಗಿದ್ದು, ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಶಾಸಕ
ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲ್ಲೂಕಿನ ಸಂಗಾಪುರದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ
ನೀರಿನ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಅವರು ಮಾತನಾಡಿ, ಕಾವೇರಿ ನೀರು ವಿಚಾರದಲ್ಲಿ ನಮಗೆ ಕಾನೂನು
ಹೋರಾಟ ಮಾತ್ರ ಉಳಿದಿದೆ. ಮುಂಬರುವ ದಿನಗಳಲ್ಲಿ ಕಡಿಮೆ ನೀರಿನಲ್ಲಿ ಕೃಷಿಕಾರ್ಯ ನಡೆಸುವದರ ಬಗ್ಗೆ
ರೈತರಲ್ಲಿ ಅರಿವು ಮೂಡಿಸುವ ಕೆಲಸವನ್ನು ರೈತಸಂಘ ಮಾಡಲಿದೆ. ಈ ಬಗ್ಗೆ ರೈತಮುಖಂಡರೊಂದಿಗೆ ಚರ್ಚಿಸಲು
ನಾವು ಸಭೆಯನ್ನು ಕರೆದಿದ್ದೇವೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ನಮಗೆ ಕಾನೂನು
ಹೋರಾಟ ಮಾತ್ರ ಉಳಿದಿದೆ. ಈ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನಮ್ಮ ಪರಿಸ್ಥಿತಿಯನ್ನು
ವೈಜ್ಞಾನಿಕವಾಗಿ ಅರಿವು ಮೂಡಿಸುತ್ತೇವೆ ಎಂದರು.
ಶುಕ್ರವಾರದ ಕರ್ನಾಟಕ ಬಂದ್ ಯಶಸ್ವಿಯಾಗಿದೆ.ಆದಾಗ್ಯೂ ನಿತ್ಯ
೩ಸಾವಿರ ಕ್ಯುಸೆಕ್ಸ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ. ನಾನು ಈ
ಬಗ್ಗೆ ಕಾನೂನು ಹೋರಾಟ ನಡೆಸುವುದರ ಜತೆಗೆ ನಮ್ಮ ಪರ್ಯಾಯ ಕೃಷಿಯ ಬಗ್ಗೆ ಚಿಂತನೆ ನಡೆಸುವುದರ ಬಗ್ಗೆಯೂ
ಯೋಚನೆ ಮಾಡಲಿದ್ದೇವೆ ಎಂದರು.
ಇದಕ್ಕೂ ಮುನ್ನ ಅವರು ತಾಲ್ಲೂಕಿನ ಹಳೇಬೀಡು, ಅನೂನಹಳ್ಳಿ ಬೋರಾಪುರ
ಮತ್ತು ಅಂತಿಮವಾಗಿ ಸಂಗಾಪುರ ಗ್ರಾಮದಲ್ಲಿ ಜಲಜೀವನ್ ಮಿಷನ್‌ಯೋಜನೆಯಡಿ ಸುಮಾರು ೧೫೦ ಲಕ್ಷ ರೂ.ವೆಚ್ಚದ
ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿದರು.
0 ಕಾಮೆಂಟ್‌ಗಳು