ಉದ್ಯಮಗಳ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ಪ್ರಮುಖ : ಶ್ರೀಶೈಲ ರಾಮಣ್ಣನವರ್
ಸೆಪ್ಟೆಂಬರ್ 27, 2023
ಮೈಸೂರು : ಯಾವುದೇ ಒಂದು ಉದ್ಯಮದ ಅಭಿವೃದ್ಧಿಯಲ್ಲಿ ಬ್ಯಾಂಕುಗಳ
ಪಾತ್ರ ಮುಖ್ಯವಾ ಗಿರುತ್ತದೆ. ಈ ನಿಟ್ಟಿನಲ್ಲಿ ಫೆಡರಲ್ ಬ್ಯಾಂಕ್ ಕೈಗಾರಿಕೋದ್ಯಮಿಗಳ ಆರ್ಥಿಕ ಅಭಿವೃದ್ಧಿಗೆ
ಸಾಕಷ್ಟು ಕೊಡುಗೆ ನೀಡಿದೆ ಎಂದು ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗಳ ಖಜಾಂಚಿ ಹಾಗೂ ಮೈಸೂರು ಗ್ರಾಹಕ
ಪರಿಷತ್ ಅಧ್ಯಕ್ಷ ಶ್ರೀಶೈಲ ರಾಮಣ್ಣನವರ್ ಹೇಳಿದರು. ನಗರದ ಬೋಗಾದಿ ಬಸವನಗುಡಿ ವೃತ್ತದಲ್ಲಿ ನೂತನವಾಗಿ ಪ್ರಾರಂಭಿಸಲಾದ
ಫೆಡರಲ್ ಬ್ಯಾಂಕ್ ಬೋಗಾದಿ ಬ್ರಾಂಚ್ ಉದ್ಘಾಟಿಸಿ ಅವರು ಮಾತನಾಡಿ, ಬ್ಯಾಂಕುಗಳು ಜನರಿಗೆ ಉತ್ತಮ
ಸೇವೆ ನೀಡಿದಾಗ ಮಾತ್ರ ಪ್ರಗತಿ ಹೊಂದಲು ಸಾಧ್ಯ, ಈ ನಿಟ್ಟಿನಲ್ಲಿ ಫೆಡರಲ್ ಬ್ಯಾಂಕ್ ತನ್ನ ಗ್ರಾಹಕರಿಗೆ
ಅತ್ಯುತ್ತಮ ಸೇವೆ ನೀಡುವ ಮೂಲಕ ನಗರದಲ್ಲಿ ತನ್ನ ೪ನೇ ಬ್ರಾಂಚ್ ಪ್ರಾರಂಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು. 1931 ರಲ್ಲಿ ಕೇರಳ ಕೊಚ್ಚಿ ಜಿಲ್ಲೆಯ ಅಲುವಾದಲ್ಲಿ ಪ್ರಾರಂಭವಾದ
ಫೆಡರಲ್ ಬ್ಯಾಂಕ್ ಇಂದು ದೇಶಾದ್ಯಂತ ೧೩೭೦ ಬ್ರಾಂಚ್‌ಗಳನ್ನು ಹೊಂದಿದೆ. ಸುಮಾರು ೧೩ ಸಾವಿರ ಜನರಿಗೆ
ಕೆಲಸ ನೀಡಿರುವುದಲ್ಲದೇ, ಅಬುದಾನಿ ಖತರ್, ಕುವೈತ್, ಓಮನ್ ಮತ್ತು ದುಬೈನಲ್ಲಿ ತನ್ನ ಬ್ರಾಂಚ್
ಹೊಂದಿರುವುದು ವಿಶೇಷವಾಗಿದೆ ಎಂದರು. ಪ್ರಸ್ತುತ ಜನರಿಗೆ ಅಗತ್ಯವಾದ ಆಧುನಿಕ ಬ್ಯಾಂಕಿಂಗ್ ಸೌಲಭ್ಯ ನೀಡುವ
ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಫೆಡರಲ್ ಬ್ಯಾಂಕ್‌ಕೈಗಾರಿಕೋದ್ಯಮಿಗಳಿಗೆ ಹೆಚ್ಚು ಅನುಕೂಲ
ಮಾಡಿಕೊಟ್ಟಿದೆ. ಹೀಗಾಗಿ ಮೈಸೂರಿನಲ್ಲಿ ೪ನೇ ಬ್ರಾಂಚ್ ತೆರೆಯಲು ಸಾಧ್ಯವಾಗಿದೆ. ಬ್ಯಾಂಕಿನ ಸೇವೆ
ಮತ್ತಷ್ಟು ಜನರಿಗೆ ಲಭ್ಯವಾಗುಮ ಮೂಲಕ ಅಭಿವೃದ್ಧಿಯಾಗಲಿ ಎಂದು ಅವರು ಶುಭ ಹಾರೈಸಿದರು.
ಇದೇ ವೇಳೆ ಅವರು ನೂತನ ಎಟಿಎಂ ಕೇಂದ್ರ ಹಾಗೂ ಸೇಫ್ ಲಾಕರ್‌ಗಳನ್ನು
ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉತ್ತಮ್ ರಬ್ಬರ್ಸ್ ಪ್ರೈಲಿ, ವ್ಯವಸ್ಥಾಪಕ ನಿರ್ದೇಶಕ
ಜಾನ್ಸನ್ ಜೋಸೆಫ್, ಉದ್ಯಮಿ ಮತ್ತು ಸಮಾಜ ಸೇವಕ ರಾಬರ್ಟ್ ಅಂತೋಣಿ, ಫೆಡರಲ್ ಬ್ಯಾಂಕ್ ಹಿರಿಯ
ಉಪಾಧ್ಯಕ್ಷ ದಿಲಿಪ್ ಬಿ., ಬ್ರಾಂಚ್ ಹೆಡ್ ರಾಹುಲ್ ಕೆ.ಓ., ಮುಂತಾದವರು ಇದ್ದರು.
0 ಕಾಮೆಂಟ್‌ಗಳು