ರಂಗಕರ್ಮಿ ಜಯದೇವರಾವ್ ಅವರಿಗೆ ʻವಿಠಲಶ್ರೀʼ ಪ್ರಶಸ್ತಿ

ಪಾಂಡವಪುರ : ದೇಶಾದ್ಯಂತ ಕನ್ನಡ ಮತ್ತು ಹಿಂದಿ ಭಾಷೆಗಳ ನಾಟಕಗಳಲ್ಲಿ ನಟಿಸಿರುವ ಖ್ಯಾತ ರಂಗಕರ್ಮಿ ಜಯದೇವರಾವ್‌ ಅವರು ರಾಜ್ಯಮಟ್ಟದ ʻವಿಠಲಶ್ರೀʼ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಳಗಾವಿಯ ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದಿಂದ ನಾಮದೇವ ಶಿಂಪಿ ಮತ್ತು ಭಾವಸಾರ ಕ್ಷತ್ರಿಯ ಸಮಾಜದ ಸಾಧಕರಿಗೆ ನೀಡಲಾಗುವ ಈ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಅಕ್ಟೋಬರ್‌, ೧ ರಂದು ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ  ನಾಮದೇವ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಹರಿಪ್ರಕಾಶ್‌ ಕೊಣೆಮನೆ ಅವರು ಜಯದೇವರಾವ್‌ ಅವರಿಗೆ ಪ್ರದಾನ ಮಾಡಲಿದ್ದಾರೆ ಎಂದು ಆಯೋಜಕರಾದ ಮಂಜುನಾಥ ರೇಳೆಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.