ವರದಿ : ನಿಷ್ಕಲ ಎಸ್., ಮೈಸೂರು
ಮೈಸೂರು : ನಗರದ ಮಾಲ್ ಆಫ್ ಮೈಸೂರಿನಲ್ಲಿರುವ ಶಾಪರ್ಸ್ ಸ್ಟಾಪ್ ಬಟ್ಟೆ ಅಂಗಡಿಯಲ್ಲಿ ಕೆಲವು ದಿನಗಳ ಹಿಂದೆ ಬಟ್ಟೆ ಖರೀದಿಸಿ ಲಕ್ಕಿ ಕೂಪನ್ ಪಡೆದಿದ್ದ ಮೈಸೂರಿನ ಎ.ಆರೀಫ್ ಎಂಬುವರಿಗೆ ಸುಮಾರು 4 ಲಕ್ಷ ರೂ. ಮೌಲ್ಯದ ಬಿಎಂಡಬ್ಲ್ಯು 310 ಆರ್‍ಆರ್ ಬೈಕ್ ಬಹುಮಾನವಾಗಿ ಲಭಿಸಿದೆ.
ಶುಕ್ರವಾರ ಬೆಳಗ್ಗೆ ಮಾಲ್ ಆಫ್ ಮೈಸೂರು ಮುಂಭಾಗ ನಡೆದ ಸಮಾರಂಭದಲ್ಲಿ ಬೈ ಕೀ ವಿತರಣೆ ಮಾಡಲಾಯಿತು.
ಶಾಪರ್ಸ್ ಸ್ಟಾಪ್‍ನಲ್ಲಿ ಮಹಿಳೆಯರ, ಪುರುಷರ ಅಲ್ಲದೇ ಮಕ್ಕಳ ಉಡುಪುಗಳು, ಪಾದರಕ್ಷೆಗಳು, ಪರಿಕರಗಳು, ಕೈಚೀಲಗಳು, ಸೌಂದರ್ಯ ಮತ್ತು ಪ್ರಯಾಣದ ಅಗತ್ಯ ವಸ್ತುಗಳನ್ನು ಒಳಗೊಂಡ 500ಕ್ಕೂ ಹೆಚ್ಚಿನ ಪ್ರಮುಖ ಬ್ರಾಂಡ್‍ಗಳನ್ನು ಈ ಮಾರಾಟದಲ್ಲಿ ಸೇರಿಸಲಾಗಿದೆ.
ಶಾಪರ್ಸ್ ಸ್ಟಾಪ್‍ನ ಗ್ರಾಹಕ ಸೇವಾ ಸಹಯೋಗಿ ಮತ್ತು ಮುಖ್ಯ ಮಾರುಕಟ್ಟೆ ಕಾರ್ಯಾಧಿಕಾರಿ ಜಿತನ್ ಮಹೇಂದ್ರ ಅವರು ಮಾತನಾಡಿ, ``ಶಾಪರ್ಸ್ ಸ್ಟಾಪ್‍ನಲ್ಲಿ ಗ್ರಾಹಕರನ್ನು ತೊಡಗಿಸುವುದು, ಗುರುತಿಸುವಿಕೆ ಮತ್ತು ನಂಬಿಕೆಯೆ ಮೇಲೆ ಫ್ಯಾಷನ್ ಅನುಭವಗಳನ್ನು ನಿರ್ಮಿಸಲಾಗಿದೆ ಎಂದು ನಾವು ನಂಬುತ್ತೇವೆ. ಶೈಲಿಯನ್ನು ಅರ್ಥಪೂರ್ಣ ಕ್ಷಣಗಳೊಂದಿಗೆ ಸಂಯೋಜಿಸುವ ಮೂಲಕ ನಾವು ಹೇಗೆ ನಮ್ಮ ಅತ್ಯಂತ ನಿಷ್ಠಾವಂತ ಗ್ರಾಹಕರಿಗೆ ಪ್ರತಿಫಲ ನೀಡುತ್ತೇವೆ ಎಂಬುದನ್ನು ಡೆನಿಮ್ ಡಿಡ್ ಬಿಂಬಿಸುತ್ತಾರೆ. ನಾವು ಆರಿಫ್ ಎ. ಅವರನ್ನು ಗೌರವಿಸಿ ಸಂಭ್ರಮಿಸುವಾಗ, ದೇಶದ ಎಲ್ಲೆಡೆಯ ಖರೀದಿದಾರರಿಗೆ ನಿಮ್ಮ ಬಹುನಿರೀಕ್ಷಿತ ಮಾರಾಟ ತಲುಪಿಸಲು ನಾವು ಅಷ್ಟೇ ಉತ್ಪಾರಾಗಿದ್ದೇವೆ, ಮಿಂದರಿ ಬ್ಯಾಂಡ್‍ಗಳ ಅಮ್ಮ ಸಂಗ್ರಹ ಮತ್ತು ಶಾವರ್ಸ್ ಸ್ಪಾಟ್ ಅನ್ನು ವ್ಯಾಖ್ಯಾನಿಸುವ ವೈಯಕ್ತಿಕರಿಸಿದ ಸೇವೆ ಸಾದರಪಡಿಸುತ್ತೇವೆ" ಎಂದರು.
ಬಹುಮಾನ ವಿಜೇತ ಆರೀಫ್ ಅವರು ಮಾತನಾಡಿ, ನಾನು ಕಳೆದ 10 ವರ್ಷಗಳಿಂದ ಸ್ಟಾಪರ್ಸ್ ಸ್ಟಾಪ್‍ನಲ್ಲಿ ಅತ್ಯಂತ ಉತ್ಸಾಹದಿಂದ ಬಟ್ಟೆಗಳನ್ನು ಖರೀದಿ ಮಾಡುತ್ತಿದ್ದೇನೆ, ಕೆಲವು ದಿನಗಳ ಹಿಂದೆ ನನ್ನ ಖರೀದಿ ಸಂದರ್ಭದಲ್ಲಿ ನನಗೆ ಕೂಪನ್ ನೀಡಲಾಗಿತ್ತು, ನಂತರ ಈ ಕೂಪನ್‍ಗೆ ಬಹುಮಾನ ಲಭಿಸಿದೆ ಎಂದು ತಿಳಿದು ಸಂತೋಷವಾಯಿತು ಎಂದರು.
ಬಹುಮಾನ ವಿತರಣೆ ಸಂದರ್ಭದಲ್ಲಿ ಮೈಸೂರು ಶಾಪರ್ಸ್ ಸ್ಟಾಪ್‍ನ ಸಿಬ್ಬಂದಿಗಳು ಇದ್ದರು.
