ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗದೆ ದೂರ ಉಳಿದಷ್ಟು ನಾಡದ್ರೋಹಿಗಳ ಶಕ್ತಿ ಹೆಚ್ಚಳವಾಗುತ್ತದೆ : ರಾಜಶೇಖರ್


 ವರದಿ : ನಿಷ್ಕಲ ಎಸ್.ಮೈಸೂರು

ಮೈಸೂರು : ಕನ್ನಡ ನೆಲ. ಆಲ, ಭಾಷೆಯ ಪರವಾಗಿ ಕೆಲಸ ಮಾಡುವ ನಾಡಿನ ಬಹುತೇಕ ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಬೇಕು, ನಮ್ಮೊಳಗಿನ ಸಣ್ಣ, ಸಣ್ಣ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ನಾವು ಒಂದಾಗಬೇಕು. ನಾವು ದೂರು ಉಳಿದಷ್ಟು

ನಾಡದ್ರೋಹಿಗಳ ಶಕ್ತಿ ಹೆಚ್ಚಳವಾಗುತ್ತದೆ ಎಂದು ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಬಿ.ಬಿ.ರಾಜಶೇಖರ್ ಹೇಳಿದರು.

ಡಿ.೨೮ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳು ಆಯೋಜಿಸಿರುವ ಜನರಾಜ್ಯೋತ್ಸವ ಕಾರ್ಯಕ್ರಮ ಸಂಬಂಧ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದ ಕನ್ನಡಪರ ಸಂಘಟನೆಗಳ ಮುಖ್ಯಸ್ಥರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 

ಜನರಾಜ್ಯೋತ್ಸವ ಕೇವಲ ಒಂದು ಕಾರ್ಯಕ್ರಮವಲ್ಲ ಇದು ಕನ್ನಡಿಗರ ಒಗ್ಗಟ್ಟಿನ ಹೊಸ ಅಧ್ಯಾಯ. 

ಈ ಒಗ್ಗಟ್ಟನ್ನು ಬರಿ ಮಾತಿನಲ್ಲಿ ಹೇಳುವುದಲ್ಲ, ನಾಡಿನ ಜನರ ಮುಂದೆ ನಾವು ನಡೆದು ತೋರಿಸಬೇಕಾಗಿದೆ. ನಮ್ಮ ಒಗ್ಗಟ್ಟಿನ ಸ್ಪಷ್ಟ ಸಂದೇಶವನ್ನು ನೀಡಿದ್ದೇವೆ. ಕನ್ನಡದ ಕಾಯಕಕ್ಕಾಗಿ ಎಲ್ಲರೂ ಒಂದಾಗಿ ಕಂಕಣಬದ್ಧವಾಗಿ ನಿಲ್ಲೋಣ, ಇದು ನಿಮ್ಮದೇ ಕಾರ್ಯಕ್ರಮ, ನಿಮ್ಮದೇ ಜವಾಬ್ದಾರಿ ಎಂಬ ಭಾವನೆಯೊಂದಿಗೆ ನಾಡಿನ ಭವಿಷ್ಯಕ್ಕಾಗಿ, ಕನ್ನಡದ ಗೌರವಕ್ಕಾಗಿ ಎಲ್ಲ ಸಂಘಟನೆಗಳು ಲಕ್ಷೆಪಲಕ್ಷ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಒಗ್ಗಟ್ಟಿನ ಶಕ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ, ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ, ಸಮಾಜ ರಕ್ಷಣಾ ವೇದಿಕೆ, ನಮ್ಮ ಜೈ ಕರುನಾಡ ವೇದಿಕೆ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ಸೂಚಿಸಿದರು.

ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆಯ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಗಿರೀಶ್ ಶಿವಾರ್ಚಕ, ಕನ್ನಡಾಂಬೆ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಜಶೇಖರ್, ರಾಜ್ಯ ಖಜಾಂಚಿ ನಂಜುಂಡ, ಹೊನ್ನೇಗೌಡ, ಶಿವಕುಮಾರ್, ಕೃಷ್ಣಮೂರ್ತಿ, ಸೋಮಶೇಖರ, ಮಲ್ಲೇಗೌಡ, ಲೂಯಿಸ್, ಅಶ್ವಿನಿ, ಅನಿತಾ, ಸಂತೋಷ್, ಸಿಂಧುವಳ್ಳಿ ಶಿವಕುಮಾರ್, ಹರೀಶ, ಲೋಕೇಶ್ ಜಿ., ಮಂಜುಳಾ, ರವಿಗೌಡ, ನಾಗರಾಜು, ರಶ್ಮಿ ಸಿಂಗ್, ವತ್ಸಲ, ನಾಗರಾಜ್ ಈ.ವಿ., ಪರಮೇಶ್ ಹುಣಸೂರ್, ಸಚಿನ್, ಅರಸು ಮತ್ತು ಹಲವು ಮುಖಂಡರು ಪಾಲ್ಗೊಂಡಿದ್ದರು.