ಶಿಕ್ಷಕ ಚಂದ್ರಶೇಖರ್ ನಕಲಿ ಅಂಗವಿಕಲ ಪ್ರಮಾಣ ಪತ್ರ ಪ್ರಕರಣ : ಇಬ್ಬರು ವೈದ್ಯರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು

ಪಾಂಡವಪುರ : ನಕಲಿ ಅಂಗವಿಕಲ ಪ್ರಮಾಣ ಪತ್ರ ನೀಡಿ ಕೆಲಸ ಗಿಟ್ಟಿಸಿದ ಆರೋಪ ಎದುರಿಸುತ್ತಿರುವ ಪಟ್ಟಣದ ಉರ್ದು ಶಾಲೆಯ ಶಿಕ್ಷಕ ಕೆ.ಚಂದ್ರಶೇಖರ ಆಲಿಯಾಸ್‌ಗಡ್ಡಚಂದ್ರನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವೈದ್ಯಾಧಿಕಾರಿ ವಿರುದ್ಧವೂ ಲೋಕಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
ಕಳೆದ ಹಲವು ದಿನಗಳ ಹಿಂದೆಯೇ ಸಾಮಾಜಿಕ ಕಾರ್ಯಕರ್ತ ಕೋ.ಪು.ಗುಣಶೇಖರ್‌ ಎಂಬವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಶಿಕ್ಷಣ ಇಲಾಖೆ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ತನಿಖೆ ಪ್ರಗತಿಯಲ್ಲಿದ್ದು, ಇದೀಗ ಆ ಶಿಕ್ಷಕನಿಗೆ ನಕಲಿ ಪ್ರಮಾಣ ಪತ್ರ ನೀಡಿದ್ದ ಮಂಡ್ಯ ಮಿಮ್ಸ್‌ ಮತ್ತು ಕೆ.ಆರ್‌.ಆಸ್ಪತ್ರೆ ವೈದ್ಯರ ವಿರುದ್ಧವೂ ದೂರು ಸಲ್ಲಿಸಲಾಗಿದೆ.
ಕೆ.ಚಂದ್ರಶೇಖರ್ ಎಂಬಾತ ತಾನು ಅಂಗವಿಕಲನೆಂದು ಹೇಳಿ ವೈದ್ಯರ ಸಹಾಯದಿಂದ ನಕಲಿ ಪ್ರಮಾಣ ಪತ್ರವನ್ನು ಸೃಸ್ಟಿಸಿ ಶಿಕ್ಷಣ ಇಲಾಖೆಗೆ ಯಾಮಾರಿಸಿ ಶಿಕ್ಷಕ ಹುದ್ದೆ ಪಡೆದಿದ್ದಾರೆ ಎಂದು ಗುಣಶೇಖರ್‌ ಆರೋಪಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು