ಮೂಡಾದಲ್ಲಿ 1 ಸಾವಿರ ಕೋಟಿ ರೂ. ಅವ್ಯವಹಾರ : ತನಿಖೆ ನಡೆಸುವಂತೆ ಎಸ್ಡಿಪಿಐ ಜಿಲ್ಲಾಧ್ಯಕ್ಷ ರಫತ್ ಖಾನ್ ಒತ್ತಾಯ
ಸೆಪ್ಟೆಂಬರ್ 19, 2023
ಮೈಸೂರು : ಮೂಡಾದಲ್ಲಿ ನಡೆದಿದೆ ಎನ್ನಲಾದ ಒಂದು ಸಾವಿರ ಕೋಟಿ ರೂ.
ಅವ್ಯವಹಾರದ ಬಗ್ಗೆ ಕೂಡಲೇ ತನಿಖೆ ನಡೆಸಿ ಹಣ ವಸೂಲಿ ಮಾಡಿ ತಪ್ಪಿತಸ್ಥರನ್ನು ಶಿಕ್ಷಿಸಬೇಕೆಂದು ಎಸ್‌ಡಿಪಿಐ
ಜಿಲ್ಲಾ ಅಧ್ಯಕ್ಷ ರಫತ್ ಖಾನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಫತ್ ಖಾನ್ ಎಸ್‌ಡಿಪಿಐ ಜಿಲ್ಲಾಧ್ಯಕ್ಷರು
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭೂ ಮಾಲಿಕರಿಗೆ ಪರಿಹಾರವಾಗಿ
ಕಾನೂನು ಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಿಕೊಡಲಾಗಿದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಅಧೀನ
ಕಾರ್ಯದರ್ಶಿ ಕೆ.ಲತಾ ಅವರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ನಿರ್ದೇಶಿಸಿದ್ದು, ಬೃಂದಾವನ
ಬಡಾವಣೆಯ ನಿವಾಸಿ ನಿವೃತ್ತ ನಗರ ಯೋಜನೆ ಸಹಾಯಕ ನಿರ್ದೇಶಕ ಹಾಗೂ ಮೂಡ ನೌಕರರ ಸಂಘದ ಮಾಜಿ ಅಧ್ಯಕ್ಷ
ಪಿ.ಎಸ್.ನಟರಾಜ್ ಸಲ್ಲಿಸಿರುವ ದೂರಿನ ಅನ್ವಯ ಈ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಲವು ಪ್ರಕರಣಗಳಲ್ಲಿ
ಮಾಲೀಕರಿಗೆ ಪರಿಹಾರ ನೀಡಿಲ್ಲವೆಂದು, ಬದಲಿಯಾಗಿ ಅಭಿವೃದ್ಧಿ ಹೊಂದಿದ ಜಾಗದಲ್ಲಿ ಬೆಲೆ ಬಾಳುವ ಆಸ್ತಿಗಳನ್ನು
50:50 ಅನುಪಾತದಲ್ಲಿ ಕಾನೂನು ಬಾಹಿರವಾಗಿ ಹಂಚಿಕೆ ಮಾಡಲಾಗಿದೆ. ಅದರಿಂದ ಪ್ರಾಧಿಕಾರಕ್ಕೆ ಹಾಗೂ ಸರ್ಕಾರಕ್ಕೆ 1ಸಾವಿರ ಕೋಟಿಗೂ ಹೆಚ್ಚು ಆರ್ಥಿಕ
ನಷ್ಟ ಉಂಟು ಮಾಡಲಾಗಿದೆ. ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಯಶಸ್ವಿನಿ ಸೋಮಶೇಖರ್,
ಹಿಂದಿನ ಆಯುಕ್ತ ಡಿ.ಬಿ. ನಟೇಶ್, ಈಗಿನ ಆಯುಕ್ತ ಜಿ.ಟಿ. ದಿನೇಶ್ ಕುಮಾರ್, ವಿಶೇಷ ಭೂಸ್ವಾಧೀನಾಧಿಕಾರಿಗಳಾದ ಹರ್ಷವರ್ಧನ್, ವಿಷ್ಣುವರ್ಧನ್ ರೆಡ್ಡಿ
ಮತ್ತು ಸಂಬಂಧಿಸಿದ ವಿಶೇಷ ತಹಶೀಲ್ದಾರರು, ನೌಕರರು ಅಕ್ರಮ ಲಾಭ, ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ.
ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ನಟರಾಜ್ ಕೋರಿದ್ದಾರೆ. ಅದನ್ನು ಆಧರಿಸಿ ವರದಿ ಸಲ್ಲಿಸುವಂತೆ
ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ ಎಂದು ರಫತ್‌ಖಾನ್ ತಿಳಿಸಿದರು. ಈ ಪ್ರಕರಣದ ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ
ಶಿಕ್ಷೆ ನೀಡುವುದರ ಜತೆಗೆ ನಷ್ಟವನ್ನು ವಸೂಲಿ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
0 ಕಾಮೆಂಟ್‌ಗಳು