ಪಾಂಡವಪುರ : ಮುಂದಿನ ವೈರಮುಡಿ ಜಾತ್ರೆಗೂ ಮುನ್ನ ಮೇಲುಕೋಟೆ ಧಾರ್ಮಿಕ ಕ್ಷೇತ್ರವನ್ನು ಸಾಧ್ಯವಾದಷ್ಟು ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಾಲಯದ ಸುತ್ತಮುತ್ತ ಕೆಆರ್ಐಡಿಎಲ್ ವತಿಯಿಂದ ಒಂದು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಿಸಿ ರಸ್ತೆ ಅಭಿವ್ದ್ಧಿ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಅವರು ಮಾತನಾಡಿ, ಮೇಲುಕೋಟೆ ದೇವಾಲಯ ವಿಶ್ವ ವಿಖ್ಯಾತವಾಗಿದೆ. ದೇಶ ವಿದೇಶಗಳಿಂದ ದಿನನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಜತೆಗೆ ವರ್ಷಕ್ಕೊಮ್ಮೆ ನಡೆಯುವ ವೈರಮುಡಿ ಉತ್ಸವಕ್ಕೆ ಲಕ್ಷಾಂತರ ಜನ ಭಕ್ತರು ಆಗಮಿಸುವ ಕಾರಣ ಪ್ರವಾಸಿಗರು ಮತ್ತು ಭಕ್ತರ ಅನುಕೂಲಕ್ಕಾಗಿ ಈ ಪ್ರಸಿದ್ಧ ಧಾರ್ಮಿಕ ಕ್ಷೇತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ಮಾರ್ಗದರ್ಶನದಲ್ಲಿ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮನ್ಮುಲ್ ನಿರ್ದೇಶಕ ರಾಮಚಂದ್ರು, ಮುಖಂಡರಾದ ಕನಗೋನಹಳ್ಳಿ ಪರಮೇಶ್, ಗ್ರಾಪಂ ಮಾಜಿ ಅಧ್ಯಕ್ಷರಾದ ಯೋಗನರಸಿಂಹೇಗೌಡ, ಜಯಲಕ್ಷ್ಮಿ ಜಯರಾಮೇಗೌಡ, ಸದಸ್ಯರಾದ ಮುರಳಿ, ಭಾಗ್ಯಮ್ಮ, ಜಯರಾಮು, ರಾಜೇಶ್ವರಿ, ಯೋಗೇಶ್, ಬಳಘಟ್ಟ ಗ್ರಾಪಂ ಅಧ್ಯಕ್ಷೆ ಜ್ಯೋತಿ ಮಹೇಶ್, ಹೋಟೆಲ್ ಸುಬ್ಬಣ್ಣ, ರೈತ ಮುಖಂಡರಾದ ಈ.ಶ.ಮುರಳಿ, ಹೋಟೆಲ್ ಚಂದ್ರು, ನ್ಯಾಮನಹಳ್ಳಿ ಶಿವರಾಮು, ಪಗಡೆ ಕಲ್ಲಹಳ್ಳಿ ಚಂದ್ರು, ವಿಯಜ್, ಡೇರಿ ಉಪಾಧ್ಯಕ್ಷ ರಾಮಪ್ರಿಯ, ಶ್ರೀನಿವಾಸ ಅಯ್ಯಂಗಾರ್, ಬೋರಾಪುರ ಉಮೇಶ್, ಇಇ ಸೋಮಶೇಖರ್, ಎಇಇ ಚೈತ್ರಾ, ಪವಿತ್ರ ಉದಯ್ ಮುಂತಾದವರು ಇದ್ದರು.
0 ಕಾಮೆಂಟ್‌ಗಳು