ಮೈಸೂರು: ನಗರದ ಖ್ಯಾತ ಕುಂಚ ಕಲಾವಿದ ಅಸದುಲ್ಲಾ ಖಾನ್ ಸೇರಿದಂತೆ ಮಹದೇವ ಮತ್ತು ಅಬ್ಬಾಸ್ ಅವರಿಗೆ ಬೆಂಗಳೂರಿನ ನಾಮಫಲಕ ಕುಂಚ ಕಲಾವಿದರ ಸಂಘದಿಂದ ಕುಂಚಗುರು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಗುರು ಪೂರ್ಣಿಮೆ ಪ್ರಯುಕ್ತ ಬೆಂಗಳೂರಿನ ವಿಜಯನಗರದ ಮಾರುತಿ ಮಂದಿರದ ಬಳಿ ಇರುವ ಜಿಕೆಡಬ್ಲ್ಯೂ ಲೇ ಔಟ್ ನಲ್ಲಿರುವ ಕುಂಚ ಕುಟೀರದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಖ್ಯಾತ ಚಲನ ಚಿತ್ರ ನಿರ್ದೇಶಕ ಸಾಯಿ ಪ್ರಕಾಶ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಡಾ.ಎನ್.ಶಾಂತಕುಮಾರಿ ರವಿಕುಮಾರ್ ಅವರು ಮೂವರಿಗೂ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ತಮಿಳುನಾಡು ಮತ್ತು ಆಂದ್ರ ಪ್ರದೇಶ ಹಾಗೂ ತೆಲಂಗಾಣದ ಕುಂಚ ಕಲಾವಿದರಿಗೂ ಸಹ ಕುಂಚಗುರು ಪ್ರಶಸ್ತಿ ನೀಡಲಾಯಿತು.ಈ ಸಂದರ್ಭದಲ್ಲಿ ಬೆಂಗಳೂರಿನನಾಮಫಲಕ ಕುಂಚ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಎನ್.ಕುಮಾರ್ ಮತ್ತಿತರರು ಇದ್ದರು. ಅಸದುಲ್ಲಾ ಖಾನ್ ಪರಿಚಯ:ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಬೆಳ್ಳೂರು ಗ್ರಾಮದವರಾದ ಅಸದುಲ್ಲಾ ಖಾನ್, ತಮ್ಮ ವೃತ್ತಿ ಜೀವನವನ್ನು ಪಾಂಡವಪುರದಲ್ಲಿ ಪ್ರಾರಂಭಿಸಿ ಬಳಿಕ ಆದಿ ಚುಂಚನಗಿರಿ ಮಠದಲ್ಲಿ ಕಲಾವಿದರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.ಹಿಂದೂ ದೇವರುಗಳ ಚಿತ್ರಗಳನ್ನು ತಮ್ಮ ಕುಂಚದಲ್ಲಿ ಅದ್ಭುತವಾಗಿ ಮೂಡುವಂತೆ ಚಿತ್ರಿಸುವ ಅಸದುಲ್ಲಾ ಖಾನ್ ಅವರಿಗೆ ಹಲವಾರು ರಾಷ್ಟ್ರೀಯ ಪುರಸ್ಕಾರಗಳು ಲಭಿಸಿವೆ.
ಅಸದುಲ್ಲಾ ಖಾನ್ ಪರಿಚಯ:
ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಬೆಳ್ಳೂರು ಗ್ರಾಮದವರಾದ ಅಸದುಲ್ಲಾ ಖಾನ್, ತಮ್ಮ ವೃತ್ತಿ ಜೀವನವನ್ನು ಪಾಂಡವಪುರದಲ್ಲಿ ಪ್ರಾರಂಭಿಸಿ ಬಳಿಕ ಆದಿ ಚುಂಚನಗಿರಿ ಮಠದಲ್ಲಿ ಕಲಾವಿದರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಹಿಂದೂ ದೇವರುಗಳ ಚಿತ್ರಗಳನ್ನು ತಮ್ಮ ಕುಂಚದಲ್ಲಿ ಅದ್ಭುತವಾಗಿ ಮೂಡುವಂತೆ ಚಿತ್ರಿಸುವ ಅಸದುಲ್ಲಾ ಖಾನ್ ಅವರಿಗೆ ಹಲವಾರು ರಾಷ್ಟ್ರೀಯ ಪುರಸ್ಕಾರಗಳು ಲಭಿಸಿವೆ.
0 ಕಾಮೆಂಟ್‌ಗಳು