ಮಕ್ಕಳಿಗೆ ನೋಟ್ ಬುಕ್ ವಿತರಿಸಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಿಎಂ ಸಿದ್ದರಾಮಯ್ಯ ಅಭಿಮಾನಿ ಬೀರೇಶ್ ಕಿಂಗ್

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್‌ ಯುವ ಮುಖಂಡ ಹಾಗೂ ಜಿಪಂ ಟಿಕೆಟ್‌ ಆಕಾಂಕ್ಷಿ  ಬೀರೇಶ್‌ ಕಿಂಗ್‌ ಶನಿವಾರ ತಮ್ಮ ಹುಟ್ಟುಹಬ್ಬವನ್ನು ಮೈಸೂರಿನ ಸರ್ಕಾರಿ ಶಾಲೆಯ ಮಕ್ಕಳ ಜತೆ ಸರಳವಾಗಿ ಆಚರಿಸಿಕೊಂಡರು.
ಮೈಸೂರು ಸರ್ಕಾರಿ ಶಾಲೆಯ ಮಕ್ಕಳಿಗೆ ಬೀರೇಶ್‌ ಕಿಂಗ್‌ ತಮ್ಮ 30ನೇ ವರ್ಷದ ಹುಟ್ಟು ಹಬ್ಬದ ಸ್ಮರಣಾರ್ಥ ನೋಟ್‌ ಬುಕ್‌ ವಿತರಣೆ ಮಾಡಿದರು.



ಬಳಿಕ ಅವರು ಮಾತನಾಡಿ, ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆದರ್ಶ, ಈ ಹಿಂದೆ ಸಂಭ್ರಮ ಸಡಗರ ಮತ್ತು ಅದ್ಧೂರಿಯಿಂದ ನಾನು ನನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳು ಮತ್ತು ಗೆಳೆಯರ ಜತೆ ಆಚರಿಸಿಕೊಳ್ಳುತ್ತಿದ್ದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಳತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ. ಹಾರ ತುರಾಯಿ ಸನ್ಮಾನವನ್ನು ನಿರಾಕರಿಸುತ್ತಿದ್ದಾರೆ. ಜತೆಗೆ ಝೀರೋ ಟ್ರಾಫಿಕ್‌ ಕೂಡ ಬೇಡ ಎನ್ನುವಷ್ಟು ಸರಳತೆ, ಜನಸ್ನೇಹಿ ಆಡಳಿತ ನಡೆಸುತ್ತಿದ್ದಾರೆ. ನಮ್ಮ ಆರಾಧ್ಯ ದೈವ ಸಿದ್ದರಾಮಯ್ಯ ಅವರ ಆದರ್ಶಗಳನ್ನು ಪಾಲಿಸಬೇಕಾದುದು ಅವರ ಅಭಿಮಾನಿಯಾದ ನನ್ನ ಕರ್ತವ್ಯವಾಗಿದ್ದು, ನಾನೂ ಕೂಡ ಇನ್ನು ಮುಂದೆ ಯಾವುದೇ ಅದ್ದೂರಿ ಸಂಭ್ರಮಾಚರಣೆ ಅಥವಾ ದುಂದು ವೆಚ್ಚ ಮಾಡದೆ ಅದೇ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಡುವ ಉದ್ದೇಶ ಹೊಂದಿದ್ದೇನೆ. ಈ ನಿಟ್ಟಿನಲ್ಲಿ ನನ್ನ ಹುಟ್ಟು ಹಬ್ಬವನ್ನು ನಾನು ಹುಟ್ಟಿ ಬೆಳೆದು, ಕಲಿತ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್‌ ಬುಕ್‌ ವಿತರಿಸಿ ಆಚರಣೆ ಮಾಡುತ್ತಿರುವುದು ನನಗೆ ಮತ್ತು ನನ್ನ ಗೆಳೆಯರಿಗೆ ಹೆಮ್ಮೆ ಮತ್ತು ಸಂತೋಷ ತಂದಿದೆ ಎಂದರು.

ಇದೇ ಸಂದರ್ಭದಲ್ಲಿ ಅವರು ಚಾಮುಂಡಿಬೆಟ್ಡಕ್ಕೆ ತೆರಳಿ, ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ಅವರು ಐದು ವರ್ಷ ರಾಜ್ಯದ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಬೇಕು. ಮತ್ತು ಕೇಂದ್ರದಲ್ಲಿ ಜನ ವಿರೋಧಿ ಮತ್ತು ಬಡವರ ವಿರೋಧಿ ಬಿಜೆಪಿ ಸರ್ಕಾರ ತೊಲಗಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬರಬೇಕು, ರಾಹುಲ್‌ ಗಾಂಧಿ ಅವರು ಈ ದೇಶದ ಪ್ರಧಾನ ಮಂತ್ರಿ ಅಗಬೇಕು ಎಂದು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು