ನಾಳೆ ಮೈಸೂರಿನ ವಿಶ್ವ ವಿಖ್ಯಾತ ಬೃಂದಾವನ ಗಾರ್ಡನ್ ಸಮೀಪದ ಕಟ್ಟೇರಿ ಸರ್ಕಲ್ ನಲ್ಲಿ ಶ್ರೀ ವಿನಾಯಕ ರೆಸ್ಟೋರೆಂಟ್ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಪ್ರಾರಂಭ
ಜೂನ್ 15, 2023
ನಾಳೆ ಉದ್ಘಾಟನೆಗೆ ಸಜ್ಜಾಗಿರುವ ಶ್ರೀ ವಿನಾಯಕ ರೆಸ್ಟೋರೆಂಟ್ ಬೋರ್ಡಿಂಗ್ ಅಂಡ್ ಲಾಡ್ಜಿಂಗ್
ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ
ಕೃಷ್ಣರಾಜ ಸಾಗರ ಜಲಾಶಯದ ಬೃಂದಾವನ ಗಾರ್ಡನ್ ಕೂಗಳತೆ ದೂರದಲ್ಲಿ ಅತ್ಯಾಧುನಿಕ, ಸುಸಜ್ಜಿತ ಶ್ರೀ
ವಿನಾಯಕ ರೆಸ್ಟೋರೆಂಟ್ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಪ್ರಾರಂಭವಾಗಲಿದೆ. ಮೈಸೂರಿನಿಂದ ಕೆಆರ್‌ಎಸ್ ಮಾರ್ಗವಾಗಿ
ಕೆಆರ್‌ಎಸ್ ಹಿನ್ನೀರಿನಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿನ ಕಟ್ಟೇರಿ
ಸರ್ಕಲ್‌ನಲ್ಲಿ ಈ ನೂತನ ರೆಸ್ಟೋರೆಂಟ್ ಆರಂಭವಾಗಲಿದೆ. ಮೈಸೂರಿನಿಂದ ಕೆಆರ್‌ಎಸ್ ಮಾರ್ಗವಾಗಿ
ಭೂ ವರಹನಾಥ ದೇವಾಲಯಕ್ಕೆ ಇದೇ ಮಾರ್ಗದಲ್ಲಿ ಸಂಚರಿಸಬಹುದಾಗಿದೆ.
ಕೆಆರ್‌ಎಸ್ ಬೃಂದಾವನ ಗಾರ್ಡನ್‌ನಿಂದ
ಕೇವಲ 2 ಕಿಲೋಮೀಟರ್ ಹಾಗೂ ಪಾಂಡವಪುರದಿಂದ 10 ಕಿಲೋ ಮೀಟರ್ ದೂರದಲ್ಲಿರುವ ಈ ರೆಸ್ಟೋರೆಂಟ್ ಪ್ರವಾಸಿಗರನ್ನು
ಕೈ ಬೀಸಿ ಕರೆಯುತ್ತಿದೆ.
ಶ್ರೀ ವಿನಾಯಕ ರೆಸ್ಟೋರೆಂಟ್‌ನಲ್ಲಿ
ಉತ್ತಮ ಬೆಳಕು ಮತ್ತು ಗಾಳಿಯ ಸಮರ್ಪಕ ವ್ಯವಸ್ಥೆಯುಳ್ಳ ವಿಶಾಲವಾದ ಡೈನಿಂಗ್ ಹಾಲ್. ಫ್ಯಾಮಿಲಿ ರೂಂ
ಲಭ್ಯವಿದೆ. ಗ್ರಾಹಕರಿಗೆ ಕುಡಿಯಲು ಶುದ್ಧವಾದ ಆರ್‌ಓ ವಾಟರ್, ಇಲ್ಲಿ ದೊರೆಯಲಿದೆ.
ಕಡಿಮೆ ಖರ್ಚಿನಲ್ಲಿ ಸುಸಜ್ಜಿತ
ರೂಂ :
ಶ್ರೀ ವಿನಾಯಕ ರೆಸ್ಟೋರೆಂಟ್ ಬೋರ್ಡಿಂಗ್ ಮತ್ತು ಲಾಡ್ಜಿಂಗ್‌ನಲ್ಲಿ ಪ್ರವಾಸಿಗರು
ಉಳಿದುಕೊಳ್ಳಲು ಅತ್ಯಂತ ಕಡಿಮೆ ಖರ್ಚಿನಲ್ಲಿ ಎಸಿ ಮತ್ತು ನಾನ್ ಎಸಿ ರೂಂಗಳು ಲಭ್ಯವಿದೆ. ಎಲ್ಲಾ
ರೂಂ ಗಳಲ್ಲೂ ಟಿವಿ ಇರುತ್ತದೆ. ಜತೆಗೆ ಅತ್ಯುತ್ತಮ, ಆಧುನಿಕ ಶುಚಿತ್ವವುಳ್ಳ ಶೌಚಾಲಗಳು ಇದ್ದು,
24 ಗಂಟೆಯ ಚೆಕ್ ಔಟ್ ಹಾಗೂ ರೂಂ ಸರ್ವಿಸ್ ಸೌಲಭ್ಯವಿದೆ.
ವಿಶಾಲವಾದ ಪಾರ್ಕಿಂಗ್ ಶ್ರೀ ವಿನಾಯಕ ರೆಸ್ಟೋರೆಂಟ್
ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಮುಂಭಾಗ ಮತ್ತು ಹೋಟೆಲ್‌ನ ಹಿಂಭಾಗದಲ್ಲಿ ಪ್ರವಾಸಿಗರ ವಾಹನ ನಿಲುಗಡೆಗೆ
ಸಿಸಿ ಕ್ಯಾಮೆರಾ ಸರ್ವಿಲೆನ್ಸ್ ಉಳ್ಳ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, 24 ಗಂಟೆ
ಸೆಕ್ಯೂರಿಟಿ ಸೌಲಭ್ಯವಿದೆ.
ಹಳ್ಳಿಗಾಡಿನ ನಾಟಿ ಸ್ಟೈಲ್
ಊಟ:
ನಗರ ಪ್ರದೇಶದ ಗ್ರಾಹಕರು ಮತ್ತು
ಪ್ರವಾಸಿಗರು ಇಷ್ಟ ಪಡುವ ಗ್ರಾಮೀಣ ಶೈಲಿಯ ಮಾಂಸಾಹಾರ ಮತ್ತು ಸಸ್ಯಹಾರ ಈ ರೆಸ್ಟೋರೆಂಟ್‌ನಲ್ಲಿ ದೊರೆಯಲಿದ್ದು,
ರೂಂ ಸರ್ವಿಸ್ ಕೂಡ ಇರುತ್ತದೆ. ಚೈನ್ ಸ್ಟೈಲ್ ಫಾಸ್ಟ್ ಫುಡ್
ರೆಸ್ಟೋರೆಂಟ್‌ನಲ್ಲಿ ಗ್ರಾಹಕರು
ಬಯಸುವ ಎಲ್ಲಾ ರೀತಿಯ ಚಿಕನ್, ಮಟನ್, ಫಿಶ್, ಮುಂತಾದ ಚೈನೀಸ್ ಐಟಂಗಳು ಸಹ ಅತ್ಯುತಮ ಬಾಣಸಿಗರಿಂದ
ತಯಾರಾಗಿ ಗ್ರಾಹಕರ ನಾಲಿಗೆಗೆ ರುಚಿರುಚಿಯಾದ ಐಟಂಗಳು ಇಲ್ಲಿ ಸಿಗಲಿವೆ. ಒಟ್ಟಾರೆ ಗ್ರಾಹಕರಿಗೆ ಯಾವುದೇ
ರೀತಿಯಲ್ಲಿ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ಊಟೋಪಚಾರ, ರೂಂ ಸೌಲಭ್ಯ, ಪಾರ್ಟಿ ಹಾಲ್, ಗಾರ್ಡನ್
ರೆಸ್ಟೋರೆಂಟ್ ಸೌಲಭ್ಯಗಳು ಇಲ್ಲಿ ದೊರೆಯಲಿದ್ದು, ಮೈಸೂರು, ಪಾಂಡವಪುರ, ಶ್ರೀರಂಗಪಟ್ಟಣ ಸುತ್ತಮುತ್ತಲಿನ
ನಾನ್‌ವೆಜ್ ಪ್ರಿಯರು ಇಲ್ಲಿ ಆರಾಮವಾಗಿ ಬಂದು ಪಾರ್ಟಿ ಮಾಡಬಹುದಾದ ಎಲ್ಲಾ ಸೌಲಬ್ಯಗಳು ಇಲ್ಲಿ ದೊರೆಯುತ್ತದೆ.
ಒಮ್ಮೆ ಈ ರೆಸ್ಟೋರೆಂಟ್‌ಗೆ ಭೇಟಿ ನೀಡಿ ನಮ್ಮ ಸೇವೆಯನ್ನು
ಪರೀಕ್ಷಿಸಿದ ನಂತರ ನಿಮ್ಮ ಗೆಳೆಯರಿಗೂ ತಿಳಿಸಿ ಎಂದು ಹೊಟೇಲ್ ಮಾಲಿಕರು ಕೋರಿದ್ದಾರೆ.
0 ಕಾಮೆಂಟ್‌ಗಳು