ಪಾಂಡವಪುರ: ಪ್ರಜಾಭೂಷಣ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಚಿನಕುರಳಿ ಪ್ರದೀಪ್ ಅವರ ಪುತ್ರ ನಿಶಾಂತ್ ಪಿ.ಗೌಡ ಹುಟ್ಟು ಹಬ್ಬಕ್ಕೆ ತಾಲೂಕಿನ ಹೆಸರಾಂತ ವಕೀಲ ಹಾಗೂ ಟಿಎಪಿಸಿಎಂಎಸ್ ನಿರ್ದೇಶಕ. ಕಣಿವೆ ಯೋಗೇಶ್ ಶುಭ ಹಾರೈಸಿದರು.
ಚಿನಕುರಳಿ ಗ್ರಾಮದಲ್ಲಿ ನಡೆದ ಸರಳ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಪ್ರದೀಪ್ ಅವರ ನಿಸ್ವಾರ್ಥ ಸಮಾಜ ಸೇವೆ, ಪ್ರೀತಿ, ವಿಶ್ವಾಸ ನಮ್ಮನ್ನು ಇಲ್ಲಿಯ ತನಕ ಎಳೆದು ತಂದಿದೆ. ಈ ನಿಟ್ಟಿನಲ್ಲಿ ಮಗುವಿಗೆ ದೇವರು ಆರೋಗ್ಯ, ಉತ್ತಮ ಗುಣ ಅಪ್ಪನಂತೆ ಸಮಾಜ ಸೇವೆಯ ಕರುಣಿಸಲಿ ಎಂದರು.
ಈ ಸಂದರ್ಭದಲ್ಲಿ ಕರವೇ ಮುಖಂಡ ಯೋಗೇಶ್, ಕೆಆರ್ ಎಸ್ ಪಕ್ಷದ ತಾಲೂಕು ಅಧ್ಯಕ್ಷ ವಿಶ್ವನಾಥ್, ಪ್ರಜಾಭೂಷಣ ಪ್ರಶಸ್ತಿ ಪುರಸ್ಕೃತ ಪ್ರದೀಪ್ ಮತ್ತಿತರರು ಇದ್ದರು.
0 ಕಾಮೆಂಟ್‌ಗಳು