ಚಾಮರಾಜನಗರದಲ್ಲಿ ಎಸ್ ಡಿಪಿಐ 15ನೇ ಸಂಸ್ಥಾಪನಾ‌ ದಿನ ಆಚರಣೆ : ಅಬ್ರಾರ್‌ ಅಹಮದ್ ದ್ವಜಾರೋಹಣ

ಚಾಮರಾಜನಗರ :SDPI ಪಕ್ಷದ 15 ನೇ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಪಕ್ಷದ ಜಿಲ್ಲಾಧ್ಯಕ್ಷ ಅಬ್ರಾರ್ ಅಹಮದ್ ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣ ಮಾಡಿದರು.
ಬಳಿಕ ಅವರು‌‌ ಮಾತನಾಡಿ,   ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ 14 ವರ್ಷಗಳನ್ನು ಪೂರೈಸಿ 15 ನೇ ವರ್ಷಕ್ಕೆ ಕಾಲಿಟ್ಟಿದೆ. ಈ 14 ವರ್ಷಗಳಲ್ಲಿ ನಮ್ಮ ಹೋರಾಟವು ನಿಖರವಾದ ಗುರಿ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಸಾಕ್ಷಾತ್ಕಾರಕ್ಕಾಗಿ ವಿಶಾಲವಾದ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದೆ. ಇದಕ್ಜೆ ಪಕ್ಷದ ಕಾರ್ಯಕರ್ತರ, ನಾಯಕರ ಹಾಗೂ ಹಿತೈಷಿಗಳ ಸಹಕಾರವೇ ಈ ನಮ್ಮ ರಾಜಕೀಯ ಚಳವಳಿಗೆ  ಪ್ರೇರಣೆ ಎಂದರು.
ದೇಶದ ಪ್ರಸ್ತುತ ಸನ್ನಿವೇಶ ಆಡಳಿತ ನಡೆಸುತ್ತಿರುವವರ ತಪ್ಪು ಮತ್ತು ಅವಿವೇಕದ ನೀತಿಗಳಿಂದ ಜನರನ್ನು ಅಭದ್ರತೆಯ ಸ್ಥಿತಿಗೆ ಮತ್ತು ಭಾರಿ ಆರ್ಥಿಕ ಸಂಕಷ್ಟಗಳಿಗೆ ದೂಡುವಂತಾಗಿದೆ. ಪ್ರಜಾಪ್ರಭುತ್ವ ಅವನತಿಯ ಅಂಚಿನಲ್ಲಿದೆ. ಭಿನ್ನಮತೀಯರನ್ನು ನಿರ್ದಯವಾಗಿ ಬಂಧಿಸುವುದು, ರಾಜಕೀಯ ಮತ್ತು ಸಾಮಾಜಿಕ ವಿರೋಧಿಗಳ ವಿರುದ್ಧ ಏಜೆನ್ಸಿಗಳ ದುರುಪಯೋಗ, ಸಾರ್ವಜನಿಕ ಆಸ್ತಿಗಳ ಮಾರಾಟ, ದ್ವೇಷದ ಭಾಷಣಗಳು, ಜನ ವಿರೋಧಿ ಕಾನೂನುಗಳು, ಸಶಸ್ತ್ರ ಪಡೆಗಳ ಅತಿಯಾದ ಬಳಕೆ ಇತ್ಯಾದಿಗಳು ಜನರ ಜೀವನ ಮತ್ತು ದೇಶದ ಒಟ್ಟಾರೆ ಕ್ಷೇಮಕ್ಕೆ ಅಪಾಯವನ್ನುಂಟು ಮಾಡಿದೆ. ಇಷ್ಟಾದರೂ ವಿರೋಧ ಪಕ್ಷಗಳು ಪ್ರಜಾಪ್ರಭುತ್ವದಲ್ಲಿ ತಮ್ಮ ಪಾತ್ರವನ್ನು ಮರೆತು ಮೌನವಾಗಿದ್ದು ಕೊಂಡು ಪರೋಕ್ಷವಾಗಿ ಆಡಳಿತ ವರ್ಗಕ್ಕೆ ಸಹಕಾರ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಪಕ್ಷದ ಉದ್ದೇಶ ಸ್ಪಷ್ಟವಾಗಿದೆ, 'ಹಸಿವು ಮುಕ್ತ ಮತ್ತು ಭಯ ಮುಕ್ತ ಭಾರತವನ್ನು ಸಾಕಾರಗೊಳಿಸಲು ಸಂಕಲ್ಪ ಮತ್ತು ಬದ್ಧತೆಯಿಂದ ಹೆಜ್ಜೆ ಹಾಕಲು ನಾವೆಲ್ಲರೂ ಒಟ್ಟಿಗೆ ಮುನ್ನಡೆಯೋಣ ಎಂದು ಕರೆ ನೀಡಿದರು. 
ಜಿಲ್ಲಾ ಉಪಾಧ್ಯಕ್ಷರಾದ ಸೈಯದ್ ಆರೀಫ್, ಜಿಲ್ಲಾ ಕಾರ್ಯದರ್ಶಿ ಜಬೀ ನೂರ್, ಖಜಾಂಚಿ ನಯಾಜ್ ಉಲ್ಲಾ, ನಗರಸಭಾ ಸದಸ್ಯರಾದ ಮಹೇಶ್, ಕಲೀಲ್ ಉಲ್ಲಾ, ಮೊಹಮ್ಮದ್ ಅಮೀಕ್, ಅಫ್ಸರ್ ಪಾಷ ಹಾಗೂ ಜಿಲ್ಲಾ ಮುಖಂಡರಾದ ರಫೀ, ಜಾಕೀರ್, ಶಿವಣ್ಣ, ಇಂಡಿಯನ್ ಆಟೋ ಸ್ಟಾಂಡ್ ಅಧ್ಯಕ್ಷರಾದ ಸಾದಿಕ್ ಇನ್ನಿತರರು ಉಪಸ್ಥಿರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು