ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಇಲ್ಲಿದೆ ಕಿಂಡರ್ ಗಾರ್ಡನ್ ಶಾಲೆ..!

ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ 
ಇಲ್ಲಿದೆ ಕಿಂಡರ್ ಗಾರ್ಡನ್ ಶಾಲೆ..!

ಮೈಸೂರು: ಮಕ್ಕಳ ಬಾಲ್ಯವನ್ನು ಗರಿಗೆದರುವಂತೆ ಮಾಡುವಲ್ಲಿ ಶಾಲೆಗಳ ಪಾತ್ರ ಮಹತ್ವದ್ದುಘಿ. ಹಾಗಾಗಿ ಮಕ್ಕಳ ಆರಂಭಿಕ ಶಿಕ್ಷಣದ ಸ್ವರೂಪ, ಗುರಿಗಳು ಮತ್ತು ಉದ್ದೇಶಗಳನ್ನು ಈಡೇರಿಸಲು ಇಲ್ಲೊಂದು ಶಾಲೆ ಸಿದ್ಧಗೊಂಡಿದೆ. 

ಮೈಸೂರಿನ ಗೋಕುಲಂ 3ನೇ ಹಂತದಲ್ಲಿರುವ ‘ಲಿಟಲ್ ಬನ್ನಿ’ ಶಿಶುವಿಹಾರವು ಕಲಿಕೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿ ಮಕ್ಕಳ ಭವಿಷ್ಯಕ್ಕೆ ಭದ್ರವಾದ ಅಡಿಪಾಯ ಹಾಕಿದೆ. ಪ್ರಿಸ್ಕೂಲ್ ಎಂದರೆ ಕೇವಲ ಗುಣಮಟ್ಟದ ಇಂಗ್ಲಿಷ್ ಶಿಕ್ಷಣವನ್ನು ನೀಡುವುದಲ್ಲದೆ ಪ್ರಾದೇಶಿಕ ಭಾಷೆ ಕನ್ನಡಕ್ಕೂ ಪ್ರಾಮುಖ್ಯತೆಯನ್ನು ನೀಡಿದೆ. ಇದರಿಂದಾಗಿ ಮಕ್ಕಳು ಉನ್ನತ ಹಂತಕ್ಕೆ ಬಂದಾಗ ಯಾವುದೇ ಭಾಷಾ ಸಮಸ್ಯೆಗಳಿರುವುದಿಲ್ಲ. ಪ್ರಾಥಮಿಕ ಹಂತದಲ್ಲೇ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಈ ಶಾಲೆಯ ಗುರಿ ಮತ್ತು ಬದ್ಧತೆಯಾಗಿದೆ. 

ಲಿಟಲ್ ಬನ್ನಿ ಕಿಂಡರ್ ಗಾರ್ಟನ್ ಶಾಲೆಯ ಅಧ್ಯಕ್ಷೆ ಎನ್. ಚಿತ್ರಾ ಅವರು ಹೇಳುವಂತೆ, ಶಾಲೆಯನ್ನು ಪ್ರಾರಂಭಿಸುವ ಮೊದಲು ಎರಡು ವರ್ಷಗಳಿಗೂ ಹೆಚ್ಚು ಕಾಲ ಸಂಶೋಧನೆ ನಡೆಸಿದ್ದೇನೆ. ಒಂದು ವಿಶಿಷ್ಟವಾದ ಹಾಗೂ ವಿನೂತನ ಪರಿಕಲ್ಪನೆಯಲ್ಲಿ ಮಕ್ಕಳು ಓದಬೇಕು. ಪಾಠ ಕೇಳಬೇಕು. ಜೊತೆಗೆ ಮಕ್ಕಳ ಬೌದ್ಧಿಕ ಮಟ್ಟ ಬೆಳೆಯಬೇಕೆಂಬ ಆಶಯದೊಂದಿಗೆ ‘ಲಿಟಲ್ ಬನ್ನಿ ಶಿಶುವಿಹಾರ’ವನ್ನು ಸ್ಥಾಪನೆ ಮಾಡಲಾಯಿತು. ಇಲ್ಲಿ ಮಕ್ಕಳು ಸ್ವಾತಂತ್ರ್ಯವಾಗಿ ಓಡಾಡುತ್ತಾರೆ. ಯಾರನ್ನೂ ಅವಂಬಿಸುವುದಿಲ್ಲಘಿ. ಹದವಾದ ಸಂಸ್ಕರಿಸಿದ ಕೌಶಲ್ಯಗಳನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತದೆ. ದೇಹ ಭಾಷೆಯಿಂದ ಮೌಖಿಕ ಸಂವಹನಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ,’’ ಎಂದು ತಿಳಿಸಿದರು.

‘‘ಇಲ್ಲಿ ಸಾಮಾಜಿಕ ಜಾಗೃತಿ ಮೂಲಕ ಮಕ್ಕಳು ಸ್ವಯಂ ವಿಧಾನದ ಮೂಲಕ ಬೆಳೆಯುತ್ತಾರೆ. ನಮ್ಮ ಲಿಟಲ್ ಬನ್ನಿ ಶಿಶುವಿಹಾರ ಕಾರ್ಯಕ್ರಮಗಳು ಮಕ್ಕಳು ಚಿಂತನೆಯನ್ನು ವೃದ್ಧಿಸುವ ಜೊತೆಗೆ ಕಾಳಜಿ ಮಾಡುವ ಬಾಂಧವ್ಯವನ್ನು ತಿಳಿಸಿಕೊಡಲಾಗುತ್ತದೆ. ಆರೋಗ್ಯಕರ ಬೆಳವಣಿಗೆ, ಪ್ರಗತಿ ಮತ್ತು ಕಲಿಕೆಗೆ ವಿಧಾನವನ್ನು ಅರ್ಥ ಮಾಡಿಸುತ್ತೇವೆ. ನಮ್ಮ ಸುತ್ತಲಿನ ಪರಿಸರ, ಅದು ನೀಡುವ ಅನುಭವಗಳು, ಅಲ್ಲಿನ ಚಟುವಟಿಕೆಗಳನ್ನು ಮನವರಿಕೆ ಮಾಡಿಕೊಡುತ್ತೇವೆ. ಮಕ್ಕಳ ತಮ್ಮ ನಿತ್ಯದ ದಿನಚರಿ, ಅದು ನೀಡುವ ಜ್ಞಾನದ ಮಜಲುಗಳನ್ನು ಖಚಿತವಾಗಿ ತಿಳಿದುಕೊಳ್ಳಲು ನಾವು ಹಮ್ಮಿಕೊಳ್ಳುವ ನಾನಾ ಕಾರ್ಯಕ್ರಮಗಳು ಸಹಕಾರಿಯಾಗಿರುತ್ತದೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹೆಚ್ಚು ಒತ್ತು ನೀಡುತ್ತೇವೆ. ಇದು ನಮ್ಮ ಶಾಲೆಯ ಕಲಿಕೆಯ ಒಂದು ಭಾಗವಾಗಿದೆ,’’ ಎಂದು ಮಾಹಿತಿ ನೀಡಿದ್ದಾರೆ.

‘‘ನಮ್ಮ ಶಾಲೆಯಲ್ಲಿ ನರ್ಸರಿ, ಎಲ್‌ಕೆಜಿ, ಯುಕೆಜಿ ಮತ್ತು ಪ್ಲೇಸ್ಕೂಲ್ ಮಟ್ಟದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತದೆ. 2ರಿಂದ 5 ವರ್ಷ ವಯಸ್ಸಿನ ಮಕ್ಕಳಿಗಾಗಿ ಲಿಟಲ್ ಬನ್ನಿ ಶಿಶುವಿಹಾರವನ್ನು ಪ್ರಾರಂಭಿಸಲಾಗಿದೆ. ಇದು ಎಲ್ಲಾ ಶಾಲೆಗಳಂತೆ ಸಾಮಾನ್ಯ ಶಾಲೆಯಲ್ಲ. ಆದರೆ ಇದು ಪೂರ್ವ ಶಾಲಾ ಶಿಕ್ಷಣ ಮತ್ತು ಡೇ ಕೇರ್ ಎರಡನ್ನೂ ಹೊಂದಿದೆ. ನಮ್ಮ ಶಾಲೆ ಒಳ ಹಾಗೂ ಹೊರ ಆವರಣದಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತು ನೀಡಿದ್ದೇವೆ. ಪೋಷಕರು ಮಕ್ಕಳನ್ನು ಮನೆಗೆ ಕರೆದೊಯ್ಯುವವರೆಗೂ ನಾವು ಕಾಳಜಿ ವಹಿಸುತ್ತೇವೆ. ತರಬೇತಿ ಪಡೆದ ಸಿಬ್ಬಂದಿ ಮಕ್ಕಳನ್ನು ಸದಾ ಚಟವಟಿಕೆಯಿಂದ ಇರುವಂತೆ ನಿಗಾ ವಹಿಸುತ್ತಾರೆ,’’ ಎಂದರು.

ಶಾಲೆಯ ಧ್ಯೇಯೋದ್ದೇಶಗಳ ಕುರಿತು ವಿವರಿಸಿದ ಚಿತ್ರಾ ಅವರು, ಮಕ್ಕಳಲ್ಲಿ ಸದೃಢ ನೈತಿಕ ಮೌಲ್ಯಗಳು ಮತ್ತು ಕಲಿಕೆಯ ಉತ್ಸಾಹವನ್ನು ಬೆಳೆಸುವುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ ಕ್ರಿಯಾತ್ಮಕ ಸವಾಲಿನ ವಾತಾವರಣವನ್ನು ಶಾಲೆಯಲ್ಲಿ ನಿರ್ಮಾಣ ಮಾಡಿದ್ದೇವೆ. ಜ್ಞಾನವು ಜೀವಮಾನದ ಉಡುಗೊರೆಯಾಗಿದೆ ಎಂಬುದನ್ನು ನಾವು ನಂಬುತ್ತೇವೆ. ಅದು ಪ್ರತಿ ಮಗುವಿಗೆ ವಿಶಿಷ್ಟವಾದ ಅಥವಾ ವಿಶೇಷವಾದದ್ದು. ಪ್ರೀತಿ, ತಾಳ್ಮೆ ಮತ್ತು ಸ್ವೀಕಾರವನ್ನು ಪ್ರದರ್ಶಿಸುವ ವಾತಾವರಣದಲ್ಲಿ ಪ್ರತಿ ಮಗುವಿಗೆ ಸೂಕ್ತ ಮಾರ್ಗದರ್ಶನ ನೀಡಬಹುದು. ನಾವು ಮಕ್ಕಳ ಸ್ನೇಹಿ ಆಗಿರುವ ಮತ್ತು ನೋಡಿದ ಕೂಡಲೇ ಆಕರ್ಷಿಸುವ ವರ್ಣರಂಜಿತ ಗುಣಮಟ್ಟದ ಆಟಿಕೆ, ಸಾಧನಗಳನ್ನು ನೀಡುತ್ತೇವೆ. ಇವುಗಳನ್ನು ಬಳಸಿ ಮಕ್ಕಳು ಸುಲಭವಾಗಿ ಸುರಕ್ಷಿತವಾಗಿ ಆಟವಾಡಬಹುದು. ಇದು ಮಕ್ಕಳ ಕೌಶಲ್ಯ ವೃದ್ಧಿಗೂ ಸಹಾಯ ಮಾಡುತ್ತದೆ,’’  ಎಂದರು.

ಶಾಲೆಯ ಟ್ರಸ್ಟಿ ಶ್ವೇತಾ ಅವರು ಮಾತನಾಡಿ, ಶಾಲೆ ಮಕ್ಕಳನ್ನು ನಿರಂತರವಾಗಿ ಗಮನಿಸಲು ಮತ್ತು ಮಾರ್ಗದರ್ಶನ ಮಾಡಲು ನಾವು ಹೆಚ್ಚು ಅರ್ಹತೆ ಮತ್ತು ಅನುಭವ ಹೊಂದಿರುವ ಸಿಬ್ಬಂದಿಯನ್ನು ಹೊಂದಿದ್ದೇವೆ. ಇವರೆಲ್ಲರೂ ಸಮರ್ಪಣೆ, ಬದ್ಧತೆ ಮತ್ತು ಮಕ್ಕಳ ಮೇಲಿನ ಅಪಾರ ಪ್ರೀತಿಯಿಂದ ಕೆಲಸ ಮಾಡುತ್ತಾರೆ. ಪ್ರತಿ ಮಗುವಿನ ಮೇಲೆ ವಿಶೇಷ ಒಲವು, ಕಾಳಜಿ ಹೊಂದಿರುತ್ತಾರ. ಹಾಗಾಗಿ ನಮ್ಮ ಶಿಶುವಿಗಾರ ಮಕ್ಕಳನ್ನು ಪ್ರೀತಿಸುವ ಸ್ಥಳವಾಗಿದೆ ಎನ್ನಲು ನನಗೆ ಹೆಮ್ಮೆ ಎನಿಸುತ್ತದೆ. ಅಲ್ಲದೆ, ನಾವು ಇಲ್ಲಿ ಹಲವಾರು ಚಟುವಟಿಕೆಗಳನ್ನು ನಡೆಸುತ್ತೇವೆ. ಇದರಿಂದ ಮಕ್ಕಳು ಪರಸ್ಪರ ಸಹಕಾರ, ತಿಳುವಳಿಕೆ, ಸಹಾನುಭೂತಿ ಮತ್ತು ಸುತ್ತಲೂ ಇರುವವರ ಬಗ್ಗೆ ಕಾಳಜಿ ವಹಿಸುವ ಬಗೆಯನ್ನು ತಿಳಿದುಕೊಳ್ಳುತ್ತಾರೆ. ನಮ್ಮ ಶಾಲೆ ಸಾಕಷ್ಟು ವಿಭಿನ್ನವಾಗಿದೆ. ಏಕೆಂದರೆ ನಾವು ಪಠ್ಯಕ್ರಮ ಮತ್ತು ಅಧ್ಯಯನ ಸಾಮಗ್ರಿಗಳನ್ನು ವೃತ್ತಿಪರವಾಗಿ ತರಬೇತಿ ಪಡೆದ ಅಧ್ಯಾಪಕರು ಸಂಶೋಧಿಸಿ ಹೊರತಂದಿದ್ದಾರೆ. ಎಲ್ಲಾಕ್ಕಿಂತ ಹೆಚ್ಚಾಗಿ ಮಕ್ಕಳ ಸುರಕ್ಷತೆ ಬೇಕಾದ ಎಲ್ಲಾ ಮುಂಜಾಗೃತೆಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತೇವೆ ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು