ಸವಿತಾ ಸಮಾಜದಿಂದ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಗೆ ಬೆಂಬಲ

ಪಾಂಡವಪುರ : ತಾಲೂಕು ಸವಿತಾ ಸಮಾಜದ ವತಿಯಿಂದ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರಿಗೆ ಬೆಂಬಲ ಘೋಷಿಸಲಾಯಿತು.
ಚಿನಕುರಳಿ ಗ್ರಾಮದ ಗಣಪತಿ ದೇವಾಲಯದ ಎದುರು ಸವಿತಾ ಸಮಾಜದ ಮುಖಂಡ ಚಿನಕುರಳಿ ಮಂಜು ನೇತೃತ್ವದಲ್ಲಿ ಮುಖಂಡರು ಶಾಸಕ ಸಿ.ಎಸ್.ಪುಟ್ಟರಾಜು ಅವರನ್ನು ಅಭಿನಂದಿಸಿ ತಮ್ಮ ಬೆಂಬಲ ಘೋಷಿಸಿದರು.
ಈ ಸಂದರ್ಭದಲ್ಲಿ ಮಂಜು ಅವರು ಮಾತನಾಡಿ, ಶಾಸಕ ಸಿ.ಎಸ್.ಪುಟ್ಟರಾಜು ಅವರು ಜನಾನುರಾಗಿ ನಾಯಕರು. ತಳ ಸಮುದಾಯಗಳ ಸರ್ವಾಂಗೀಣ ಪ್ರಗತಿಗೆ ಅಗತ್ಯ ಸಹಾಯ ಮಾಡುತ್ತಿದ್ದಾರೆ. ಸವಿತಾ ಸಮಾಜ ದುಡಿಯುವ ವರ್ಗದ ಜನರಾಗಿದ್ದು, ಕೋವಿಡ್ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೆ ಈಡಾಗಿತ್ತು. ಈ ಸಂದರ್ಭದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಅವರು ನಮ್ಮ ಸಮುದಾಯಕ್ಕೆ ಆಹಾರ ಕಿಟ್ ಮತ್ತು ಅಗತ್ಯ ಸಹಾಯಗಳನ್ನು ಮಾಡುವ ಮೂಲಕ ನಮ್ಮ ರಕ್ಷಣೆಗೆ ನಿಂತಿದ್ದರು. ಈ ಋಣವನ್ನು ನಾವು ತೀರಿಸಬೇಕಿದೆ. ಅದಕ್ಕಾಗಿ ಪ್ರಸ್ತುತ ಚುನಾವಣೆಯಲ್ಲಿ ನಾವು ಅವರಿಗೆ ನಮ್ಮ ಬೆಂಬಲ ನೀಡುತ್ತಿದ್ದೇವೆ. ತಾಲೂಕಿನ ಎಲ್ಲಾ ಸವಿತಾ ಸಮಾಜದ ಬಂಧುಗಳು ಶಾಸಕ ಮತ್ತು ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚಿನಕುರಳಿ ಮಂಜು, ಬೇಬಿ ನಾಗರಾಜು, ಬ್ಯಾಟರಿ ರಮೇಶ್, ನಾಗಣ್ಣ, ನಾಗು, ಸೂರಿ ಮುಂತಾದವರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು