ವರದಿ : ನಜೀರ್ ಅಹಮದ್, 9740738219
ಮೈಸೂರು : 231 ಜನ ಒಳಚರಂಡಿ ಸಹಾಯಕ ಕಾರ್ಮಿಕರು, 565 ಜನ ಸ್ವಚ್ಛತಾ ಘನತ್ಯಾಜ್ಯ ವಾಹನ ಚಾಲಕರು, 40 ಜನ ಕ್ಲೀರ‍್ಸ್ ಮತ್ತು 1100 ಜನರು ನೇರ ಪಾವತಿ ಪೌರಕಾರ್ಮಿಕರಿಗೆ ನೇರ ನೇಮಕಾತಿ ಮಾಡುವಂತೆ ಪ್ರಕ್ರಿಯೆ ನಡೆಸಲು ಹಾಗೂ ನೇರ ಪಾವತಿಯಲ್ಲಿ ಸೇವೆ ಸಲ್ಲಿಸಿ ಮೃತರಾದ 85ಜನ ಪೌರ ಕಾರ್ಮಿಕರ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶೇಖ್ ತನ್ವೀರ್ ಆಸೀಫ್ ಭರವಸೆ ನೀಡಿದರು.
ಮೈಸೂರು ಮಹಾನಗರ ಪಾಲಿಕೆಯ ಶ್ರೀ ಜಯಚಾಮರಾಜ ಒಡೆಯರ್ ಸಭಾಂಗಣದಲ್ಲಿ ಬುಧವಾರ ನಡೆದ ಪಾಲಿಕೆಯಲ್ಲಿನ ಪೌರಕಾರ್ಮಿಕರುಗಳ ಕುಂದುಕೊರತೆ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಅಗತ್ಯವಾಗಿರುವ ಲ್ಯಾಪ್‌ಟಾಪ್ ವಿತರಣೆ, ಪ್ರೋತ್ಸಾಹ ಧನ ಸೇರಿದಂತೆ ಶಿಕ್ಷಣಕ್ಕೆ ಪೂರಕವಾದ ಎಲ್ಲ ರೀತಿಯ ಸೌಲಭ್ಯಗಳನ್ನು ಪಾಲಿಕೆ ವತಿಯಿಂದ ಒದಗಿಸಲಾಗುವುದು. ಇದಕ್ಕೆ ಅರ್ಜಿಯನ್ನು ಸಲ್ಲಿಸುವಂತೆ ಅವರು ಹೇಳಿದರು.
ಪೌರಕಾರ್ಮಿಕರಿಗೆ ನೀಡುತ್ತಿರುವ ಸಂಕಷ್ಟ ಭತ್ಯೆಯನ್ನು ಒಳಚರಂಡಿ ಕಾರ್ಮಿಕರು, ಸ್ವಚ್ಛತಾ ವಾಹನ ಚಾಲಕರು ಮತ್ತು ಕ್ಲೀರ‍್ಸ್ಗಳಿಗೂ ವಿಸ್ತರಣೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದ ಆಯುಕ್ತರು,
ಪೌರಕಾರ್ಮಿಕರಿಗೆ ನೀಡುತ್ತಿರುವ ಬೆಳಗಿನ ಉಪಹಾರವು ಗುಣಮಟ್ಟವಾಗಿಲ್ಲ ಎಂಬ ದೂರುಗಳು ಕೇಳಿಬಂದಿದ್ದು, ಪೌರಕಾರ್ಮಿಕರಿಗೆ ಗುಣಮಟ್ಟದ ಉಪಹಾರ, ಶುದ್ಧವಾದ ಕುಡಿಯುವ ನೀರು ಒದಗಿಸುವುದು, ಅಲ್ಲದೇ, ಪೌರಕಾರ್ಮಿಕರಿಗೆ ಕೇಂದ್ರ ಸರ್ಕಾರದ ವಿಮಾ ಯೋಜನೆಗಳನ್ನು ಒದಗಿಸುವ ಬಗ್ಗೆ ವಿವಿಧ ಬ್ಯಾಂಕುಗಳ ಅಧಿಕಾರಿಗಳನ್ನು ನಗರದ ಟೌನ್‌ಹಾಲ್‌ನಲ್ಲಿ ಸಭೆ ಕರೆದು ಶೀಘ್ರದಲ್ಲೆ ವಿಮಾ ಯೋಜನೆಯನ್ನೂ ಸಹ ಒದಗಿಸಲಾಗುವುದು. ಜತೆಗೆ ಆರೋಗ್ಯ ಮೇಳವನ್ನೂ ಸಹ ನಡೆಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಆಯುಕ್ತರಾದ ದಾಸೇಗೌಡ, ಉನ್ನತ ಸಮಿತಿ ಅಧ್ಯಕ್ಷರಾದ ಎನ್.ಮಾರ, ಉನ್ನತ ಸಮಿತಿ ಕಾರ್ಯದರ್ಶಿ ಟಿ.ಶ್ರೀನಿವಾಸ್, ಗೌರವ ಕಾರ್ಯಾಧ್ಯಕ್ಷರಾದ ಎನ್.ಮೋಹನ್ ಕುಮಾರ್(ಸ್ವಾಮಿ), ಕಾಯಾಧ್ಯಕ್ಷರಾದ ನರಸಿಂಹ ಬಂಡೆ, ಮಹಾ ಪ್ರಧಾನ ಕಾರ್ಯದರ್ಶಿ ಜಿ.ಮಂಜುನಾಥ್, ಗೌರವಾಧ್ಯಕ್ಷರಾದ ವಡಿವೇಲು, ಅಧ್ಯಕ್ಷರಾದ ಸಿ.ಆರ್.ರಾಚಯ್ಯ, ಉಪಾಧ್ಯಕ್ಷರಾದ ರಾಜೀವ್, ಪ್ರಧಾನ ಕಾರ್ಯದರ್ಶಿ ಶಂಕರಪ್ಪ, ಒಳಚರಂಡಿ ಸ್ವಚ್ಛತಾ ಕಾರ್ಮಿಕರ ಸಂಘದ ಅಧ್ಯಕ್ಷರಾದ ಕುಮಾರಸ್ವಾಮಿ, ಸ್ವಚ್ಛತಾ ವಾಹನ ಚಾಲಕರ ಸಂಘದ ಅಧ್ಯಕ್ಷರಾದ ಮುರುಗೇಶ್(ಪಟೇಲ),
ಪ್ರಧಾನ ಕಾರ್ಯದರ್ಶಿ ಕೃಷ್ಣಸ್ವಾಮಿ, ಮಹಿಳಾ ಪೌರಕಾರ್ಮಿಕ ಸಂಘದ ಅಧ್ಯಕ್ಷೆ ಮಹಾದೇವಿ ಮುಂತಾದವರು ಇದ್ದರು.
ಪೌರಕಾರ್ಮಿಕರ ಬೇಡಿಕೆಗಳು
ಇದೇ ವೇಳೆ ನೇರ ಪಾವತಿ ಪೌರಕಾರ್ಮಿಕರು, ಖಾಯಂ ಪೌರಕಾರ್ಮಿಕರುಗಳ ಮಕ್ಕಳಿಗೆ ಖಾಸಗಿ ಶಾಲಾ/ ಕಾಲೇಜು ಶುಲ್ಕಗಳ ಮರು ಪಾವತಿ ಮಾಡುವುದು.ಎಲ್ಲಾ ಪೌರಕಾರ್ಮಿಕರಿಗೆ ರೈನ್ ಕೋರ್ಟ್, ಶೂ, ಸಮವಸ್ತç, (ಏಪಾನ್), ಫೈಟರ್ ಜರ್ಕಿನ್‌ಗಳನ್ನು ನೀಡುವಂತೆ, ಪೌರಕಾರ್ಮಿಕರಿಗೆ ಶೇ.2410% ರ ಹಣದಲ್ಲಿ ಸಿಗುವ ಸೌವಲತ್ತುಗಳು ಒದಗಿಸುವಂತೆ, ಸ್ವಯಂ ಉದ್ಯೋಗಕ್ಕೆ ಸಹಾಯಧನ, ಹೊಲಿಗೆಯಂತ್ರ ವಿತರಣೆ, ಉಚಿತವಾಗಿ ಗ್ಯಾಸ್ ಸಂಪರ್ಕ, ಪಕ್ಕಾ ಮನೆಗೆ ಸಹಾಯಧನ, ವ್ಯಾಸಂಗ ಪ್ರೊತ್ಸಾಹ ಧನ, ಕ್ರೀಡಾ ಪ್ರೋತ್ಸಾಹಧನ, ಕೃತಕ ಅಂಗಾAಗ ಜೋಡಣೆಗೆ ಸಹಾಯಧನ, ನಿವೇಶನ ಖರೀದಿಗೆ ಸಹಾಯಧನ, ವೈದ್ಯಕೀಯ ಸಹಾಯಧನ, ಆರೋಗ್ಯವಿಮೆ, ಆರೋಗ್ಯ ತಪಾಸಣೆ, ಎಲ್.ಎಲ್.ಬಿ ವಿದ್ಯಾರ್ಥಿಗಳಿಗೆ ಪುಸ್ತಕ ಖರೀದಿಗೆ ಸಹಾಯಧನ, ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ಸಹಾಯಧನ ಪೌರಕಾರ್ಮಿಕರ ವಿದ್ಯಾಥಿಗಳಿಗೆ ನಾಗರೀಕ ಸೇವಾ ವೃತ್ತಿಗೆ ತರಬೇತಿಗೆ ಸಹಾಯಧನ, ಪೌರಕಾರ್ಮಿಕರ ಮನೆಗಳಿಗೆ ಸೋಲಾರ್ ವಿದ್ಯುತ್ ದೀಪ ಸೌಲಭ್ಯ, ಪೌರಕಾರ್ಮಿಕ ಕುಟುಂಬಗಳಿಗೆ ಮನೆಯ ರಿಪೇರಿಗೆ ಸಹಾಯಧನ, ಪೌರಕಾರ್ಮಿಕರ ಮನೆಗಳಿಗೆ ಶಾಚಾಲಯ ನಿರ್ಮಾಣಕ್ಕೆ ಸಹಾಯಧನ, ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ಮನೆಗಳ ನಿರ್ಮಾಣ ಮತ್ತು ಫ್ಲಾಟ್‌ಗಳ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮುಖಂಡರು ಪಾಲಿಕೆ ಆಯುಕ್ತರನ್ನು ಒತ್ತಾಯಿಸಿದರು.
65 ವಾರ್ಡುಗಳಲ್ಲಿ ವಿಶ್ರಾಂತಿ ಗೃಹ
ಇದೇ ವೇಳೆ ಮಹಿಳಾ ಪೌರಕಾರ್ಮಿಕರ ಬಹು ಬೇಡಿಕೆಯ ಅಗತ್ಯಗಳಾದ ವಿಶ್ರಾಂತಿ ಗೃಹಗಳ ನಿರ್ಮಾಣದ ಬಗ್ಗೆ ಆಯುಕ್ತರು ಮಾತನಾಡಿ, ಶೀಘ್ರದಲ್ಲೇ ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡುಗಳಲ್ಲಿ ವಿಶ್ರಾಂತಿ ಗೃಹಗಳನ್ನು ನಿರ್ಮಾಣ ಮಾಡಲಾಗುವುದು, ಇದರಿಂದ ಪೌರಕಾರ್ಮಿಕ ಮಹಿಳೆಯರಿಗೆ ಶೌಚಾಯಲ ಸೌಲಭ್ಯ, ಬಟ್ಟೆ ಬದಲಾವಣೆ, ಮತ್ತಿತರ ಮೂಲಭೂತ ಅಗತ್ಯಗಳ ಪೂರೈಕೆಗೆ ಅನುಕೂಲ ಮಾಡಿಕೊಡುವುದಾಗಿ ಆಯುಕ್ತರು ಭರವಸೆ ನೀಡಿದರು.