ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾಸಕ ಸಿ.ಎಸ್.ಪುಟ್ಟರಾಜು ಅವರು ಪಟ್ಟಣದ ಹಲವಾರು ವಾರ್ಡ್‍ಗಳಲ್ಲಿ ರೋಡ್ ನಡೆಸುವ ಮೂಲಕ ಬಿರುಸಿನ ಪ್ರಚಾರ ನಡೆಸಿದರು. ಬೆಳಗ್ಗೆ ಹಾರೋಹಳ್ಳಿ ಗ್ರಾಮದಲ್ಲಿ ಪ್ರಚಾರ ಆರಂಭಿಸಿದ ಸಿ.ಎಸ್.ಪುಟ್ಟರಾಜು ಅವರು ಹಾರೋಹಳ್ಳಿ ಗ್ರಾಮ ಮುಗಿಸಿ ಪಟ್ಟಣದ ಮಹಾಂಕಾಳೇಶ್ವರಿ, ಆದಿಶಕ್ತಿ, ಅನ್ನಪೂಣೇಶ್ವರಿ ದೇವಸ್ಥಾನದಲ್ಲಿ ಪೊಜೆ ಸಲ್ಲಿಸಿ, ಬಸವನಗುಡಿ ಬೀದಿಯಲ್ಲಿರುವ ದರ್ಗಾಕ್ಕೂ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪಟ್ಟಣದ ಮಹಾಂಕಾಳೇಶ್ವರಿ ಬಡಾವಣೆ, ಕೃಷ್ಣಾನಗರ, ಬಸವನಗುಡಿ ಬೀದಿ, ಸುಬ್ರಹ್ಮಣ್ಯ ಬಡಾವಣೆ, ಪೆನ್ಷನ್ ಕಾಲೂನಿ, ಬೀರಶೆಟ್ಟಹಳ್ಳಿ, ಹಿರೋಡೆ ಬೀದಿ, ವಿಸಿ ಕಾಲೂನಿ, ಭೋವಿ ಕಾಲೋನಿ. ತ್ಯಾಗರಾಜ ಕಾಲೂನಿ ಸೇರಿದಂತೆ ವಿವಿದೆಡೆ ಪ್ರಚಾರ ನಡೆಸಿ ಜೆಡಿಎಸ್‍ಗೆ ಮತ ನೀಡುವಂತೆ ಮನವಿ ಮಾಡಿದರು. ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರು ಪ್ರಚಾರಕ್ಕೆ ಹೋದ ಕಡೆಯಲ್ಲ ಕಾರ್ಯಕರ್ತರು, ಮುಖಂಡರು ಭವ್ಯವಾದ ಸ್ವಾಗತ ಕೋರಿದರು. ಹೆಣ್ಣು ಮಕ್ಕಳು ಆರತಿ ಬೆಳಗಿ ನೆಚ್ಚಿನ ನಾಯಕನನ್ನು ಬರಮಾಡಿಕೊಂಡರು.
ಮತಯಾಚನೆಗೆ ಹೋದ ಸಿ.ಎಸ್.ಪುಟ್ಟರಾಜು ಅವರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಈ ವೇಳೆ
ಅವರು ಮಾತನಾಡಿ, ಮೇಲುಕೋಟೆ ಕ್ಷೇತ್ರದ ಶಾಸಕನಾಗಿ ಕ್ಷೇತ್ರದ ಅಭಿವೃದ್ದಿಗೆ ಕೊಟ್ಟಿರುವ ಕೊಡುಗೆಯೇ ನನಗೆ ಶ್ರೀರಕ್ಷೆಯಾಗಲಿದೆ. ಕ್ಷೇತ್ರದ ಮತದಾರರು ಯಾವುದೇ ಸುಳ್ಳು ಪ್ರಚಾರಕ್ಕೆ, ಆರೋಪಕ್ಕೆ ಕಿವಿಗೊಡದೆ ಅಭಿವೃದ್ದಿಗಾಗಿ ಮತ್ತೊಮ್ಮೆ ಜೆಡಿಎಸ್‍ಗೆ ಮತ ನೀಡಲಿದ್ದಾರೆ ಎನ್ನುವ ನಂಬಿಕೆ ನನ್ನಲ್ಲಿ ಅಚಲವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಕೊಟ್ಟಿರುವ ಕೊಡುಗೆ ಅಪಾರ, ಮುಖ್ಯಮಂತ್ರಿಯಾಗಿ ರೈತರ ಸಾಲಮನ್ನಾ ಮಾಡಿದ ದೇಶದ ಏಕೈಕ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗಿದ್ದಾರೆ. ಹಿಂದಿನ ಸಮಿಶ್ರ ಸರಕಾರದಲ್ಲಿ ಕಾಂಗ್ರೆಸ್‍ನವರು ಕೊಟ್ಟ ಕಿರುಕುಳದ ನಡುವೆಯೂ ಸಹ ರೈತರ 25 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದರು. ಇದೀಗ ಮತ್ತೆ ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗೋದನ್ನು ಯಾರಿಂದಲೂ ತಡಯಲು ಸಾಧ್ಯವಿಲ್ಲ. ಎಚ್.ಡಿ.ಕುಮಾರಸ್ವಾಮಿ ಸಿಎಂ ಆದ ಬಳಿಕ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರ ಸಾಲ ಮನ್ನಾ ಮಾಡುವುದರ ಜತೆಗೆ ಪಂಚರತ್ನ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲಿವೆ ಎಂದರು.
ಕ್ಷೇತ್ರದ ಶಾಸಕನಾಗಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ದಿಪಡಿಸಿದ್ದೇನೆ. ರೈತರ ವಿದ್ಯುತ್ ಸಮಸ್ಯೆ ನೀಗಿಸಲು ಹೋಬಳಿಗೆ ಮೂರು ವಿದ್ಯುತ್ ಸಬ್ ಸ್ಟೇಷನ್ ಮಂಜೂರು ಮಾಡಿಸಿದ್ದೇನೆ. ಕ್ಷೇತ್ರದ ಶೈಕ್ಷಣಿಕ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದೇನೆ. ಸಚಿವನಾಗಿದ್ದ ವೇಳೆ 6 ಏತ ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿ ನೀರಾವರಿ ಸೌಲಭ್ಯ ನೀಡಿದ್ದೇನೆ. ಪಟ್ಟಣಕ್ಕೆ ಕುಡಿಯುವ ನೀರು, ಉತ್ತಮ ಕ್ರೀಡಾಂಗಣ, ಮುಖ್ಯರಸ್ತೆ, ಬಡಾವಣೆ ರಸ್ತೆಗಳು ಹೀಗೆ ಅಪಾರ ಕೊಡುಗೆ ನೀಡಿದ್ದೇನೆ. ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ನಿಮ್ಮೆಲ್ಲರ ಕಷ್ಟಕ್ಕೆ ಸ್ಪಂದÀನೆ ನೀಡಿದ್ದೇನೆ. ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಮತ್ತಷ್ಟು ಆಲೋಚನೆಗಳನ್ನು ಹೊಂದಿದ್ದೇನೆ. ದಯಮಾಡಿ ಈ ಚುನಾವಣೆಯಲ್ಲಿ ಅಧಿಕ ಮತಕೊಟ್ಟು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು. ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಪುರಸಭೆ ಅಧ್ಯಕ್ಷೆ ಅರ್ಚನ ಚಂದ್ರು ಸೇರಿದಂತೆ ಎಲ್ಲಾ ಪುರಸಭೆಯ ಸದಸ್ಯರು, ಮುಖಂಡರು ಹಾಜರಿದ್ದರು.
0 ಕಾಮೆಂಟ್‌ಗಳು