ಸಾಂಪ್ರದಾಯಿಕ ಮತಗಟ್ಟೆ
ಪಾಂಡವಪುರ : ತಾಲೂಕಿನ ಚಿನಕುರಳಿ ಗ್ರಾಮದ ಮತಗಟ್ಟೆ ಸಂಖ್ಯೆ 135 ನ್ನು ಸಾಂಪ್ರದಾಯಿಕ ಮತಗಟ್ಟೆಯನ್ನಾಗಿ ರೂಪಿಸಲಾಗಿದೆ.
ಚಿನಕುರಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಈ ಮತಗಟ್ಟೆ ನಿರ್ಮಾಣ ಮಾಡಲಾಗಿದ್ದು, ಮತಗಟ್ಟೆ ಪ್ರವೇಶ ದ್ವಾರವನ್ನು ಗ್ರಾಮೀಣ ಭಾಗದ ಸಾಂಪ್ರದಾಯಿಕ ತೆಂಗಿನ ಗರಿಯ ಚಪ್ಪರದಿಂದ ನಿರ್ಮಿಸಿ ಹೂವುಗಳಿಂದ ಅಲಂಕರಿಸಲಾಗಿದೆ. ಜತೆಗೆ ತೆಂಗಿನ ಗರಿಯ ಪೊಲೀಸ್ ಚೌಕಿಯನ್ನೂ ಸಹ ಸುಂದರವಾಗಿ ನಿರ್ಮಿಸಲಾಗಿದೆ.
ಮತಗಟ್ಟೆ ಗೋಡೆಯ ಮೇಲೆ ಸಂಪೂರ್ಣ ವಿವರಗಳನ್ನು ಮತಗಟ್ಟೆ ಅಧಿಕಾರಿ ಹೆಸರು ಮತ್ತು ಮೊಬೈಲ್ ನಂಬರ್ ಸಮೇತ ಬರೆಯಲಾಗಿದೆ.
ಒಟ್ಟಾರೆ ಈ ಮತಗಟ್ಟೆ ಮದುವೆಯ ಚಪ್ಪರದ ಮನೆಯಂತೆ ಕಂಗೋಳಿಸುತ್ತಿದೆ.
0 ಕಾಮೆಂಟ್‌ಗಳು