ರಾಯಣ್ಣ ಬ್ರಿಗೇಡ್‍ನಿಂದ ಮೇಲುಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಇಂದ್ರೇಶ್ ಪರ ಬೈಕ್ ರ್ಯಾಲಿ

ಪಾಂಡವಪುರ : ರಾಯಣ್ಣ ಬ್ರಿಗೇಡ್ ಸಂಘಟನೆಯ ನೂರಾರು ಸದಸ್ಯರು ಭಾನುವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೈಕ್ ರ್ಯಾಲಿ ನಡೆಸಿ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಎನ್.ಎಸ್.ಇಂದ್ರೇಶ್ ಪರ ಮತ ಯಾಚನೆ ಮಾಡಿದರು.
ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಬೆಳಗ್ಗೆ 11.45ಕ್ಕೆ ಬೈಕ್ ರ್ಯಾಲಿಗೆ ಚಾಲನೆ ನೀಡಲಾಯಿತು. ಹರವು, ಅರಳಕುಪ್ಪೆ, ಸೀತಾಪುರ , ಕಟ್ಟೆರಿ ಮಾರ್ಗವಾಗಿ ವಳಲೆಕಟ್ಟೆಕೊಪ್ಪಲು, ಹುಣಸೇಕಟ್ಟೆ ಕೊಪ್ಪಲು, ಹಾಗನಹಳ್ಳಿ, ಬೇಬಿ, ಬನ್ನಂಗಾಡಿ, ಕೆ.ಮಲ್ಲೇನಹಳ್ಳಿ, ಮಲ್ಲಿಗೆರೆ, ರಾಗಿಮುದ್ದನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೈಕ್ ರ್ಯಾಇ ನಡೆಸಿ ಬಿಜೆಪಿ ಪರ ಮತ ಯಾಚನೆ ಮಾಡಲಾಯಿತು.

ಅರಳಕುಪ್ಪೆ ಗ್ರಾಮದ ಸೀತಾಪುರ ಸರ್ಕಲ್‍ನಲ್ಲಿ ಹಾಲುಮತ ಸಮುದಾಯದ ಮುಖಂಡರು ಡಾ.ಎನ್.ಎಸ್.ಇಂದ್ರೇಶ್ ಅವರಿಗೆ ಟಗರನ್ನು ಕೊಡುಗೆಯಾಗಿ ನೀಡಿ ಸನ್ಮಾನಿಸಿದರು. ಈ ವೇಳೆ ಡಾ.ಇಂದ್ರೇಶ್ ಮಾತನಾಡಿ, ಹಾಲಿನಷ್ಟೇ ಪವಿತ್ರವಾದ ಹಾಲುಮತ ಸಮುದಾಯದವರು ಇಂದು ನನಗೆ ಭಾರಿ ಬೆಂಬಲ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಮತದಾರರು ಬದಲಾವಣೆ ಬಯಸಿದ್ದು, ಎರಡು ಕುಟುಂಬಗಳಿಗೆ ಮೀಸಲಾಗಿದ್ದ ರಾಜಕಾರಣವನ್ನು ಬದಲಾಯಿಸಲು ಮನಸ್ಸು ಮಾಡಿದ್ದಾರೆ. ಈ ನಿಟ್ಟಿನಲ್ಲಿ ನನ್ನ ಗೆಲುವು ಖಚಿತ ಎಂದರು.
ರ್ಯಾಲಿಯಲ್ಲಿ ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ. ತಾಪಂ ಮಾಜಿ ಸದಸ್ಯೆ ಮಂಗಳ ನವೀನ್, ಎಸ್‍ಎನ್‍ಟಿ ಸೋಮಶೇಖರ್, ಚಿಕ್ಕಮರಳಿ ನವೀನ, ಧನಂಜಯ್ಯ, ಭಾಸ್ಕರ ಡೈರಿ ರಾಮು ಮುಂತಾದವರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು