ಅಭಿವೃದ್ಧಿಗಾಗಿ ಪುಟ್ಟರಾಜು’ ಘೋಷವಾಕ್ಯದೊಂದಿಗೆ ಜೆಡಿಎಸ್ ಪರ ಅಂಬಿ ಸುಬ್ಬಣ್ಣ ಪ್ರಚಾರ
ಮೇ 01, 2023
ಪಾಂಡವಪುರ : ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ
ಸಿ.ಎಸ್.ಪುಟ್ಟರಾಜು ಪರವಾಗಿ ಅಂಬರೀಶ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಅಂಬಿ ಸುಬ್ಬಣ್ಣ ತಮ್ಮ
ಬೆಂಬಲಿಗರ ಜತೆ ಇಂದು ಚುನಾವಣಾ ಪ್ರಚಾರ ನಡೆಸಿದರು. ಬಳಿಕ ಅವರು ಮಾತನಾಡಿ ಈಗಾಗಲೇ ತಾಲೂಕು ಅಂಬರೀಶ್ ಅಭಿಮಾನಿಗಳ ಸಂಘದ
ವತಿಯಿಂದ ಜೆಡಿಎಸ್ ಅಭ್ಯರ್ಥಿ ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ನಾವು ಬೆಂಬಲ ಸೂಚಿಸಿದ್ದೇವೆ. ಅದರ ಪ್ರಕಾರ ಇಂದು
ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ತಾಲೂಕಿನಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಅಂಬರೀಶ್ ಅಭಿಮಾನಿಗಳು
ಇದ್ದು, ಅವರೊಂದಿಗೂ ಮೂರು ಸಭೆಗಳನ್ನು ನಡೆಸಲಾಗಿದೆ. ಎಲ್ಲರೂ ಸಹ ಪುಟ್ಟರಾಜು ಅವರನ್ನು ಬೆಂಬಲಿಸಲು
ಒಪ್ಪಿಸಿದ್ದಾರೆ. ಈ ನಿಟ್ಟಿನಲ್ಲಿ ನಾವು ಇಂದು ಅಧಿಕೃತವಾಗಿ
ಅಭಿವೃದ್ಧಿಗಾಗಿ ಪುಟ್ಟರಾಜು ಘೋಷವಾಕ್ಯದೊಂದಿಗೆ ಚುನಾವಣಾ
ಪ್ರಚಾರ ನಡೆಸುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಕೆನ್ನಾಳು
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ವೇತಾ ಸುರೇಶ್ ಇದ್ದರು.
0 ಕಾಮೆಂಟ್‌ಗಳು