ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ: ಚಿತ್ರ ನಟಿ ತಾರಾ ಅನುರಾಧ ವಿಶ್ವಾಸ

ಪಾಂಡವಪುರ: ರಾಜ್ಯದಲ್ಲಿ ಬದಲಾವಣೆಯ ಪರ್ವ ಆರಂಭಗೊಂಡಿದ್ದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಚಿತ್ರ ನಟಿ ತಾರಾ ಅನುರಾಧ ಹೇಳಿದರು.
ತಾಲೂಕಿನ ಜಕ್ಕನಹಳ್ಳಿ ಸರ್ಕಲ್ ನಲ್ಲಿ ಮೇಲುಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಎನ್.ಎಸ್‌.ಇಂದ್ರೇಶ್ ಪರವಾಗಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿ ಬಳಿಕ ಮಾತನಾಡಿದರು.
ಬಿಜೆಪಿಯಲ್ಲಿ ಬಾರಿ 72 ಮಂದಿ ಹೊಸಬರಿಗೆ ಟಿಕೆಟ್ ನೀಡಿದ್ದಾರೆ. ಅದೇ ರೀತಿ ಮೇಲುಕೋಟೆ ಕ್ಷೇತ್ರದಲ್ಲೂ ಸಹ ಬಿಜೆಪಿ ಅಭ್ಯರ್ಥಿ ಡಾ.ಎನ್.ಎಸ್.ಇಂದ್ರೇಶ್ ಅವರಿಗೆ ಟಿಕೆಟ್ ನೀಡಿದ್ದಾರೆ. ಸರಳ, ಸಜ್ಜನಿಕೆಯ ವ್ಯಕ್ತಿಯಾದ ಇಂದ್ರೇಶ್ ಅವರು ಕ್ಷೇತ್ರದಲ್ಲಿ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಕ್ಷೇತ್ರದ ಮತದಾರರು ಬಿಜೆಪಿಗೆ ಮತಕೊಟ್ಟು ಇಂದ್ರೇಶ್ ಅವರನ್ನು ಗೆಲ್ಲಿಸಿ ವಿಧಾನ ಸಭೆಗೆ ಕಳುಹಿಸಿಕೊಡಬೇಕು ಎಂದುಮನವಿ ಮಾಡಿದರು.
ಬಿಜೆಪಿ ಪಕ್ಷ ಜನರಿಗೆ ಸುಳ್ಳು ಆಶ್ವಾಸನೆ ನೀಡಿ ಜನರಿಗೆ ಮೋಸ ಮಾಡಿಲ್ಲ.‌ ಕೇಂದ್ರ ಹಾಗೂ ರಾಜ್ಯದ ಟಬ್ಬಲ್ ಇಂಜಿನ್  ಸರಕಾರಗಳು ಕೊಟ್ಟ ಮಾತಿನಂತೆ ನಡೆದುಕೊಂಡು ಜನಪರ ಕಾರ್ಯಕ್ರಮ ನೀಡಿವೆ. ಮೇಲುಕೋಟೆಯಲ್ಲಿ ದೀಪಾವಳಿ ಹಬ್ಬವನ್ನು ಇಂದಿಗೂ ಕರಾಳ ದಿನವನ್ನಾಗಿ ಆಚರಣೆ ಮಾಡುತ್ತಾರೆ. ಇದಕ್ಕೆ ಕಾರಣವಾದ ಟಿಪ್ಪು ಸುಲ್ತಾನ್ ಜಯಂತಿಯನ್ನು  ಕೆಲವರು ಆಚರಣೆ ಮಾಡುತ್ತಾರೆ‌. ದೇಶದಲ್ಲಿ ಬಿಜೆಪಿ ಗೆದ್ದರೆ ದೇಶದ ಜನತೆ ಪಟಾಕಿ ಹೊಡೀತಾರೆ. ಅದೇ ಬಿಜೆಪಿ ಸೋತರೆ ಪಕ್ಕದ ಪಾಕಿಸ್ತಾನದವರು ಪಟಾಕಿ ಹೊಡೀತಾರೆ ಎಂದು ಕಿಡಿಕಾರಿದರು.
ಸಚಿವ ಕೆ.ಸಿ‌.ನಾರಾಯಣಗೌಡ ಮಾತನಾಡಿ,  ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎಂದು ಬೀಗುತ್ತಿದ್ದರು. ಈಪಾಂಡವಪುರ: ರಾಜ್ಯದಲ್ಲಿ ಬದಲಾವಣೆಯ ಪರ್ವ ಆರಂಭಗೊಂಡಿದ್ದು, ಬಿಜೆಪಿ ಪಕ್ಷ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಚಿತ್ರನಟಿ ತಾರಾಅನುರಾಧ ಹೇಳಿದರು.
ತಾಲೂಕಿನ ಜಕ್ಕನಹಳ್ಳಿ ಸರ್ಕಲ್ ನಲ್ಲಿ ಮೇಲುಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಎನ್.ಎಸ್‌.ಇಂದ್ರೇಶ್ ಪರವಾಗಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿ ಬಳಿಕ ಮಾತನಾಡಿದರು.
ಬಿಜೆಪಿಯಲ್ಲಿ ಈ ಭಾರಿ 72ಮಂದಿ ಹೊಸಬರಿಗೆ ಟಿಕೆಟ್ ನೀಡಿದ್ದಾರೆ. ಅದೇರೀತಿ ಮೇಲುಕೋಟೆ ಕ್ಷೇತ್ರದಲ್ಲೂ ಸಹ ಬಿಜೆಪಿ ಅಭ್ಯರ್ಥಿ ಡಾ.ಎನ್.ಎಸ್.ಇಂದ್ರೇಶ್ ಅವರಿಗೆ ಟಿಕೆಟ್ ನೀಡಿದ್ದಾರೆ. ಸರಳ, ಸಜ್ಜನಿಕೆಯ ವ್ಯಕ್ತಿಯಾದ ಇಂದ್ರೇಶ್ ಅವರು ಕ್ಷೇತ್ರದಲ್ಲಿ ಸಾಕಷ್ಟು ಸಮಾಜಸೇವೆ ಮಾಡಿದ್ದಾರೆ. ಕ್ಷೇತ್ರದ ಮತದಾರರು ಬಿಜೆಪಿಗೆ ಮತಕೊಟ್ಟು ಇಂದ್ರೇಶ್ ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಡಬೇಕು ಎಂದು‌ ಮನವಿ ಮಾಡಿದರು.

ಬಿಜೆಪಿ ಪಕ್ಷ ಜನರಿಗೆ ಸುಳ್ಳು ಆಶ್ವಾಸನೆ ನೀಡಿ ಜನರಿಗೆ ಮೋಸ ಮಾಡಿಲ್ಲ.‌ ಕೇಂದ್ರ ಹಾಗೂ ರಾಜ್ಯದ ಟಬ್ಬಲ್ ಇಂಜಿನ್ ಸರಕಾರಗಳು ಕೊಟ್ಟ ಮಾತನಂತೆ ನಡೆದುಕೊಂಡು ಜನಪರ ಕಾರ್ಯಕ್ರಮ ನೀಡಿವೆ. ಮೇಲುಕೋಟೆಯಲ್ಲಿ ದೀಪಾವಳಿ ಹಬ್ಬವನ್ನು ಇಂದಿಗೂ ಕರಾಳ ದಿನವನ್ನಾಗಿ ಆಚರಣೆ ಮಾಡುತ್ತಾರೆ. ಇದಕ್ಕೆ ಕಾರಣವಾದ ಟಿಪ್ಪು ಸುಲ್ತಾನ್ ಜಯಂತಿಯನ್ನು  ಕೆಲವರು ಆಚರಣೆ ಮಾಡುತ್ತಾರೆ‌. ದೇಶದಲ್ಲಿ ಬಿಜೆಪಿ ಗೆದ್ದರೆ ದೇಶದ ಜನತೆ ಪಟಾಕಿ ಹೊಡೀತಾರೆ. ಅದೇ ಬಿಜೆಪಿ ಸೋತರೆ ಪಕ್ಕದ ಪಾಕಿಸ್ತಾನದವರು ಪಟಾಕಿ ಹೊಡೀತಾರೆ ಎಂದು ಕಿಡಿಕಾರಿದರು.
ಸಚಿವ ಕೆ.ಸಿ‌.ನಾರಾಯಣಗೌಡ ಮಾತನಾಡಿ,  ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎಂದು ಬೀಗುತ್ತಿದ್ದರು. ಹೀಗಾಗಲೆ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡಿದ್ದೇವೆ. ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿ ನಾಲ್ಕು ಸ್ಥಾನಕ್ಕಿಂತ ಹೆಚ್ಚು ಗೆಲ್ಲುವ ಮೂಲಕ ಭದ್ರಕೋಟೆಯನ್ನು ಪುಡಿ ಪುಡಿ ಮಾಡುತ್ತೇವೆ ಎಂದು ಹರಿಹಾಯ್ದರು.
ನಾನು ಜೆಡಿಎಸ್ ನಿಂದ ಎರಡು ಬಾರಿ ಶಾಸಕನಾಗಿದ್ದೆ, ಅಲ್ಲಿ ನನಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಬಿಜೆಪಿಗೆ ಬಂದು ಖುಷಿಯಾಗಿದ್ದೇನೆ‌. 1800ಕೋಟಿಗೂ ಅಧಿಕ ಹಣತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಿಸಿದ್ದೇನೆ. ಹಾಗಾಗಿ ಜನರ ಪರ ಆಡಳಿತಕ್ಕಾಗಿ ಬಿಜೆಪಿಗೆ ಮತನೀಡಿ ಎಂದರು.
ಅಭ್ಯರ್ಥಿ ಡಾ.ಎನ್.ಎಸ್.ಇಂದ್ರೇಶ್ ಮಾತನಾಡಿ, ಕ್ಷೇತ್ರದಲ್ಲಿ ಇಲ್ಲಿಯ ತನಕ ಅಧಿಕಾರ ನಡೆಸಿದವರು‌ ಇಲ್ಲಿಯವರೆಗೆ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸಿಕೊಡಲು ಸಾಧ್ಯವಾಗಿಲ್ಲ. ನಮ್ಮೂರಿನ‌ ಮಹಿಳೆಯರು ಉದ್ಯೋಗ ಅರಸಿ ಬೇರೆಡೆಗೆ ಆಟೋದಲ್ಲಿ ಹೋಗೋದು ನೋಡಿದರೆ ಹೊಟ್ಟೆ ಉರಿಯುತ್ತದೆ. ದಯಮಾಡಿ ಈ ಬಾರಿ ನಮಗೆ ಕ್ಷೇತ್ರದ ಜನತೆ ಮತ ನೀಡಿದರೆ ಮನೆಗೊಂದು ಉದ್ಯೋಗ ದೊರಕಿಸಿಕೊಟ್ಟು ಕುಟುಂಬಗಳಿಗೆ ನೆರವಾಗುತ್ತೇನೆ ಎಂದರು.
ಸಂದರ್ಭದಲ್ಲಿ  ಬಿಜೆಪಿ ಮುಖಂಡರಾದ ಎಸ್.ಎನ್.ಟಿ. ಸೋಮಶೇಖರ್, ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಚಿತ್ರ ನಟ ಅರವಿಂದ್, ಬಿಜೆಪಿ  ಅಧ್ಯಕ್ಷ ಅಶೋಕ್,  ಮಂಗಳನವೀನ್, ಪರಿಮಳ ಇಂದ್ರೇಶ್, ಪುರುಷೊತ್ತಮ, ಮಂಜುಳ ಶಂಕರ್ ನಾಗ್, ಕದಲಗೆರೆ ಅಶೋಕ್, ಚಿಕ್ಕಮರಳಿ ನವೀನ್ ಸೇರಿದಂತೆ ಹಲವರು ಹಾಜರಿದ್ದರು
.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು