ಮೇ 31 ರಂದು ಭಾರತ್ ಕ್ಯಾನ್ಸರ್ ಆಸ್ಪತ್ರೆಯಿಂದ ವಿಶ್ವ ತಂಬಾಕು ಮುಕ್ತ ದಿನ ಆಚರಣೆ : ಜಾಗೃತಿ ಜಾಥಾ

 

ಮೈಸೂರು : ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮ ಹಾಗೂ ಈ ಚಟದಿಂದ ಹೊರಬರುವ ಬಗೆ ಕುರಿತಂತೆ ಭಾರತ್ ಕ್ಯಾನ್ಸ
ರ್ ಆಸ್ಪತ್ರೆ ವತಿಯಿಂದ ಮೇ 31 ರಂದು ತಂಬಾಕು ಮುಕ್ತ
ಸಮಾಜ ನಿರ್ಮಾಣ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ವೈ.ಎಸ್.
ಮಾಧವಿ ತಿಳಿಸಿದರು.
ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವ
ಸ್ಥಾನದಿಂದ ಹೊರಡುವ ಜಾಥಾದಲ್ಲಿ ಸುಮಾರು 1200
ಮಂದಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಹಾಗೆಯೇ,
ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಜಾಥಾದಲ್ಲಿ
ಭಾಗವಹಿಸುವಂತೆ ಅವರು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ
ಕೋರಿದರು.
ತ೦ಬಾಕು ಚಟ ನೋವಿನಿಂದೊಡಗೂಡಿದ ಸಾವಿಗೆ
ಕಾರಣವಾಗುತ್ತದೆ. ಅಲ್ಲದೆ, ತಂಬಾಕು ಚಟವುಳ್ಳವರು
ಮಾತ್ರ ವಲ್ಲ ಅವರ ಕುಟುಂಬದವರು, ಇನ್ನಿತರರ ಮೇಲೂ
ಪರಿಣಾಮ ಬೀರುತ್ತದೆ. ಹೀಗಾಗಿ ಈಗಿನಿ೦ದಲೇ ಈ ಚಟ
ತ್ಯಜಿಸುವುದು ಸೂಕ್ತ ಎಂಬ ಅರಿವು ಮೂಡಿಸಲಾಗುವುದು
ಎಂದರು. ಬೀಡಿ ಸಿಗರೇಟು ನಂತರ ಹೊಗೆ ಉಂಟು
ಮಾಡುವ ತಂಬಾಕು ಸೇವಿಸುತ್ತಿದ್ದು, 200 ಮಿಲಿಯನ್‌ ಭಾರತೀಯರು ಗುಟ್ಕಾ, ಜರ್ದಾವನ್ನು ತಿನ್ನುತ್ತಿದ್ದಾರೆ.
ತಂಬಾಕು ಸೇವನೆ ವ್ಯಸನಕಾರಿಯಾಗಿದ್ದು, ತಂಬಾಕಿನಲ್ಲಿನ
ನಿಕೋಟಿನ್ ಎಂಬುವ ಅಂಶ ಉತ್ತೇಜಕದಂತೆ ಕೆಲಸ
ಮಾಡುತ್ತದೆ ಮತ್ತು ಮನುಷ್ಯರನ್ನು ಅದರ ದಾಸರನ್ನಾಗಿಸು
ತ್ತದೆ ಎ೦ದು ಅವರು ಹೇಳಿದರು.
ತ೦ಬಾಕಿನಲ್ಲಿ ಸುಮಾರು 7000 ರಾಸಾಯನಿಕ ಅಂಶ
ಗಳಿದ್ದು, ಅದರಲ್ಲಿನ 70 ರಷ್ಟು ಅಂಶಗಳು ಕ್ಯಾನ್ಸರ್‌ಕಾರಗ
ಳಾಗಿವೆ. ತಂಬಾಕು ಸೇವನೆಯಿಂದ ಬಾಯಿ, ಗಂಟಲು,
ಅನ್ನನಾಳ, ಶ್ವಾಸಕೋಶದ ಕ್ಯಾನ್ಸರ್‌ಗಳಿಗೆ ನೇರ ಕಾರಣವಾ
ಗಿದ್ದು, ಅದಲ್ಲದೆ ಜಠರ, ಮೂತ್ರಕೋಶ ಮುಂತಾದ
ಕ್ಯಾನ್ಸಗಳು ಸಂಭವಿಸುತ್ತದೆ. ಜನತೆ ತಂಬಾಕು ಚಟದಿಂದ
ದೂರ ಇರಬೇಕು ಎಂದು ಅವರು ಮನವಿ ಮಾಡಿದರು.
ಆಸ್ಪತ್ರೆ ನಿರ್ದೇಶಕಿ ಅ೦ಜಲಿ ಅಜಯ್‌ಕುಮಾರ್, ಡಾ.
ವಿನಯ್‌ಕುಮಾರ್ ಮುತ್ತಗಿ, ಡಾ. ರಕ್ಷಿತ್ ಶೃಂಗೇರಿ,
ಡಾ. ಅಭಿಲಾಶ್, ನಿರ್ಮಲಾ ಕೆ. ಮೂರ್ತಿ ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು