ಚಾಮರಾಜನಗರ: ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣವಾಗಿದ್ದರಿಂದ ಮನನೊಂದು ನಗರದ ಜೆಎಸ್‍ಎಸ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗುಂಡ್ಲುಪೇಟೆ ತಾಲ್ಲೂಕಿನ ಮೂಡಗೂರು ಗ್ರಾಮದ ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಪಿಸಿಎಂಸಿಎಸ್ (ಕಂಪ್ಯೂಟರ್ ಸೈಯನ್ಸ್) ವಿದ್ಯಾರ್ಥಿನಿಯಾಗಿದ್ದ ವಿಜಯಲಕ್ಷ್ಮಿ, ಪರೀಕ್ಷೆ ಮುಗಿದ ನಂತರ ಸಿಇಟಿ ಸಿದ್ಧತೆ ಮಾಡಿಕೊಳ್ಳುವುದಕ್ಕಾಗಿ ಹಾಸ್ಟೆಲ್ ನಲ್ಲಿದ್ದಳು. ಶುಕ್ರವಾರ ಬೆಳಿಗ್ಗೆ ಫಲಿತಾಂಶ ನೋಡಿದ್ದಾಳೆ.ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣಗೊಂಡಿರುವುದು ತಿಳಿಯುತ್ತಿದ್ದಂತೆಯೇ ಹಾಸ್ಟೆಲ್ ನ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
0 ಕಾಮೆಂಟ್‌ಗಳು