ನಾಳೆ ಪವಿತ್ರ ರಂಜಾನ್ ಹಬ್ಬ (ಈದುಲ್ ಫಿತರ್) ಆಚರಣೆ

ಮೈಸೂರು : ದಾನ ಧರ್ಮ, ಸಹೋದರತ್ವ, ಶಾಂತಿ, ಸೌಹಾರ್ದತೆ, ಸಹಬಾಳ್ವೆಯ ಸಂದೇಶ ಸಾರುವ ಪವಿತ್ರ ರಂಜಾನ್ ಹಬ್ಬವನ್ನು ನಾಳೆ (ಏಪ್ರಿಲ್-22) ಆಚರಿಸಲಾಗುವುದು.

ಇಂದು ಸಂಜೆ ಚಂದ್ರದರ್ಶನವಾದ ಹಿನ್ನಲೆಯಲ್ಲಿ ನಾಳೆಹಬ್ಬ ಆಚರಿಸುವ ಬಗ್ಗೆ ಅಧಿಕೃತ ಘೋಷಣೆಯಾಗಿದೆ.

ಒಂದು ತಿಂಗಳ ನಿಯಮಿತ ಉಪವಾಸದ ಮೂಲಕ ಎಲ್ಲರೂ ರಂಜಾನ್ ಮಾಸವನ್ನು  ಶ್ರದ್ಧಾ ಭಕ್ತಿಯಿಂದ ಆಚರಿಸಿದ್ದರು. ಈ ಪವಿತ್ರ ಮಾಸದಲ್ಲಿ ಸೂರ್ಯಾಸ್ತಮನಕ್ಕೂ ಮುನ್ನ ಉಪಹಾರ ಸೇವಿಸಿ ಸಂಜೆ ಸೂರ್ಯಾಸ್ತಮನದ ನಂತರ ಉಪವಾಸ ಬಿಡುವುದು ವಾ ಡಿಕೆ.ಈ ಮಧ್ಯೆ ಏನನ್ನೂ ತಿನ್ನುವುದಾಗಲಿ, ಕುಡಿಯುವುದು ಮಾಡುವುದಿಲ್ಲ. ಉಪವಾಸ ವ್ರತದಲ್ಲಿ ಭಕ್ತಿಯಿಂದ ನಮಾಜ್ ಮಾಡಲಾಗುತ್ತದೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು