ಪಂಚರತ್ನ ಕಾರ್ಯಕ್ರಮ ಅನುಷ್ಠಾನದಿಂದ ರೈತರ ಬದುಕು ಸುಧಾರಣೆ : ಕಟ್ಟೇರಿ ಪ್ರಸನ್ನ
ಏಪ್ರಿಲ್ 24, 2023
ಪಾಂಡವಪುರ: ಪಂಚರತ್ನ
ಕಾರ್ಯಕ್ರಮ ಅನುಷ್ಠಾನದಿಂದ ರೈತರ ಬದುಕು ಸುಧಾರಣೆಯಾಗಲಿದ್ದು, ಹೀಗಾಗಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ
ಈ ಬಾರಿ ಜೆಡಿಎಸ್ ಗೆಲುವು ಖಚಿತ ಎಂದು ನೂತನ ಜೆಡಿಎಸ್ ಮುಖಂಡ ಕಟ್ಟೇರಿ ಪ್ರಸನ್ನ ಹೇಳಿದರು. ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ
ನಡೆದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಲಯನ್ ಎಲ್.ಕೆ.ಜಯರಾಮು ಅವರ ಜತೆ ಜೆಡಿಎಸ್ ಸೇರ್ಪಡೆಗೊಂಡು
ಅವರು ಮಾತನಾಡಿದರು. ಮೇಲುಕೋಟೆ ಕ್ಷೇತ್ರದಲ್ಲಿ
ಕಳೆದ ೫ ವರ್ಷಗಳಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ನೀರಾವರಿ ಯೋಜನೆಗಳು ಪೂರ್ಣಗೊಂಡು
ರೈತರು ಸಂತೋಷದಲ್ಲಿದ್ದಾರೆ. ರಸ್ತೆ ಅಭಿವೃದ್ಧಿ, ವಿವಿಧ ಗ್ರಾಮಗಳಲ್ಲಿ ಸಮುದಾಯ ಭವನಗಳು,, ನಾಲೆಗಳ
ಆಧುನೀಕರಣ ನಡೆದಿವೆ. ಅಲ್ಲದೇ ಗ್ರಾಮಾಂತರ ಪ್ರದೇಶಗಳಲ್ಲೂ ಸಿಸಿ ರಸ್ತೆಗಳು ನಿರ್ಮಾಣವಾಗಿವೆ. ಈ ಕಾರಣಕ್ಕಾಗಿ
ಶಾಸಕ ಸಿ.ಎಸ್.ಪುಟ್ಟರಾಜು ಮತ್ತೊಮ್ಮೆ ಗೆಲ್ಲಬೇಕು ಹಾಗೂ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ
ಬಂದಲ್ಲಿ ಅವರು ಸಚಿವರಾಗಿ ಮೇಲುಕೋಟೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲಿದ್ದಾರೆ ಎಂದರು. ಹೆಚ್.ಡಿ.ಕುಮಾರಸ್ವಾಮಿ
ಅವರು ಮುಖ್ಯಮಮಂತ್ರಿ ಆಗುತ್ತಿದ್ದಂತೆ ಪಂಚರತ್ನ ಕಾರ್ಯಕ್ರಮಗಳ ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದ್ದು,
ಮಹಿಳೆಯರ ಸಾಲಮನ್ನಾ, ಯುವಕರಿಗೆ ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಮಾಡಲಿದ್ದಾರೆ.
ಇದರಿಂದ ಈ ಬಾರಿ ತಾವು ಜೆಡಿಎಸ್ ಪರ ಪ್ರಚಾರ ಮಾಡುವುದಾಗಿ ಹೇಳಿದರು. ಜೆಡಿಎಸ್ಮುಖಂಡರಾದಲಯನ್ಕೃಷ್ಣ, ರಾಜಣ್ಣ, ಹೊಸೂರುರಮೇಶ್, ಬಲರಾಮು, ಬಿವೈಬಾಬು, ಹೊಸಕೋಟೆಪುಟ್ಟಣ್ಣಮುಂತಾದವರುಇದ್ದರು. ಈ ಸಂದರ್ಭದಲ್ಲಿ ಲಯನ್ ಎಲ್.ಕೆ.ಜಯರಾಮ್, ಟಿಎಪಿಸಿಎಂಎಸ್ಅಧ್ಯಕ್ಷಡಿ.ಶ್ರೀನಿವಾಸ್, ಪುರಸಭೆಸದಸ್ಯಆರ್.ಸೋಮಶೇಖರ್ಮತ್ತಿತರಜೆಡಿಎಸ್ಮುಖಂಡರುಲಯನ್ಜಯರಾಂಮತ್ತುಅವರಗೆಳೆಯರನ್ನುಪಕ್ಷದಶಾಲುಹಾಕಿಗೌರವದಿಂದಬರಮಾಡಿಕೊಂಡರು.
0 ಕಾಮೆಂಟ್‌ಗಳು