ಪಾಂಡವಪುರ : ತಾಲೂಕಿನ ಹಿರೇಮರಳಿ ಗ್ರಾಪಂ ಮಾಜಿ ಸದಸ್ಯರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾರೋಹಳ್ಳಿ ಗ್ರಾಮದ ಸಮೀಪವಿರುವ ಫ್ರೆಂಚರ ಸಮಾಧಿ ಸ್ಥಳದ ಬಳಿ ನಡೆದಿದೆ.
ಬಳೆಅತ್ತಿಗುಪ್ಪೆ ಗ್ರಾಮದ ಬಿ.ಸಿ.ಲೋಕೇಶ್(50) ಮೃತರು. ಭಾನುವಾರ ರಾತ್ರಿ ಸುಮಾರು 8.30ಕ್ಕೆ ಮನೆಯಿಂದ ಹೋದವರು ವಾಪಸ್ ಬಂದಿರಲಿಲ್ಲ. ಇಂದು ಬೆಳಿಗ್ಗೆ ಲೋಕೇಶ್ ಶವ ಪಟ್ಟಣದ ಹಾರೋಹಳ್ಳಿ ಗ್ರಾಮದ ಬಾಜುವಿನಲ್ಲಿರುವ ಫ್ರಂಚರ ಸಮಾಧಿ ಸ್ಥಳದ ಬಳಿ ಪತ್ತೆಯಾಗಿದೆ. ಶವದ ಸಮೀಪ ಲೋಕೇಶ್ ಅವರ ಬೈಕ್ ಸಹ ದೊರಕಿದೆ.
ಶವದ ಮೇಲೆ ಕೆಲವು ಗಾಯದ ಗುರುತುಗಳು ಕಂಡು ಬಂದಿವೆ. ಬಹಿರ್ದೆಸೆಗೆ ಹೋಗಲು ಈ ಸ್ಥಳಕ್ಕೆ ಬಂದಿದ್ದು, ಕಿರಿದಾದ ರಸ್ತೆಯಲ್ಲಿ ಬೈಕ್‍ನಿಂದ ಬಿದ್ದು ಗಾಯಗೊಂಡು ಮೃತಪಟ್ಟಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಪಾಂಡವಪುರ ಉಪ ವಿಭಾಗೀಯ ಸಾರ್ವಜನಿಕರ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಯಿತು. ಈ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತ ಲೋಕೇಶ್ ಅವರ ಪತ್ನಿಯೂ 10 ವರ್ಷಗಳ ಹಿಂದೆ ಮೃತಪಟ್ಟಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ.
0 ಕಾಮೆಂಟ್‌ಗಳು