ಲಯನ್ ಎಲ್.ಕೆ.ಜಯರಾಮು ಜೆಡಿಎಸ್ ಸೇರ್ಪಡೆ ಸಾಧ್ಯತೆ?

 ನಜೀರ್ ಅಹಮದ್,ಪಾಂಡವಪುರ

ಪಾಂಡವಪುರ : ಸಮಾಜ ಸೇವಕ ಬಿ.ರೇವಣ್ಣ ಅಭಿಮಾನಿಗಳ ಸಂಘದ ಪ್ರಮುಖ ಮುಖಂಡ ಲಯನ್ ಎಲ್.ಕೆ.ಜಯರಾಮ್ ಶಾಸಕ ಸಿ.ಎಸ್.ಪುಟ್ಟರಾಜು ಸಮ್ಮುಖದಲ್ಲಿ ಶೀಘ್ರದಲ್ಲೇ ಜೆಡಿಎಸ್ ಸೇರ್ಪಡೆ ಆಗುವ ಸಾಧ್ಯತೆ ಹೆಚ್ಚಾಗಿದ್ದು, ಇಂದು ಅಧಿಕೃತ ಘೋಷಣೆ ಪ್ರಕಟಿಸುವ ಸಂಭವವಿದೆ.
ಪಾಂಡವಪುರ ತಾಲೂಕು ಲಕ್ಷ್ಮಿಸಾಗರ ಗ್ರಾಮದವರಾದ ಎಲ್.ಕೆ.ಜಯರಾಮು ಮೂಲತಃ ಜೆಡಿಎಸ್ ಮುಖಂಡರಾಗಿದ್ದು, ಇತ್ತೀಚೆಗೆ ತಮ್ಮದೇ ಗ್ರಾಮದವರಾದ ಬಿ.ರೇವಣ್ಣ ಜತೆ ಗುರುತಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿದ್ದರು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಲಯನ್ ಎಲ್.ಕೆ.ಜಯರಾಮು ಶಾಸಕ ಸಿ.ಎಸ್.ಪುಟ್ಟರಾಜು ಅವರು ಕ್ಷೇತ್ರದಲ್ಲಿ ನಡೆಸಿರುವ
ಭಾರಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೆಚ್ಚಿ ಪ್ರಸಕ್ತ ಚುನಾವಣೆಯಲ್ಲಿ ಅವರ ಕೈ ಬಲಪಡಿಸಲು ಜೆಡಿಎಸ್ ಸೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಯನ್ ಜಯರಾಮು ಜತೆ ತಾಲೂಕು ಮತ್ತಷ್ಟು ಮುಖಂಡರು ಜೆಡಿಎಸ್ ಸೇರುತ್ತಿದ್ದಾರೆ ಎನ್ನಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು