ಬಸ್ಸು- ಆಟೋ ಮುಖಾಮುಖಿ ಡಿಕ್ಕಿ: ಐವರಿಗೆ ಗಾಯ ಒಬ್ಬರ ಸ್ಥಿತಿ ಗಂಭೀರ

ಶಾರುಕ್ ಖಾನ್ ಹನೂರು
ಹನೂರು: ಬಸ್ಸು ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ  ಐದು ಜನರಿಗೆ ಗಾಯಗಳಾಗಿ ಒಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಎಲ್ಲೇಮಾಳ ಸಮೀಪದ ಆಂಜನೇಯ ದೇವಸ್ಥಾನದ ಬಳಿ ಶುಕ್ರವಾರ ಸಂಜೆ ನಡೆದಿದೆ.
ಪೂಜಾ, ಮಂಜುಳ, ಮಹದೇವಮ್ಮ,  ಪುಟ್ಟ ಮಗು ಸಾತ್ವಿಕ್ ಗಾಯಗೊಂಡವರು.
ಐಶು ಎಂಬ ಬಾಲಕಿಯ ಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳನ್ನು ಪೊಲೀಸರು, ಸಾರ್ವಜನಿಕರ ಸಹಾಯದೊಂದಿಗೆ ಆಸ್ಪತ್ರೆಗೆ ಕಳಿಸಿದರು.
ಗಾಯಗೊಂಡವರೆಲ್ಲಾ ಮೈಸೂರು ಕಡೆಯವರಾಗಿದ್ದು ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು