· ಬೇಬಿಬೆಟ್ಟದಲ್ಲಿ ಅದ್ಧೂರಿಯಾಗಿ ನಡೆದ ಸರಳ ವಿವಾಹ
· ಹೊಸ ದಾಂಪತ್ಯಕ್ಕೆ ಕಾಲಿಟ್ಟ ೧೯ ನವ ಜೋಡಿಗಳು
ನಜೀರ್ ಅಹಮದ್, ಪಾಂಡವಪುರ
ಪಾಂಡವಪುರ: ಚಿರತೆ ಹಾವಳಿ, ಜಾನುವಾರುಗಳ ಚರ್ಮಗಂಟು ರೋಗದ ಭೀತಿಯ ನಡುವೆ
ನಿರಾತಂಕವಾಗಿ ನಡೆದ ಬೇಬಿ ಬೆಟ್ಟದ ಭಾರಿ ದನಗಳ ಜಾತ್ರೆಯ ಪ್ರಮುಖ ಆಕರ್ಷಣೆಯಾದ ಸಾಮೂಹಿಕ ಸರಳ ವಿವಾಹದಲ್ಲಿ
ಇಂದು ೧೯ ಜೋಡಿಗಳು ಹೊಸ ದಾಂಪತ್ಯಕ್ಕೆ ಕಾಲಿಟ್ಟರು.
ಅವಳಿ ಸಹೋದರಿಯರು ಮತ್ತು ಅವಳಿ ಸಹೋದರರ ನಡುವೆ ನಡೆದ ಮದುವೆ ಸರಳ ಸಾಮೂಹಿಕ
ವಿವಾಹದ ಪ್ರಮುಖ ಆಕರ್ಷಣೆಯಾಗಿತ್ತು. ಶುಕ್ರವಾರ ಬೆಳಿಗ್ಗೆ ೯ ಗಂಟೆಯಿಂದ ೯.೨೫ಕ್ಕೆ ಸಲ್ಲುವ ಮೀನಾ
ಲಗ್ನದಲ್ಲಿ ಶ್ರೀ ದುರ್ದಂಡೇಶ್ವರ ಮಠದ ಪೀಠಾಧಿಪತಿ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹಾಗೂ
ಶ್ರೀ ರಾಮಯೋಗೀಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ ಸಾನಿಧ್ಯದಲ್ಲಿ ಸರಳ ವಿವಾಹ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ,
ಇದೊಂದು ಪುಣ್ಯಕ್ಷೇತ್ರವಾಗಿದೆ. ಬೆಳಕಿನ ನಾಡು ಬೆಳಗಾವಿಯಿಂದ ಕಗ್ಗತ್ತಲಿನಲ್ಲಿದ್ದ ಬೇಬಿ ಬೆಟ್ಟಕ್ಕೆ
ನಮ್ಮ ಗುರುಗಳಾದ ಶ್ರೀ ದುರ್ದಂಡೇಶ್ವರ ಮಹಂತ ಶಿವಯಯೋಗಿಗಳು ಆಗಮಿಸಿ ಇಲ್ಲಿ ಬೆಳಕು ಮೂಡಿಸಿದರು. ಹಿಂದೆ
ಮಠದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳಷ್ಟು ಇತ್ತು. ಅದನ್ನೂ ಸಹ ಸ್ಥಳೀಯ ಶಾಸಕರಾದ ಸಿ.ಎಸ್.ಪುಟ್ಟರಾಜು
ನೇತೃತ್ವದಲ್ಲಿ ಸಂಪೂರ್ಣ ನೀರಿನ ಸಮಸ್ಯೆ ನಿವಾರಿಸಲಾಗಿದೆ. ದೇವಾಲಯ ಮತ್ತು ಮಠವನ್ನೂ ಸಹ ನವೀಕರಣ
ಮಾಡಲಾಗಿದೆ. ಕಳೆದ ಹತ್ತಾರು ವರ್ಷಗಳಿಂದ ಇಲ್ಲಿ ಸರಳ ಸಾಮೂಹಿಕ ವಿವಾಹಗಳು ನಡೆದು ಎಲ್ಲರಿಗೂ ಮಾದರಿಯಾಗಿವೆ
ಎಂದರು.
ಶಾಸಕ ಸಿ.ಎಸ್.ಪುಟ್ಟರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್
ಸೌಮ್ಯ, ತಾಪಂ ಇಓ ಲೋಕೇಶ್ ಮೂರ್ತಿ, ಜಿಪಂ ಮಾಜಿ ಸದಸ್ಯರಾದ ನಾಗಮ್ಮ ಪುಟ್ಟರಾಜು, ಸಿ.ಅಶೋಕ, ಶಾಂತಲಾ
ರಾಮಕೃಷ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಚಲುವರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ
ಯಶ್ವಂತ್ ಕುಮಾರ್, ಜಾತ್ರಾ ಸಮಿತಿ ಮುಖ್ಯಸ್ಥ ಶಿಂಡಭೋಗನಹಳ್ಳಿ ನಾಗಣ್ಣ, ತಾಪಂ ಮಾಜಿ ಸದಸ್ಯ ವಿ.ಎಸ್.ನಿಂಗೇಗೌಡ,
ಗ್ರಾಪಂ ಅಧ್ಯಕ್ಷರಾದ ಹೊನಗಾನಹಳ್ಳಿ ಚಂದ್ರಶೇಖರಯ್ಯ, ಚಿನಕುರಳಿ ಪಾಪಣ್ಣ, ಗುಮ್ಮನಹಳ್ಳಿ ಭವಾನಿ ಸುನೀಲ್,
ಬನ್ನಂಗಾಡಿ ಕೆ.ಎಂ.ಶೃತಿ, ಡಿಂಕಾ ಭಾಗ್ಯಮ್ಮ, ಮುಂತಾದವರು ಇದ್ದರು.
ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಶುಕ್ರವಾರ ನಡೆದ ಸರಳ ಸಾಮೂಹಿಕ
ವಿವಾಹದಲ್ಲಿ ಅವಳಿ ಸಹೋದರಿಯರನ್ನು ವರಿಸಿದ ಅವಳಿ ಸಹೋದರರ ವಿವಾಹ ಪ್ರಮುಖ ಆಕರ್ಷಣೆಯಾಗಿತ್ತು.
ತಾಲೂಕಿನ ಲಕ್ಷ್ಮಿಸಾಗರ ಗ್ರಾಮದ ಡ್ರೈವರ್ ವೃತ್ತಿ ಮಾಡುವ ರಮೇಶ ಮತ್ತು
ಕೃಷಿಕ ರಾಜೇಶ್ ಅವಳಿ ಸಹೋದರರಾಗಿದ್ದು, ಇವರಿಬ್ಬರೂ ಇದೇ ತಾಲೂಕಿನ ಚಲುವ ಅರಸನಕೊಪ್ಪಲು ಗ್ರಾಮದ
ಬಿಕಾಂ ಪದವೀದರರಾದ ಮೋನಿಕಾ ಮತ್ತು ಮೇಘನಾ ಎಂಬ ಅವಳಿ ಸಹೋದರಿಯರನ್ನು ವಿವಾಹವಾದುದ್ದು ಗಮನ ಸೆಳೆಯಿತು.
ಇದೊಂದು ಪ್ರರಸ್ಪರ ಪ್ರೇಮ ವಿವಾಹವೂ ಆಗಿತ್ತು. ಎರಡೂ ಕುಟುಂಬದವರ ಒಪ್ಪಿಗೆ
ಪಡೆದು ಜಾತ್ರೆಯಲ್ಲಿಯೇ ಸರಳವಾಗಿ ವಿವಾಹವಾಗುವ ನಿರ್ಣಯ ಕೈಗೊಂಡ ಅವಳಿ ಜೋಡಿಗಳು ಎಲ್ಲರಿಗೂ ಮಾದರಿಯಾದರು.
ವಿವಾಹ ಕಾರ್ಯಕ್ರಮದಲ್ಲಿ ನವ ವಧುವರದು ಅತ್ಯಂತ ಸಂತೋಷದಲ್ಲಿದ್ದುದೂ ಸಹ ಕಂಡುಬಂತು.
0 ಕಾಮೆಂಟ್‌ಗಳು