ಶಾರುಕ್ ಖಾನ್, ಹನೂರು ಹನೂರು: ದೇಶದಲ್ಲಿ ಅಭಿವೃದ್ಧಿಗೆ ಮತ್ತೊಂದು ಹೆಸರೇ ಬಿಜೆಪಿ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು. ಪಟ್ಟಣದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅವರು ಮಾತನಾಡಿ, ಶ್ರೀ ಮಲೆ ಮಹದೇಶ್ವರರ ಆಶೀರ್ವಾದ ಪಡೆದು ವಿಜಯ ಸಂಕಲ್ಪ ಯಾತ್ರೆ ಪ್ರಾರಂಭಿಸಿದ್ದೇವೆ. ಈ ವಿಜಯ ರಥವು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಚರಿಸುತ್ತದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗಿವೆ. ಕರ್ನಾಟಕ ರಾಜ್ಯ ತಂತ್ರಜ್ಞಾನದಲ್ಲಿ ಮುಂದುವರಿದಿದೆ. ಯಡಿಯುರಪ್ಪ ಹಾಗೂ ಬೊಮ್ಮಾಯಿ ಅವರ ಆಡಳಿತ ಉತ್ತಮ ರೀತಿಯಲ್ಲಿ ಕೆಲಸ ಮಾಡಿದೆ. ದಶಪಥ ರಸ್ತೆಗಳು ನಿರ್ಮಾಣವಾಗಿವೆ. ಆಧುನಿಕ ಭಾರತದ ನಿರ್ಮಾಣ ಕಾರ್ಯದಲ್ಲಿ ಕರ್ನಾಟಕ ರಾಜ್ಯದ ಕೊಡುಗೆ ಅಪಾರವಾಗಿದೆ. ಈ ಮೊದಲು ರೈಲ್ವೆ ಇಲಾಖೆಯಲ್ಲಿದ್ದ ನಷ್ಟವನ್ನು ತಪ್ಪಿಸಿದ್ದೇವೆ. ದೇಶವು ಡಿಟಿಟಲ್ ಇಂಡಿಯಾ ಆಗಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ನಾವು ಸಾಕಷ್ಟು ಅಭಿವೃದ್ಧಿ ಹೊಂದಿದ್ದೇವೆ. ಪ್ರಪಂಚದಲ್ಲಿ ಭಾರತವು ಪ್ರಕಾಶಮಾನವಾಗಿದೆ. ಶಿವಮೊಗ್ಗದಂತಹ ನಗರಗಳಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದ್ದೇವೆ. ಬೆಳಗಾವಿ ರೈಲ್ವೆ ನಿಲ್ದಾಣವನ್ನು ನವಿಕರಿಸಿಸಲಾಗಿದೆ. ಭಾರತ ಸರ್ಕಾರದ ಅಯವ್ಯಯದಲ್ಲಿ ಹೆಚ್ವು ಹಣವನ್ನು ಅಭಿವೃದ್ಧಿಗೆ ಮಿಸಲಿಟ್ಟಿದ್ದೇವೆ. ಎಲ್ಲಾ ಮಕ್ಕಳಿಗೂ ಸ್ಕಾಲರ್‍ಶಿಪ್ ನೀಡಲಾಗುತ್ತಿದೆ. ಹಿಂದುಳಿದ ಜನಾಂಗದ ಅಭಿವೃದ್ಧಿಗೆ ನಾವು ಆದ್ಯತೆ ನೀಡಿದ್ದೇವೆ. 80 ಕೋಟಿ ಜನರಿಗೆ ತಲಾ ಐದು ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಕಿಸಾನ್ ಸಮ್ಮಾನ್ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಹನೂರು ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾಗಲಿ ಅವರನ್ನು ಹೆಚ್ವು ಮತಗಳ ಅಂತರದಿಂದ ಗೆಲ್ಲಿಸಬೇಕು. ಕಾಂಗ್ರೆಸ್‍ನ ಹಣಬಲ,ಜಾತಿ ಬಲಕ್ಕೆ ಮಾರುಹೊಗದೆ ಮತ ನೀಡಿ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಶೋಭ ಕರಂದ್ಲಾಜೆ, ಶ್ರೀನಿವಾಸ್ ಪೂಜಾರಿ, ಅರಗ ಜ್ಞಾನೇಂದ್ರ, ಮುಖಂಡರಾದ ಪರಿಮಳ ನಾಗಪ್ಪ, ಡಾ.ಪ್ರೀತನ್ ನಾಗಪ್ಪ, ಡಾ. ದತ್ತೇಶ್ ಕುಮಾರ್, ವೆಂಕಟೇಶ್, ನಿಶಾಂತ್, ಮಂಡಲದ ಅಧ್ಯಕ್ಷ ಸಿದ್ದಪ್ಪ ಸೇರಿದಂತೆ ಹಲವರು ಇದ್ದರು.
0 ಕಾಮೆಂಟ್‌ಗಳು