ಮಹದೇಶ್ವರ ಬೆಟ್ಟದಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನ

ಶಾರೂಖ್ ಖಾನ್, ಹನೂರು.
ಹನೂರು :ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಜಾತ್ರೆಯು ಬಹಳ ಅದ್ದೂರಿಯಾಗಿ ನಡೆಯುತ್ತಿದಗದು,  ರಾಜ್ಯದ ನಾನಾ ಕಡೆಯಿಂದ ಸಾವಿರಾರು ಭಕ್ತರು ಪಾದಯಾತ್ರಿಗಳು  ಆಗಮಿಸುತ್ತಿದ್ದಾರೆ. 
ಇದನ್ನೆ ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ  ಒಣ ಗಾಂಜದ ವ್ಯಾಪಾರ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ  ಕೊಳ್ಳೇಗಾಲದ ಡಿ ವೈ ಎಸ್ ಪಿ ಸೋಮೆಗೌಡ ನೇತೃತ್ವದಲ್ಲಿ  ಪಿ ಎಸ್ ಐ. ರಾಧ ಹಾಗೂ ಸಿಬ್ಬಂದಿಗಳ ಸಹಯೋಗದಲ್ಲಿ ಅರೋಪಿಯನ್ನು ಹನೂರು ಸಮೀಪದ ವಡಕೆಹಳ್ಳದ ಬಳಿ ಬಂಧಿಸುವಲ್ಲಿ  ಯಶಸ್ವಿಯಾಗಿದ್ದು  ಈತನ ವಿರುದ್ಧ ಕೇಸು  ದಾಖಲಿಸಿ ಚಾಮರಾಜನಗರ ಜಿಲ್ಲೆಯ ಕಾರಗೃಹಕ್ಕೆ ಸೇರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು