ಶಾರುಕ್ ಖಾನ್, ಹನೂರು
ಮಹದೇಶ್ವರ ಬೆಟ್ಟ: ಮಾದಪ್ಪನ ದರ್ಶನಕ್ಕೆ ಬಂದಿದ್ದ ಭಕ್ತನೊಬ್ಬ ಇಂದು ಬೆಳಿಗ್ಗೆ ನಾಗಮಲೆಗೆ ತೆರಳಿ ವಾಪಸ್ ಬರುವಾಗ ದಿಢೀರನೇ ಗುಡ್ಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬೆಂಗಳೂರು ಕೆಂಗೇರಿ ಸಮೀಪ ಮಾರುತಿನಗರದ ಸುಮಾರು 26 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡವನಾಗಿದ್ದು, ಘಟನೆಯಿಂದ ಈತನ ಜತೆಯಲ್ಲಿದ್ದವರು ಆಘಾತಕ್ಕೆ ಒಳಗಾಗಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.
0 ಕಾಮೆಂಟ್‌ಗಳು