ಸಚಿವ ವಿ.ಸೋಮಣ್ಣ ಕಾರು ತಡೆದು ಮನೆ ಕಳೆದುಕೊಂಡವರ ಪ್ರತಿಭಟನೆ : ಪರಿಹಾರ ನೀಡುವಂತೆ ಒತ್ತಾಯ

ವರದಿ : ಶಾರುಕ್ ಖಾನ್ ಹನೂರು .
ಹನೂರು: ರಸ್ತೆ ಅಗಲೀಕರಣದ ವೇಳೆ ಮನೆಗಳನ್ನು ಕಳೆದುಕೊಂಡವರಿಗೆ ಮೂರು ವರ್ಷವಾದರೂ ಪರಿಹಾರ ನೀಡದ ಕಾರಣ ಕಾಮಗೆರೆ ಗ್ರಾಮಸ್ಥರು ಇಂದು ಸಚಿವ ವಿ.ಸೋಮಣ್ಣ ಅವರ ಕಾರು ತಡೆದು ಪ್ರತಿಭಟನೆ ನಡೆಸಿದರು.
ಶಿವರಾತ್ರಿ ಜಾತ್ರೆ ಹಿನ್ನಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತಿದ್ದ ಸಮಯದಲ್ಲಿ ಕಾಮಗೆರೆ ಸಮೀಪದಲ್ಲಿ ಸಚಿವರ ಕಾರು ತಡೆದ ಗ್ರಾಮಸ್ಥರು ಮೂರು ವರ್ಷವಾದರೂ ನಮಗೆ ಪರಿಹಾರ ಸಿಕ್ಕಲ್ಲ ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಸಚಿವರು ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಗೀತಾ ಹುಡೇದ್ ಅವರಿಗೆ ಈ ವಿಚಾರವಾಗಿ ಮನೆ ಕಳೆದುಕೊಂಡ ಜನರಿಗೆ ಕೂಡಲೇಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಇದೇ ಸಂದರ್ಭದಲ್ಲಿ ಕೊಳ್ಳೇಗಾಲದಿಂದ ಹನೂರಿನವರೆಗೆ ನಡೆಯುತ್ತಿರುವ ರಸ್ತೆ ಕಾಮಗಾರಿಯೂ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಸಾರ್ವಜನಿಕರು ಸಚಿವರಿಗೆ ದೂರಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು