ಕಾಂಗ್ರೆಸ್ ಬೆಂಬಲಿತ ಸೌಮ್ಯ ಪುಟ್ಟಸ್ವಾಮಿ ಭಾರತಿನಗರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಆಯ್ಕೆ

ಸಂತೋಷ ಟಿ.ಬಿ.ಮದ್ದೂರು
ಮದ್ದೂರು ತಾಲ್ಲೂಕಿನ ಭಾರತಿನಗರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತರಾದ ಸೌಮ್ಯ ಪುಟ್ಟಸ್ವಾಮಿ  ಆಯ್ಕೆಯಾಗಿದ್ದಾರೆ..
ಈ ಹಿಂದೆ ಅಧ್ಯಕ್ಷರಾಗಿದ್ದ ವಕ್ರತುಂಡ ವೆಂಕಟೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.    ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಸೌಮ್ಯ ಪುಟ್ಟಸ್ವಾಮಿ ಅವರು 16 ಮತಗಳನ್ನು ಪಡೆದುಕೊಂಡರೆ,  ಪ್ರತಿಸ್ಪರ್ಧಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಾಲಾ ಕುಮಾರ್ 8 ಮತಗಳ ಪಡೆದುಕೊಂಡರು.
ಸೌಮ್ಯಾ ಪುಟ್ಟಸ್ವಾಮಿ 8 ಮತಗಳ ಅಂತರದಿಂದ ಗೆಲುವು ಸಾಧಿಸಿ ಭಾರತಿನಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಅಧಿಕಾರ ಚುಕ್ಕಾಣಿ ಹಿಡಿದರು.
ನೂತನ ಅಧ್ಯಕ್ಷೆ ಸೌಮ್ಯ ಪುಟ್ಟಸ್ವಾಮಿ ಮಾತನಾಡಿ, ನನ್ನ ಗೆಲುವಿಗೆ ಮತ ನೀಡಿದ ಪ್ರತಿಯೊಬ್ಬ ಸದಸ್ಯರಿಗೂ ಧನ್ಯವಾದ ತಿಳಿಸುತ್ತಾ, ಭಾರತಿನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರ ಕುಂದು ಕೊರತೆಗಳ ನಿವಾರಣೆಗಾಗಿ ಹಾಗೂ ಮೂಲಭೂತ  ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
 ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಬಿಇಟಿ ಟ್ರಸ್ಟ್  ಕಾರ್ಯ ನಿರ್ವಾಹಕ ಅಧಿಕಾರಿ ಅಶಯ್ ಮಧು ಮಾದೇಗೌಡ ಅವರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. 
ಉಪಾಧ್ಯಕ್ಷೆ ಮಹಾದೇವಮ್ಮ ಚೌಡಯ್ಯ, ಗ್ರಾಪಂ ಮಾಜಿ ಅಧ್ಯಕ್ಷ  ರವಿಚಂದ್ರ, ವಕ್ರತುಂಡ ವೆಂಕಟೇಶ್, ಸದಸ್ಯರಾದ ಶ್ರೀನಿವಾಸ್, ಪುಟ್ಟರಾಮು, ವಿನಯ್, ಶ್ರೀನಿವಾಸ್, ಮಿಥುನ್, ಮಣಿಗರೆ ರಾಮಚಂದ್ರ, ಗುಡಿಗರೆ ಮಂಜುನಾಥ್, ಸೌಭಾಗ್ಯಮ್ಮ ಕಬ್ಬಾಳಯ್ಯ, ಕೌಶಲ್ಯ, ಭಾರತಿ, ಗೌರಮ್ಮ, ಸುವರ್ಣ, ಪಿಡಿಓ ಸುಧಾ ಮುಂತಾದವರು ಉಪಸ್ಥಿತರಿದ್ದರು..




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು