ಅಗಲಿದ ಗೆಳೆಯನಿಗೆ ಅಂತಿಮ ನಮನ : ಪ.ಮಲ್ಲೇಶ್ ನಿಧನಕ್ಕೆ ಕಂಬನಿ ಮಿಡಿದ ಸಿದ್ದರಾಮಯ್ಯ

ಮೈಸೂರು: ತಮ್ಮ ಧೀರ್ಘ ಕಾಲದ ಆತ್ಮೀಯ ಸ್ನೇಹಿತ ಪ.ಮಲ್ಲೇಶ್ ಅವರ ಅಂತಿಮ ದರ್ಶನ ಪಡೆದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಂಬನಿ ಮಿಡಿದರು.
ಬೆಂಗಳೂರಿನಿಂದ ಶುಕ್ರವಾರ ರಾಮಕೃಷ್ಣ ನಗರದಲ್ಲಿರುವ ಪ.ಮಲ್ಲೇಶ್ ಅವರ ನಿವಾಸಕ್ಕೆ  ನೇರವಾಗಿ ಆಗಮಿಸಿದ ಸಿದ್ಧರಾಮಯ್ಯ, ಇಹಲೋಕ ತ್ಯಜಿಸಿದ ಸ್ನೇಹಿತನ ಮೃತದೇಹ ಕಂಡು ಮಮ್ಮಲ ಮರುಗಿದರು.
ಆತ್ಮೀಯ ಸ್ನೇಹಿತನೊಂದಿಗಿನ ಒಡನಾಟ ನೆನೆದು ಬಾವುಕರಾದರು. ಬಳಿಕ ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ಕೆಲ ಸಮಯ ಅವರ ಮನೆಯಲ್ಲೇ ಕುಳಿತು ಸಾಹಿತಿಗಳು, ಹೋರಾಟಗಾರರೊಂದಿಗೆ ಪ.ಮಲ್ಲೇಶ್ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು. ಮಲ್ಲೇಶ್ ನಿಧನದಿಂದ ಮನಸ್ಸಿಗೆ ಆಘಾತವಾಗಿದೆ ಎಂದು ದುಖಿಃಸಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು