ಹೊಟ್ಟೆನೋವು ತಾಳಲಾರದೆ ವಿಷ ಸೇವಿಸಿ ಯುವಕ ಆತ್ಮಹತ್ಯೆ
ಜನವರಿ 19, 2023
ಟಿ.ಬಿ.ಸಂತೋಷ,
ಮದ್ದೂರು
ಮದ್ದೂರು : ಹೊಟ್ಟೆನೋವು
ತಾಳಲಾರದೆ ವ್ಯಕ್ತಿಯೊಬ್ಬರು ಮದ್ಯದಲ್ಲಿ ವಿಷ ಬೆರಸಿ
ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅರೆಚಾಕನಹಳ್ಳಿ ಗ್ರಾಮದಲ್ಲಿ
ಜರುಗಿದೆ.
ಗ್ರಾಮದ ಹನುಮಂತರಾವ್
ಎಂಬವರ ಮಗನಾದ ಕುಮಾರ್ (46) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಕಳೆದ ಹಲವಾರು ದಿನಗಳಿಂದ ಅನಾರೋಗ್ಯ
ಸಮಸ್ಯೆಯಿಂದ ಬಳಲುತ್ತಿದ್ದನು. ತೀವ್ರ ಹೊಟ್ಟೆನೋವಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಮದ್ಯಪಾನ ಮಾಡುವ ವೇಳೆ ವಿಷ ಬೆರಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೂಡಲೇ ಈತನನ್ನು ಕೆ.ಎಂ
ದೊಡ್ಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ..
ಮೃತನಿಗೆ ಪತ್ನಿ ಇಬ್ಬರು ಗಂಡು ಮಕ್ಕಳಿದ್ದು, ಕೆ.ಎಂ.ದೊಡ್ಡಿ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 ಕಾಮೆಂಟ್‌ಗಳು