ಹಾಸನ:
ಮೊಬೈಲ್ ಫೋನ್ ಮತ್ತುಮಾದಕ ವಸ್ತುಗಳ ಬಳಕೆ ಆರೋಪ ಹಿನ್ನೆಲೆ ಇಂದು
ಬೆಳ್ಳಂ ಬೆಳಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಹಾಸನ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ ಕೈದಿಗಳ ಬಳಿ
ಮಾಧಕ ವಸ್ತುಗಳು ಮತ್ತು ಮೊಬೈಲ್ ಫೋನ್ ಇರುವ ಬಗ್ಗೆ ಪರಿಶೀಲನೆ ನಡೆಸಿದೆ. ಎಎಸ್ಪಿತಮ್ಮಯ್ಯ,
ಡಿವೈಎಸ್ಪಿಉದಯ್ಭಾಸ್ಕರ್ನೇತೃತ್ವದಲ್ಲಿದಾಳಿ ೮೦ ಜನರ ಪೊಲೀಸ್ ತಂಡ ದಾಳಿ ನಡೆಸಿದ್ದು,
ಜೈಲಿನ ಮೂಲೆ ಮೂಲೆಗಳಲ್ಲಿ ತಪಾಸಣೆ ನಡೆಸಿದೆ ಎಂದು ವರದಿಯಾಗಿದೆ. ಜೈಲಿನೊಳಗೆವಿಚಾರಣಾಧೀನಕೈದಿಗಳಕೊಠಡಿಗಳನ್ನುವಿಶೇಷವಾಗಿ ಪರಿಶೀಲನೆ ನಡೆಸಲಾಗಿದ್ದು, ಮಾದಕ
ವಸ್ತುಗಳು ಮತ್ತು ಮೊಬೈಲ್ ಫೋನ್ ಬಳಕೆ ಇಲ್ಲಿಯೇ ಹೆಚ್ಚಾಗಿತ್ತು ಎನ್ನಲಾಗಿದೆ.
0 ಕಾಮೆಂಟ್‌ಗಳು