ಪುಣ್ಯಾಮೃತಗೆ ಮಿಸ್‌ ಟೀನ್‌ ಸೌತ್‌ ಇಂಡಿಯಾ ಪಟ್ಟ

ಮೈಸೂರು: ನಗರದಲ್ಲಿ ಇತ್ತೀಚೆಗೆ ನಡೆದ ಯಶ್ಇಂಟರ್ನ್ಯಾಷನಲ್ಫ್ಯಾಷನ್ವೀಕ್ ಸೌಂದರ್ಯ ಸ್ಪರ್ಧೆಯಲ್ಲಿ ಮೈಸೂರಿನ ಬಿ.ಎಸ್.ಪುಣ್ಯಾಮೃತಗೆ ಮಿಸ್ಟೀನ್ಸೌತ್ಇಂಡಿಯಾ 2022 ಪಟ್ಟ ದೊರೆತಿದೆ.
ಒಟ್ಟು ಸ್ಪರ್ಧಿಗಳು ಸ್ಪರ್ಧೆಗೆ ಆಯ್ಕೆಯಾಗಿದ್ದರು. ಪೈಕಿ ಕೇವಲ ಕಳೆದೊಂದು ವರ್ಷದಿಂದ ಮಾಡೆಲಿಂಗ್ನಲ್ಲಿ ತೊಡಗಿರುವ, 5.8 ಅಡಿ ಎತ್ತರ ಇರುವ ಪುಣ್ಯಾಮೃತ ಎಲ್ಲ ಸುತ್ತಿನಲ್ಲೂ ಉತ್ತಮ ಪ್ರದರ್ಶನ ನೀಡಿ, ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ. ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗುವ ಮುನ್ನ ಪುಣ್ಯಾಮೃತ ಮಿಸ್ಟೀನ್ಮೈಸೂರು ಮತ್ತು ಮಿಸ್ಟೀನ್ಇಂಡಿಯಾ 2022 ಸೇರಿದಂತೆ ಎರಡು ಸ್ಪರ್ಧೆಗಳಲ್ಲಿ ರನ್ನರ್ಅಪ್ಆಗಿ ಹಾಗೂ ಎರಡು ಸ್ಪರ್ಧೆಗಳಲ್ಲಿ ವಿಜೇತರಾಗಿ ಹೊರ ಹೊಮ್ಮಿದ್ದರು.
ತಮ್ಮ ಗೆಲುವಿನ ಬಗ್ಗೆ ಮಾತನಾಡಿದ ಪುಣ್ಯಾಮೃತ, ʻನನ್ನ ಹೆಸರು ಘೋಷಣೆಯಾದಾಗ ಒಂದು ಕ್ಷಣ ನನಗೆ ಏನೂ ತೋಚಲಿಲ್ಲ. ಏನು ಮಾಡಬೇಕೆಂದು ತಿಳಿಯಲಿಲ್ಲ. ಇದು ಕಠಿಣ ಸ್ಪರ್ಧೆ. ಏಕೆಂದರೆ ನನ್ನೊಂದಿಗೆ ಸ್ಪರ್ಧಿಸಿದ್ದ ಎಲ್ಲರೂ ಈಗಾಗಲೇ ರಾಷ್ಟ್ರಮಟ್ಟದ ವಿವಿಧ ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದವರು. ಎಲ್ಲರೂ ಪ್ರತಿಭಾವಂತರುʼ ಎಂದು ತಮ್ಮ ಅನುಭವ ಹಂಚಿಕೊಂಡರು.
ಇನ್ನೂ ಉತ್ತಮ ಅವಕಾಶಗಳಿಗಾಗಿ ನಾನು ಎದುರುನೋಡುತ್ತಿದ್ದೇನೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ತೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದು ನನ್ನ ಆಸೆ. ಅದರೊಂದಿಗೆ ನನಗೆ ಎಂಬಿಎ ವ್ಯಾಸಂಗ ಮಾಡುವ ಆಸೆಯೂ ಇದೆ, ನಟನೆ ಮಾಡುವ ಆಸೆ ಸಹ ಇದೆ ಎಂದು ಪುಣ್ಯಾಮೃತ ತಿಳಿಸಿದರು. ಪ್ರಸ್ತುತ ಅವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಕಾಂ ಮೊದಲ ವರ್ಷ ವ್ಯಾಸಂಗ ಮಾಡುತ್ತಿದ್ದು, ಕೆ.ಶೇಖರ್ಹಾಗೂ ಕೆ.ರತ್ನಾ ಅವರ ಮಗಳು ಆಗಿದ್ದಾರೆ.
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು