ಆನೆ ದಾಳಿಗೆ ಗಾಯಗೊಂಡು ಆಸ್ಪತ್ರೆ ಸೇರಿದ್ದ ರೈತ ಸಾವು
ಜನವರಿ 02, 2023
ಶಾರುಕ್ ಖಾನ್,
ಹನೂರು
ಹನೂರು:
ತಾಲೂಕಿನ ಒಡೆಯರಪಾಳ್ಯ ಸಮೀಪದ ಕತ್ತೆಕಾಲುಪೋಡು ಗ್ರಾಮದ ಜಮೀನಿನಲ್ಲಿ ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ರೈತ ಮೃತಪಟ್ಟಿದ್ದಾರೆ.
ಹುತ್ತೂರು
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತ್ತೆಕಾಲು ಪೋಡಿನ ಮಾದೇಶ್ (50) ಮೃತರು. ಇವರಿಗೆ ದೃಷ್ಟಿ ದೋಷವಿದ್ದು, ಡಿ.25ರಂದು ಜಮೀನಿನಲ್ಲಿ
ಒಬ್ಬರೇ ಇದ್ದರು. ಈ ವೇಳೆ ಕಾಡಾನೆ
ನಡೆಸಿತ್ತು. ಪರಿಣಾಮ ಕೈ,ಕಾಲು ಮುರಿತಕ್ಕೊಳಗಾಗಿ
ಸ್ಥಳದಲ್ಲೇ ಅಸ್ವಸ್ಥಗೊಂಡು ನರಳಾಡುತ್ತಿದ್ದರು. ಇದನ್ನು ಗಮನಿಸಿದ ದನಗಾಹಿಗಳು ಕುಟುಂಬಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪಿ.ಜಿ.ಪಾಳ್ಯಪ್ರಾಥಮಿಕ
ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ
ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಆದರೂ ಚಿಕಿತ್ಸೆಗೆಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾರೆ.
ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 ಕಾಮೆಂಟ್‌ಗಳು