ಮೈಸೂರು ನಗರದಿಂದ ೬ ತಿಂಗಳ ಕಾಲ ನಾಲ್ವರು ಕುಖ್ಯಾತ ರೌಡಿಗಳ ಗಡಿಪಾರು

ಬಿ.ರಮೇಶ್‌ 
ಮೈಸೂರು ನಗರ ಪೊಲೀಸ್‌ ಆಯುಕ್ತ

ಯರಗನಹಳ್ಳಿ ಸತೀಶ-ಚಾಮರಾಜನಗರ ಜಿಲ್ಲೆಗೆ
ಮಧುಸೂದನ್ @ ಮಧು -ಹಾಸನ ಜಿಲ್ಲೆಗೆ
ಗೆAಡೆ ಮಂಜ-ಕೊಡಗು ಜಿಲ್ಲೆಗೆ
ಕುಮಾರ@
ಕಪಾಲಿ-ಚಿತ್ರದುರ್ಗ ಜಿಲ್ಲೆಗೆ

ಮೈಸೂರು: ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಿ, ಅನೇಕ ಹಲ್ಲೆಗಳು, ಕೊಲೆ, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಶಾಮೀಲಾಗಿ ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡುತ್ತಿದ್ದ ನಾಲ್ವರು ಕುಖ್ಯಾತ ರೌಡಿ ಶೀಟರ್‌ಗಳನ್ನು ಮೈಸೂರು ನಗರದಿಂದ ೬ ತಿಂಗಳ ಕಾಲ ಗಡಿಪಾರು ಮಾಡಿರುವುದಾಗಿ ಮೈಸೂರು ನಗರ ಪೊಲೀಸ್‌ ಆಯುಕ್ತ ಬಿ.ರಮೇಶ್‌ ಪ್ರಕರಣೆಯಲ್ಲಿ ತಿಳಿಸಿದ್ದಾರೆ.
ಸತೀಶ್ ಬಿನ್ ಲೇ. ಸಿದ್ದರಾಮು, ಮಧುಸೂದನ್ @ ಮಧು, ಗೆAಡೆ ಮಂಜ, ಕುಮಾರ@ಕಪಾಲಿ ಗಡಿಪಾರಾಗಿರುವ ರೌಡಿಗಳು.
ಯರಗನಹಳ್ಳಿ ಬಡಾವಣೆ ನಿವಾಸಿಯಾದ ಸತೀಶ್ ಎಂಬುವನ ಮೇಲೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್‌ ತೆರೆಯಲಾಗಿತ್ತು. ಈತನ ವಿರುದ್ದ ಆಲನಹಳ್ಳಿ, ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈತನನನ್ನು ಮೈಸೂರು ನಗರದಿಂದ ಮುಂದಿನ ತಿಂಗಳ ಅವಧಿಗೆ ಚಾಮರಾಜನಗರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
ಮಧುಸೂದನ್@ಮಧು : ನಗರದ ಲಷ್ಕರ್ ಮೊಹಲ್ಲಾ ವೀರನಗೆರೆ, ವಾಟರ್ ಸಪ್ಲೆöÊ ಕ್ವಾಟ್ರಸ್ ವಾಸಿ ಮಧುಸೂದನ್@ಮಧು ಆರ್.ಎಸ್@ಪಾರ್ಟಿ ವಿರುದ್ಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್‌ ತೆರೆಯಲಾಗಿದ್ದು, ಈತನ ವಿರುದ್ಧ ಲಷ್ಕರ್,
ವಿದ್ಯಾರಣ್ಯಪುರಂ, ಉದಯಗಿರಿ ಮತ್ತು ಆಲನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಒಟ್ಟು ಪ್ರಕರಣಗಳು ದಾಖಲಾಗಿವೆ. ಈತನನ್ನು ಮೈಸೂರು ನಗರದಿಂದ ಮುAದಿನ ತಿಂಗಳ ಅವಧಿವರೆಗೆ ಹಾಸನ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
ಮಂಜುನಾಥ @ ಗೆAಡೆ ಮಂಜ: ನಗರದ ನಜರಬಾದ್ ಸಿದ್ದಾಪ್ಪಾಜಿ ದೇವಸ್ಥಾನದ ಹತ್ತಿರದ ಇಟ್ಟಿಗೆಗೂಡು ವಾಸಿಯಾದ ಗೆAಡೆ ಮಂಜನ ವಿರುದ್ಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್‌ ತೆರೆಯಲಾಗಿದೆ. ಈತನ ವಿರುದ್ಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಒಟ್ಟು ಪ್ರಕರಣಗಳು ದಾಖಲಾಗಿವೆ.
ಈತನನ್ನು ಮೈಸೂರು ನಗರದಿಂದ ಮುAದಿನ ತಿಂಗಳ ಅವಧಿಗೆ ಕೊಡಗು ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
ಕುಮಾರ@ಕಪಾಲಿ: ಈತ ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯ ಮುನಿಸ್ವಾಮಿನಗರ ನಿವಾಸಿ ಈತನ ವಿರುದ್ಧವೂ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್‌ ತೆರೆಯಲಾಗಿದ್ದು, ಈತನ ವಿರುದ್ಧ ಕೃಷ್ಣರಾಜ ಮತ್ತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗಳಲ್ಲಿ ಒಟ್ಟು ೭ ಪ್ರಕರಣಗಳು ದಾಖಲಾಗಿವೆ. ೨ ಎನ್.ಸಿ.ಆರ್ ಪ್ರಕರಣಗಳು ಮತ್ತು ಭದ್ರತಾ ಪ್ರಕರಣಗಳು ಇದ್ದು, ಸೂಕ್ತ ತಿಳುವಳಿಕೆ ನೀಡಿ ಮುಕ್ತಾಯಗೊಳಿಸಲಾಗಿತ್ತು.
ಈತನನ್ನು ಮೈಸೂರು ನಗರದಿಂದ ೬ ತಿಂಗಳ ಕಾಲ ಚಿತ್ರದುರ್ಗ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
ನಾಲ್ವರು ರೌಡಿಗಳೂ ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿ ನಂತರ ಷರತ್ತುಬದ್ದ ಜಾಮೀನು ಪಡೆದು ಕಾರಾಗೃಹದಿಂದ ಹೊರ ಬಂದರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕಾರಣ ಇವರನ್ನು ೬ ತಿಂಗಳ ಕಾಲ ಗಡಿಪಾರು ಮಾಡಲಾಗಿದೆ ಎಂದು ಮೈಸೂರು ನಗರ ಪೊಲೀಸ್‌ ಆಯುಕ್ತ ಬಿ.ರಮೇಶ್‌ ತಿಳಿಸಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು