ಮೈಸೂರು ಡಯಾಸಿಸ್ ಸೊಸೈಟಿ ವಿರುದ್ಧ ಅಪಪ್ರಚಾರಕ್ಕೆ ಕಿವಿಗೊಡದಂತೆ ಕಾರ್ಯದರ್ಶಿ ಮನವಿ
ಜನವರಿ 05, 2023
ಮೈಸೂರು : ನಗರದ ಮದರ್ ತೇರೆಸಾ ರಸ್ತೆಯಲ್ಲಿರುವ (ಸಬರ್ಬನ್ ಬಸ್ ನಿಲ್ದಾಣದ ಹತ್ತಿರ) ವೈಟ್ ಹೌಸ್ ಎಂದು ಕರೆಯಲ್ಪಡುವ ಹಳೆಯ ಬಿಷಪ್ ಹೌಸ್ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಅಪಪ್ರಚಾರ ನಡೆಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಕಿವಿಗೊಡದಂತೆ ಸೊಸೈಟಿ ಕಾರ್ಯದರ್ಶಿ ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸದರಿ ಕಟ್ಟಡ ಮೈಸೂರು ಡಯಾಸಿಸನ್ ಸೊಸೈಟಿಯ ಸ್ವತ್ತಾಗಿದ್ದು, ಈ ಹಿಂದೆ ಧರ್ಮಾಧ್ಯಕ್ಷರುಗಳ ನಿವಾಸವಾಗಿತ್ತು. (ಬಿಷಪ್ ಹೌಸ್) ಜತೆಗೆ ಧರ್ಮಕ್ಷೇತ್ರದ ಕಛೇರಿಗಾಗಿ ಉಪಯೋಗಿಸಲಾಗುತ್ತಿತ್ತು. ಸದರಿ ಕಟ್ಟಡವು ಹಳೆಯದಾಗಿದ್ದು, ಡಯಾಸಿಸ್‍ನ ಪ್ರಸ್ತುತ ಆಡಳಿತ ಕೆಲಸಕ್ಕೆ ಸಾಕಾಗದೆ ಇವರ ಕಾರಣ ಧರ್ಮಾಧ್ಯಕ್ಷರ ನಿವಾಸ ಹಾಗೂ ಕಛೇರಿಯನ್ನು ಬನ್ನಿಮಂಟದ ನೆಲ್ಸನ್ ಮಂಡೆಲಾ ರಸ್ತೆಯಲ್ಲಿರುವ ನೂತನ ಸ್ಥಳ ಹಾಗೂ ಕಟ್ಟಡಕ್ಕೆ ದಿನಾಂಕ ವರ್ಗಾಯಿಸಲಾಗಿದೆ. ಜತೆಗೆ ಹಳೆಯ ಬಿಷಪ್ ಹೌಸ್ ಸ್ಥಳವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿ ಅದರ ಆದಾಯವನ್ನು ಬಡವರಿಗೆ ದಾನ ಧರ್ಮ ಮಾಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಹಳೆಯ ಬಿಷಪ್ ಹೌಸ್ ಕಟ್ಟಡವನ್ನು ವಸತಿಯ ಉದ್ದೇಶದಿಂದ ವಾಣಿಜ್ಯ ಉದ್ದೇಶಕ್ಕೆ ಬಳಸಲು ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿಯನ್ನು ಪಡೆಯಲಾಗಿದೆ. ಹೀಗಾಗಿ ಈ ಹಳೆಯ ಕಟ್ಟಡದ ರಿಪೇರಿ ಕಾರ್ಯ ನಡೆಯುವ ಸಂದರ್ಭದಲ್ಲಿ ಬುಧವಾರ ದಿನಾಂಕ 04-01-2022 ರಂದು ಸುಮಾರು 12 ಗಂಟೆಗೆ ಸ್ಟೀವನ್, ಸುಜಿತ್ ಹಾಗೂ ಅವರೊಂದಿಗೆ ಬೆನ್ನ, ಎಲ್ವಿನ್, ಮರಿಯ ಫ್ರಾನ್ಸಿಸ್, ಮರಿಜೋಸೆಫ್, ಅಬೋಸ್ ಹಾಗೂ ಇತರರು ಅಕ್ರಮವಾಗಿ ಪ್ರವೇಶಿಸಿ ಅಲ್ಲಿ ದುರಸ್ಥಿ ಕೆಲಸ ಕಾಮಗಾರಿ ಮಾಡುವವರನ್ನು ಅವಾಚ್ಯ ಶಬ್ದಗಳಿಂದ ಬೆದರಿಸಿ ಕಾಮಗಾರಿಯನ್ನು ನಿಲ್ಲಿಸುವಂತೆ ತಡೆದಿರುತ್ತಾರೆ. ಸದರಿ ಹಳೆಯ ಬಿಷಪ್ ಹೌಸ್ ಹಿಂಬದಿ ಇರುವ ಖಾಲಿ ಜಾಗದಲ್ಲಿ ರಾತ್ರಿ ಹೊತ್ತಿನಲ್ಲಿ ರಸ್ತೆಯ ಬದಿಯಲ್ಲಿ ಮಲಗುವ ಬಡ ಹಾಗೂ ನಿರ್ಗತಿಕ ಗಂಡಸರಿಗೆ ಉಚಿತ ಬೆಡ್ ಹಾಗೂ ವಾμïರೂಮ್ ಸೌಕರ್ಯದೊಂದಿಗೆ ನೈಟ್ μÉಲ್ಡರ್ ವ್ಯವಸ್ಥೆಯನ್ನು ನೀಡುವ ಸಾಮಾಜಿಕ ಸೇವೆಗಾಗಿ ಕಾಮಗಾರಿ ನಡೆಯುತ್ತಿದ್ದನ್ನು ಮೇಲ್ಕಂಡವರು ತಡೆದಿರುತ್ತಾರೆ. ಜತೆಗೆ ಮೈಸೂರು ಡಯಾಸಿಸ್ ಸೊಸೈಟಿ ವಿರುದ್ಧ ಇಲ್ಲ ಸಲ್ಲದ ಅಪಪ್ರಚಾರಕ್ಕೆ ತೊಡಗಿದ್ದು ಸಾರ್ವಜನಿಕರು ಇದಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ. ಅಪಪ್ರಚಾರ ನಡೆಸುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ ಎಂದೂ ಸಹ ಅವರು ಹೇಳಿದ್ದಾರೆ.
0 ಕಾಮೆಂಟ್‌ಗಳು