ಎಚ್‍ಡಿಕೆ, ಎಚ್ವಿ ವಿರುದ್ಧ ಹರಿಹಾಂಯ್ದ ಎಸ್.ಟಿ.ಸೋಮಶೇಖರ್
ಮೈಸೂರು : ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಿಧಾನಸೌಧವನ್ನು ಮಾಲ್‍ಗೆ ಹೋಲಿಸಿದ್ದು ತಪ್ಪು, ಅವರೂ ಮಂತ್ರಿಯಾಗಿ ವಿಧಾನಸೌಧದಲ್ಲೇ ಆಡಳಿತ ನಡೆಸಿದ್ದಾರೆ. ಆಗ ಮಾಲ್ ಆಗಿತ್ತಾ ಮಾರ್ಕೆಟ್ ಆಗಿತ್ತಾ? ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಎಚ್.ವಿಶ್ವನಾಥ್ ವಿರುದ್ಧ ಹರಿಹಾಯ್ದರು.
ಮೈಸೂರಿನಲ್ಲಿ ಶುಕ್ರವಾರ ಬಿಜೆಪಿ ಕಚೇರಿ ಎದುರು ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಸರಿಯಾಗಿ ಆಡಳಿತ ನಡೆಸಿದ್ರೆ ನಾವ್ಯಾಕೆ ಪಕ್ಷ ಬಿಟ್ಟು ಬಾಂಬೆಗೆ ಹೋಗಬೇಕಿತ್ತು. ಅವರು ಫೈವ್ ಸ್ಟ್ರಾರ್ ಹೋಟೆಲ್‍ನಲ್ಲಿ ಕುಳಿತು ಆಡಳಿತ ನಡೆಸಿದ್ರೆ ಆಗುತ್ತಾ.. ಕುಣಿಲಾರದವಳು ನೆಲ ಡೊಂಕು ಅಂದ್ಲಂತೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಟೀಕೆಗಳು ಶುರುವಾಗಿವೆ ಎಂದು ಎಚ್‍ಡಿಕೆಗೆ ಛೇಡಿಸಿ, ಸ್ಯಾಂಟ್ರೋ ರವಿ ಯಾರೆಂದು ನನಗೆ ಗೊತ್ತಿಲ್ಲ ಎಂದರು.
ವಿಧಾನಸೌದಕ್ಕೆ ಮಂಡ್ಯದ ಎಂಜಿನಿಯರ್ ಒಬ್ಬರು ಕೊಂಡೊಯ್ದಿದ್ದ ಲಕ್ಷಾಂತರ ರೂ. ಹಣದ ಬಗ್ಗೆ ಮಾತನಾಡಿದ ಎಸ್.ಟಿ.ಸೋಮಶೇಖರ್ ಚಾಮರಾಜನಗರದ ಶಾಸಕ ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ 25 ಲಕ್ಷ ನಗದು ಸಿಕ್ಕಿತ್ತು ಅದೇನು ಮಾಡಿದ್ರಿ? ತನಿಖೆ ಮಾಡಿ ಮುಚ್ಚಿ ಹಾಕಿದ್ರಿ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಕೆ ಮಾಡಿದ ವಿಚಾರವಾಗಿ ಮಾತನಾಡಿ, ಕರೋನ ಬಂದ ಮೇಲೆ ಸಿದ್ದರಾಮಯ್ಯ ಏನೇನೋ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.
0 ಕಾಮೆಂಟ್‌ಗಳು