ಮಲೇ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಹೊರಟ ಯಾತ್ರಿಕರಿಗೆ ಎಸ್.ಪಿ. ಸ್ವಾಮಿ ಧನ ಸಹಾಯ
ಜನವರಿ 26, 2023
ಟಿ.ಬಿ.ಸಂತೋಷ, ಮದ್ದೂರು ಮದ್ದೂರು: ತಾಲೂಕಿನ ಗೆಜ್ಜಲಗೆರೆ ಗ್ರಾಮಸ್ಥರು ಶ್ರೀ ಮಲೇ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಆರಂಭಿಸಿದ್ದು, ಯಾತ್ರಿಕರಿಗೆ ಮನ್ ಮುಲ್ ನಿರ್ದೇಶಕ ಬಿಜೆಪಿ ಮುಖಂಡ ಎಸ್.ಪಿ. ಸ್ವಾಮಿ ಅವರು ಆರ್ಥಿಕ ನೆರೆವು ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಸ್ವಾಮಿ ಕೃಪೆಗೆ ಭಾಗಿಯಾಗಲು ಕಾಲ್ನಡಿಗೆಯಲ್ಲಿ ಪಾದಯಾತ್ರೆಗೆ ತೆರೆಳುತ್ತಿರುವುದು ಉತ್ತಮ ಕಾರ್ಯವಾಗಿದ್ದು ತಾಲ್ಲೂಕಿನ ಶ್ರೇಯಾಭಿವೃದ್ಧಿಗೆ ಒಳಿತಾಗಲೆಂದು ಮಲೇ ಮಹದೇಶ್ವರ ಸ್ವಾಮಿಯನ್ನು ಪ್ರಾರ್ಥಿಸಿ ಸುರಕ್ಷಿತವಾಗಿ ಹೋಗಿ ಸ್ವಾಮಿಯ ಕೃಪೆಗೆ ಪಾತ್ರರಾಗಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು. ಕರಡಕೆರೆ ಹನುಮಂತೇಗೌಡ, ಜಿಪಂ ಮಾಜಿ ಸದಸ್ಯ ಬೋರಯ್ಯ, ಮರಿ ಹೆಗ್ಗಡೆ, ಗ್ರಾಪಂ ಮಾಜಿ ಸದಸ್ಯ ಜೆಸಿಬಿ ಶಿವಲಿಂಗಯ್ಯ ಮುಂತಾದವರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು